»   »  ನಟಿ ತಾರಾ ಅಧಿಕೃತವಾಗಿ ಬಿಜೆಪಿಗೆ ಸೇರ್ಪಡೆ

ನಟಿ ತಾರಾ ಅಧಿಕೃತವಾಗಿ ಬಿಜೆಪಿಗೆ ಸೇರ್ಪಡೆ

Subscribe to Filmibeat Kannada
Actress Tara joined BJP
ರಾಷ್ಟ್ರ ಪ್ರಶಸ್ತಿ ವಿಜೇತ ಪ್ರಬುದ್ಧ ನಟಿ ತಾರಾ ಅವರು ಬಿಜೆಪಿ ರಾಜ್ಯಾಧ್ಯಕ್ಷ ಸದಾನಂದಗೌಡ ಸಮ್ಮುಖದಲ್ಲಿ ಅಧಿಕೃತವಾಗಿ ಭಾನುವಾರ ಬಿಜೆಪಿ ಸೇರಿಕೊಂಡರು. ಯಾವುದೇ ಷರತ್ತಿಲ್ಲದೆ ಬಿಜೆಪಿ ಸೇರಿರಿರುವ ಅವರು, ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ. ಆದರೆ, ಪಕ್ಷದ ಪರವಾಗಿ ರಾಜ್ಯದಾದ್ಯಂತ ಪ್ರವಾಸ ಮಾಡುವುದಾಗಿ ಹೇಳಿದರು.

ಚಿಕ್ಕಬಳ್ಳಾಪುರ ಲೋಕಸಭಾ ಕ್ಶೇತ್ರದಿಂದ ಸ್ಪರ್ಧಿಸುವಂತೆ ಪಕ್ಷದಿಂದ ಒತ್ತಡ ಬಂದಿತ್ತು. ಆದರೆ, ಅದು ಕಾರಣಾಂತರದಿಂದ ಸಾಧ್ಯವಾಗಲಿಲ್ಲ. ಈಗಾಗಲೇ ಪಕ್ಷದ ಪರವಾಗಿ ಪ್ರಚಾರ ನಡೆಸಿದ್ದೇನೆ. ಮಂಗಳೂರು ಸೇರಿದಂತೆ ವಿವಿಧೆಡೆ ಪ್ರಚಾರ ಮುಗಿಸಿ ಬಂದಿದ್ದೇನೆ ಮತ್ತು ರಾಜ್ಯಾದ್ಯಂತ ಬಿಜೆಪಿ ಪರ ಮತ ಯಾಚಿಸುತ್ತೇನೆ ಮತ್ತು ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸುತ್ತೇನೆ ಎಂದು ನಟಿ ತಾರಾ ಹೇಳಿದರು. ಅಬಕಾರಿ, ಐ.ಟಿ. ಬಿ.ಟಿ, ಬೆಂಗಳೂರು ಜಲ ಮಂಡಳಿ ಹಾಗೂ ವಾರ್ತಾ ಸಚಿವ ಕಟ್ಟಾ ಸುಬ್ರಮಣ್ಯ ನಾಯ್ಡು,ಸಾರಿಗೆ ಸಚಿವ ಆರ್.ಅಶೋಕ್ ಮುಂತಾದ ಬಿಜೆಪಿ ನಾಯಕರ ಕಾರ್ಯಕ್ರಮದಲ್ಲಿ ಹಾಜರಿದ್ದರು.

ಬಿಜೆಪಿ ಸಿದ್ಧಾಂತಗಳು ಇಷ್ಟವಾದವು. ಪಕ್ಷಕ್ಕೆ ಸೇರಲು ಮುಖ್ಯಮಂತ್ರಿ ಯಡಿಯೂರಪ್ಪನವರೇ ನನಗೆ ಸ್ಫೂರ್ತಿ. ಮಹಿಳೆಯರಿಗೆ ಬಿಜೆಪಿ ಉತ್ತಮ ಸ್ಥಾನ ಮಾನ ನೀಡುತ್ತಿದೆ ಹಾಗಾಗಿ ಬಿಜೆಪಿ ಸೇರುತ್ತಿದ್ದೇನೆ ಎಂಬುದು ತಾರಾ ಅವರ ವಿವರಣೆ. ಮೊದಲಿಂದಲೂ ಸಮಾಜ ಸೇವೆಯಲ್ಲಿ ಆಸಕ್ತಿ ಇದೆ. ನಾನು ಮತ್ತು ನನ್ನ ಪತಿ ವೇಣು ಅಮೆರಿಕಾದ ಅಕ್ಕ ಸಮ್ಮೇಳನಕ್ಕೆ ಹೋಗಿದ್ದಾಗ ಯಡಿಯೂರಪ್ಪನವರು ನನ್ನನ್ನು ಮಗಳು ಎಂದು ವೇಣುರನ್ನು ಅಳಿಯ ಎಂದು ಸಂಭೋಧಿಸಿದ್ದಾಗಿ ತಾರಾ ನೆನಪಿಸಿಕೊಂಡರು.

(ದಟ್ಸ್ ಕನ್ನಡ ಚಿತ್ರವಾರ್ತೆ)

ಅನಂತಕುಮಾರ್ ಪರ ನಟಿ ತಾರಾ ಖಡಕ್ ಪ್ರಚಾರ!
ನಟಿ ತಾರಾ ಸುರಿಸಿದ ಗಂಗಾ ಕಾವೇರಿ ಪ್ರವಾಹ
ಭಾರತೀಯ ಜನತಾ ಪಕ್ಷಕ್ಕೆ 'ತಾರಾ' ಬಲ?

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada