»   » ವಿಷ್ಣು, ಅಶ್ವತ್ಥ್ ಹೆಸರಿನಲ್ಲಿ ಪ್ರಶಸ್ತಿ: ಮುಖ್ಯಮಂತ್ರಿ

ವಿಷ್ಣು, ಅಶ್ವತ್ಥ್ ಹೆಸರಿನಲ್ಲಿ ಪ್ರಶಸ್ತಿ: ಮುಖ್ಯಮಂತ್ರಿ

Posted By: **ವಿಕ ಸುದ್ದಿಲೋಕ
Subscribe to Filmibeat Kannada
ಮಲೆನಾಡು ಹೆಬ್ಬಾಗಿಲು ಶಿವಮೊಗ್ಗದ ನೆಹರೂ ಕ್ರೀಡಾಂಗಣದಲ್ಲಿ ಕಿಕ್ಕಿರಿದು ನೆರೆದಿದ್ದ ಸಾವಿರಾರು ಪ್ರೇಕ್ಷಕರ ನಡುವೆ 2007-08ನೇ ಸಾಲಿನ ಕನ್ನಡಚಲನಚಿತ್ರ ಪ್ರಶಸ್ತಿ ಪ್ರದಾನ ಮಾಡಲಾಯಿತು. ಗೋಧೂಳಿ ಸಮಯಕ್ಕೆ ಸರಿಯಾಗಿ ವಿದ್ಯುತ್ ದೀಪಗಳಿಂದ ಜಗಮಗಿಸುವ ಬೃಹತ್ ವೇದಿಕೆ ಮೇಲೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕಲಾವಿದರಿಗೆ ಪ್ರಶಸ್ತಿ ಪ್ರದಾನ ಮಾಡಿದರು.

ಡಾ. ವಿಷ್ಣುವರ್ಧನ್ ಅವರಿಗೆ ಘೋಷಿಸಲಾದ ಡಾ. ರಾಜ್‌ಕುಮಾರ್ ಪ್ರಶಸ್ತಿಯನ್ನು ಡಾ. ಭಾರತಿ ವಿಷ್ಣುವರ್ಧನ್ ಸ್ವೀಕರಿಸಿದರು. ಪಾರ್ವತಮ್ಮ ರಾಜ್ ಕುಮಾರ್ ಅವರಿಗೆ ಜೀವಿತಾವ ಧಿ ವಿಶಿಷ್ಟ ಕೊಡುಗೆ ಪ್ರಶಸ್ತಿ, ಅತ್ಯುತ್ತಮ ನಟ ಸುಬ್ಬಯ್ಯ ನಾಯ್ಡು ಪ್ರಶಸ್ತಿ ಪುನೀತ್ ರಾಜ್‌ಕುಮಾರ್, ಅತ್ಯುತ್ತಮ ನಟಿ ಉಮಾಶ್ರೀ, ಅತ್ಯುತ್ತಮ ಸಂಗೀತ ನಿರ್ದೇಶಕ ಸಾಧು ಕೋಕಿಲಾ, ಅತ್ಯುತ್ತಮ ಹಿನ್ನೆಲೆ ಗಾಯಕಿ ವಾಣಿ, ಅತ್ಯುತ್ತಮ ಕಥಾ ಲೇಖಕ ಪ್ರಶಸ್ತಿಯನ್ನು ಪಿ.ಲಂಕೇಶ್ ಪರವಾಗಿ ಕವಿತಾ ಲಂಕೇಶ್ ಸ್ವೀಕರಿಸಿದರು. ಸಮಾರಂಭದಲ್ಲಿ ಹಿರಿಯ ಕಲಾವಿದ ಮತ್ತು ನಿರ್ದೇಶಕ ಕೆ.ಎಸ್.ಎಲ್.ಸ್ವಾಮಿ, ಬಸಂತ್ ಕುಮಾರ್ ಪಾಟೀಲ್, ದೊಡ್ಡಣ್ಣ, ಎಸ್. ನಾರಾಯಣ್, ಮತ್ತಿತರ ಕಲಾವಿದರು ಭಾಗವಹಿಸಿದ್ದರು.

ಹಿರಿಯರನ್ನು ಮರೆತರು
ಡಾ. ರಾಜ್ ಬಳಿಕ ಕನ್ನಡ ಚಿತ್ರರಂಗದ ಹಿರಿಯಣ್ಣನೆನಿಸಿಕೊಂಡಿದ್ದರಾಮಾಚಾರಿ ಡಾ.ವಿಷ್ಣುವರ್ಧನ್, ಇವರ ಗುರು ಚಾಮಯ್ಯ ಮೇಷ್ಟ್ರು ಎಂದೇ ಖ್ಯಾತರಾದ ಕೆ.ಎಸ್.ಆಶ್ವತ್ಥ್ ಮತ್ತು ಸಂಗೀತ ನಿರ್ದೇಶಕ ಸಿ.ಅಶ್ವತ್ಥ್ ಅವರನ್ನು ರಾಜ್ಯ ಸರಕಾರ ಮತ್ತು ಕನ್ನಡಚಲನಚಿತ್ರ ಮಂಡಳಿ ಕೇವಲ ಮೂರು ತಿಂಗಳಿಗೇ ಮರೆತುಬಿಟ್ಟಿತು.

ಸಾಮಾನ್ಯವಾಗಿ ವರ್ಷಕ್ಕೊಮ್ಮೆ ನಡೆಯುವ ಸಮಾರಂಭದಲ್ಲಿ ಆಯಾ ವರ್ಷದಲ್ಲಿ ಅಗಲಿದ ಗಣ್ಯರ ಸ್ಮರಣೆಗಾಗಿ ಶ್ರದ್ಧಾಂಜಲಿ ಸಲ್ಲಿಸಲಾಗುತ್ತದೆ. ವಿಷ್ಣುವರ್ಧನ್, ಆಶ್ವತ್ಥ್ ದ್ವಯರು ಮೃತಪಟ್ಟ ಬಳಿಕ ನಡೆದ ಮೊದಲನೇ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರನೆನಪು ಸಹ ಮಾಡಿಕೊಳ್ಳಲಿಲ್ಲ.

ಸಮಾರಂಭದ ಮಧ್ಯದಲ್ಲಿ ನಿರೂಪಕರುಮೂರ್ಲಾಲ್ಕು ಬಾರಿ ವಿಷ್ಣುವರ್ಧನ್ ಹೆಸರೇಳಿದ್ದು ಬಿಟ್ಟರೆ ಅಶ್ವತ್ಥ್ ಅವರಪ್ರಸ್ತಾಪವನ್ನೇ ಮಾಡಲಿಲ್ಲ. ಕನ್ನಡ ಚಲನಚಿತ್ರ ಕ್ಷೇತ್ರಕ್ಕೆ ಈ ಮೂವರುಹಲವು ತಲೆಮಾರು ಗತಿಸಿದರೂ ಮರೆಯದಂತಹ ಕೊಡುಗೆನೀಡಿದ್ದಾರೆ. ಅಂತಹವರನ್ನು ಇಷ್ಟು ಬೇಗ ಮರೆತಿದ್ದು ಪ್ರೇಕ್ಷಕರಿಗೆನೋವುಂಟು ಮಾಡಿತು.

ವಿಷ್ಣು, ಅಶ್ವತ್ಥ್ ಹೆಸರಿನಲ್ಲಿ ಪ್ರಶಸ್ತಿ: ಸಿಎಂ
ಕನ್ನಡ ಚಲನಚಿತ್ರ ರಂಗದಲ್ಲಿ ವಿಶಿಷ್ಟ ಸೇವೆ ಸಲ್ಲಿಸಿದವರಿಗೆ ನೀಡುವ ಜೀವಿತಾವಧಿ ವಿಶಿಷ್ಟ ಕೊಡುಗೆಯನ್ನು ಡಾ.ವಿಷ್ಣುವರ್ಧನ್ ಹೆಸರಲ್ಲಿ ಮತ್ತು ಅತ್ಯುತ್ತಮ ಪೋಷಕ ನಟ ಪ್ರಶಸ್ತಿಯನ್ನು ಚಾಮಯ್ಯ ಮೇಷ್ಟ್ರು ಎಂದೇ ಹೆಸರಾಗಿದ್ದ ಕೆ.ಎಸ್.ಅಶ್ವತ್ಥ್ ಹೆಸರಲ್ಲಿ ಪ್ರಶಸ್ತಿನೀಡಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಘೋಷಿಸಿದ್ದಾರೆ.

ನಗರದ ನೆಹರೂ ಕ್ರೀಡಾಂಗಣದಲ್ಲಿ ಭಾನುವಾರ ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಕಲಾವಿದರಿಗೆ ಪ್ರಶಸ್ತಿ ಪ್ರದಾನ ಮಾಡಿ ಅವರು ಮಾತನಾಡಿದರು.ಚಲನಚಿತ್ರ ವಾಣಿಜ್ಯ ಮಂಡಳಿ ಬೇಡಿಕೆಯಂತೆ ಈ ಎರಡೂ ಪ್ರಶಸ್ತಿಯನ್ನು ಅಗಲಿದ ಹಿರಿಯ ಕಲಾವಿದರ ಹೆಸರಲ್ಲಿ ನೀಡಲಾಗುವುದು. ಬೆಂಗಳೂರಲ್ಲಿ ಚಲನಚಿತ್ರ ನಿರ್ಮಾಣಕ್ಕೆ ಸಕಲ ಸೌಕರ್ಯ ಒದಗಿಸುವಂತಹ ಚಿತ್ರನಗರಿ ನಿರ್ಮಾಣಕ್ಕೆ ಎಲ್ಲ ರೀತಿಯ ಸಹಕಾರನೀಡಲು ಸರಕಾರ ಬದ್ಧವಾಗಿದೆ. ಅಮೃತ ಮಹೋತ್ಸವ ಭವನಕ್ಕೆ ಶೀಘ್ರದಲ್ಲೇ ಶಂಕುಸ್ಥಾಪನೆ ನೆರವೇರಿಸಲಾಗುವುದು ಎಂದರು.

1970ರ ದಶಕದಲ್ಲಿ ಇಡೀ ಭಾರತವೇ ತಿರುಗಿ ನೋಡುವಂತೆ ಮಾಡಿದ ಕನ್ನಡ ಚಲನಚಿತ್ರ ರಂಗದಲ್ಲಿ ಅತ್ಯುತ್ತಮ ಚಿತ್ರಗಳು ಮೂಡಿಬಂದವು. ಗತಿಸಿಹೋದ ದಿನಗಳು ಮತ್ತೆ ನೆನಪಿಸುವಂತಹ ಇಡೀ ಕುಟುಂಬದವರೆಲ್ಲರೂ ಒಟ್ಟಿಗೆ ಕುಳಿತು ನೋಡುವಂತಹ ಸಿನಿಮಾಗಳು ಮೂಡಿಬರುತ್ತವೆ ಎಂಬ ಆಶಯ ತಮ್ಮದು ಎಂದರು(ಸ್ನೇಹಸೇತು: ವಿಜಯ ಕರ್ನಾಟಕ).

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada