For Quick Alerts
ALLOW NOTIFICATIONS  
For Daily Alerts

ರೈತಕುಟುಂಬದ ಬರಗೂರು ಹೊಸ ಚಿತ್ರ ಭೂಮಿತಾಯಿ

|

"ಭೂಮಿತಾಯಿ" ಚಿತ್ರವನ್ನು ಮಾಧ್ಯಮ ಮಿತ್ರರಿಗೆ ತೋರಿಸಿ ವಿವರಿಸಿದ್ದಾರೆ ಖ್ಯಾತ ಬರಹಗಾರ ಹಾಗೂ ನಿರ್ದೇಶಕ ಡಾ. ಬರಗೂರು ರಾಮಚಂದ್ರಪ್ಪ. ಈಗಾಗಲೇ ಕನ್ನಡ ಚಿತ್ರರಂಗಕ್ಕೆ ಸಾಕಷ್ಟು ಕಲಾಚಿತ್ರಗಳನ್ನು ನೀಡುವುದರ ಮೂಲಕ ಸೇವೆ ಸಲ್ಲಿಸಿರುವ ಇವರು ಸಾಮಾಜಿಕ ಸಂದೇಶಕ್ಕೆ ಬಹಳಷ್ಟು ಮಹತ್ವ ಕೊಡುವ ನಿಟ್ಟಿನಲ್ಲಿ ಸದಾ ಕಾರ್ಯಪ್ರವೃತ್ತರು.

"ಈ ಭೂಮಿತಾಯಿ ಚಿತ್ರವು ರೈತ ಕುಟುಂಬವನ್ನು ಕೇಂದ್ರವಾಗಿಟ್ಟುಕೊಂಡ ಹಳ್ಳಿಯ ಕಥಾವಸ್ತು ಒಳಗೊಂಡಿದೆ. ಬಡರೈತನ ಸಂಕಷ್ಟಗಳನ್ನು ಚಿತ್ರಿಸುತ್ತಲೇ ಮನುಷ್ಯ ಸಂಬಂಧಗಳ ತೀವ್ರತೆ, ಹಳ್ಳಿಯ ನ್ಯಾಯವ್ಯವಸ್ಥೆಯ ವಿಪರ್ಯಾಸಗಳನ್ನು ಒಳಗೊಂಡಿದೆ. ಈ ಮೂಲಕ ಅಧಿಕಾರ ಕೇಂದ್ರದ ವೈರುಧ್ಯಗಳನ್ನು, ವ್ಯವಸ್ಥೆಯ ಒಳತೋಟಿಗಳನ್ನು ಅನಾವರಣಗೊಳಿಸಿದೆ. ಆದರೂ ರೈತ ಕುಟಂಬವೇ ಕೇಂದ್ರವಾಗಿದೆ" ಎಂದಿದ್ದಾರೆ ಡಾ. ಬರಗೂರು.

" ಇಲ್ಲಿ ರೈತ ಸಾಲ ಮತ್ತು ಸಂಕಷ್ಟಗಳಿಗೆ ಹೆದರಿ ಆತ್ಮಹತ್ಯೆ ಮಾಡಿಕೊಳ್ಳುವುದಿಲ್ಲ. ಅವರ ಮಗಳು ಆತ್ಮಹತ್ಯೆ ಮತ್ತು ಮಗ ಹತ್ಯೆಗೀಡಾದರೂ ಹೆಂಡತಿಯ ಆತ್ಮವಿಶ್ವಾಸದ ಮಾತುಗಳಿಂದ ಎಲ್ಲ ನೋವನ್ನು ಎದುರಿಸಿ ನಿಲ್ಲುತ್ತಾರೆ. ಹೀಗೆ ಆತ್ಮಹತ್ಯೆಯ ಬದಲು ಆತ್ಮವಿಶ್ವಾಸದ ಪ್ರತೀಕವಾಗಿದೆ ಈ ಭೂಮಿತಾಯಿ ಚಿತ್ರ" ಎಂದೂ ಕೂಡ ಹೇಳಿದ್ದಾರೆ.

"ಈ ಚಿತ್ರದಲ್ಲಿ ಸಾಕಷ್ಟು ಪ್ರಬಲವಾದ ಸಂಗತಿಯನ್ನು ಅಷ್ಟೇ ಪ್ರಬಲವಾದ ಪಾತ್ರಗಳ ಮೂಲಕ ನಿರೂಪಿಸಿದ್ದಾರೆ ಅನುಭವಿ ನಿರ್ದೇಶಕರಾದ ರಾಮಚಂದ್ರಪ್ಪನವರು" ಎಂಬ ಅಭಿಪ್ರಾಯ ಭೂಮಿತಾಯಿ ಚಿತ್ರದ ನಾಯಕ ಕಿಶೋರ್ ರಿಂದ ಬಂತು.

ಇನ್ನು ಇದರ ಸಿನಿಮಾ ನಿರೂಪಣೆಯಲ್ಲಿ ಸ್ಲೋಮೋಷನ್ ಹಾಗೂ ನೇರ ನಿರೂಪಣೆಯ ತಂತ್ರ ಇಲ್ಲಿ ಅನುಸರಿಸಲಾಗಿದೆ. ಇದರ ಚಿತ್ರೀಕರಣದ ವೇಳೆ 'ಪ್ರಾಣಿ ಕ್ಷೇಮಾಭಿವೃದ್ಧಿ ಸಂಘ'ದಿಂದ ತಮಗಾದ ತೊಂದರೆಯಿಂದ ತಾವು ಅನುಭವಿಸಿದ ನೋವನ್ನು ಕೂಡ ಹೇಳಿಕೊಂಡರು ಪ್ರೊ. ಬರಗೂರು.

English summary
After screening the film for the media the skilful director Baraguru Ramachandrappa explained the trouble he faced with the animal welfare board. Bhumitayi is not only related to the mother earth but also refers to a woman. Keeping in view the present scenario I have prepared the subject and it suits the modern times disclosed the rebel writer.

Kannada Photos

Go to : More Photos
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more