»   » ಚಾಲೆಂಜಿಂಗ್ ಸ್ಟಾರ್ ದರ್ಶನ್‌ಗೆ ಜಾಮೀನು ಮಂಜೂರು

ಚಾಲೆಂಜಿಂಗ್ ಸ್ಟಾರ್ ದರ್ಶನ್‌ಗೆ ಜಾಮೀನು ಮಂಜೂರು

Posted By:
Subscribe to Filmibeat Kannada
Actor Darshan gets bail
ಕಡೆಗೂ ಚಾಲೆಂಜಿಂಗ್ ಸ್ಟಾರ್ ದರ್ಶನ್‌ಗೆ ಬಿಡುಗಡೆ ಭಾಗ್ಯ ಸಿಕ್ಕಿದೆ. ಶುಕ್ರವಾರ (ಅ.7) ದರ್ಶನ್ ಜಾಮೀನು ಅರ್ಜಿ ವಿಚಾರಣೆಯನ್ನು ನಡೆಸಿದ ಬಿ ವಿ ಪಿಂಟೋ ಅವರನ್ನೊಳಗೊಂಡ ಹೈಕೋರ್ಟ್ ಏಕಸದಸ್ಯ ಪೀಠ ದರ್ಶನ್‌ಗೆ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ. ಅ.13ರಂದು ಹೈಕೋರ್ಟ್‌ಗೆ ಹಾಜರಾಗುವಂತೆ ಸೂಚಿಸಿದೆ.

ರು.25 ಸಾವಿರ ಬಾಂಡ್ ಹಾಗೂ ಸಾಕ್ಷ್ಯಾಧಾರ ನಾಶಪಡಿಸದಂತೆ ಹೈಕೋರ್ಟ್ ದರ್ಶನ್‌ಗೆ ಸೂಚಿಸಿದೆ. ಶುಕ್ರವಾರ ಸಂಜೆ ವೇಳೆಗೆ ಪರಪ್ಪನ ಅಗ್ರಹಾರ ಜೈಲಿನಿಂದ ದರ್ಶನ್ ಬಿಡುಗಡೆಯಾಗುವ ಸಾಧ್ಯತೆಗಳಿವೆ. ಅ.13ರಂದು ದರ್ಶನ್ ತನ್ನ ಪತ್ನಿಯೊಂದಿಗೆ ಹಾಜರಾಗುವಂತೆಯೂ ಕೋರ್ಟ್ ಸೂಚಿಸಿದೆ.

ಸೆಪ್ಟೆಂಬರ್ 8ರಂದು ನಟ ದರ್ಶನ್ ಬಂಧನಕ್ಕೊಳಗಾಗಿದ್ದರು. ನಟ ದರ್ಶನ್‌ಗೆ ಜಾಮೀನು ಸಿಗುತ್ತಿದ್ದಂತೆ ಅವರ ಅಪಾರ ಅಭಿಮಾನಿ ಬಳಗ ತೀವ್ರ ಸಂತಸ ವ್ಯಕ್ತಪಡಿಸಿದೆ. ಬಿಡುಗಡೆ ಬಳಿಕ ದರ್ಶನ್ ತನ್ನ ಕುಟುಂಬ ಸಮೇತ ತಿರುಪತಿ ಹಾಗೂ ಧರ್ಮಸ್ಥಳ ಯಾತ್ರೆಗೆ ತೆರಳಿದ್ದಾರೆ. (ಒನ್‌ಇಂಡಿಯಾ ಕನ್ನಡ ಸಿನಿವಾರ್ತೆ)

English summary
Karnataka High Court grants conditional bail for Kannada actor Darshan on Friday (Oct.7). The single judge bench of Justice B V Pinto granted to Darshan for a bail bond of Rs 25,000.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada