twitter
    For Quick Alerts
    ALLOW NOTIFICATIONS  
    For Daily Alerts

    ಸೆನ್ಸಾರ್ ಮಂಡಳಿಯಲ್ಲಿ ಟೇಬಲ್ ಕೆಳಗಿನ ವ್ಯವಹಾರ

    By Rajendra
    |
    <ul id="pagination-digg"><li class="next"><a href="/news/05-madan-patel-to-face-defamation-suit-aid0052.html">Next »</a></li></ul>

    Censor Chief K Nagaraj
    ಸೆನ್ಸಾರ್ ಮಂಡಳಿಯಲ್ಲೂ ಲಂಚಾವತಾರ ತಾಂಡವವಾಡುತ್ತಿದೆಯೇ? ಹೌದು ಇದು ಸತ್ಯ ಎಂದು ಕನ್ನಡ ಚಿತ್ರಗಳ ನಿರ್ದೇಶಕ ಹಾಗೂ ನಿರ್ಮಾಪಕ ಮದನ್ ಪಟೇಲ್ ಗುರುತರ ಆರೋಪವನ್ನು ಪ್ರಾದೇಶಿಕ ಸೆನ್ಸಾರ್ ಮಂಡಳಿಯ ಬೆಂಗಳೂರು ಅಧಿಕಾರಿ ಕೆ ನಾಗರಾಜ್ ಮೇಲೆ ಹೊರಿಸಿದ್ದಾರೆ.

    ತಮ್ಮ ಸತ್ಯಾನಂದ ಚಿತ್ರದ ಎರಡು ಹಾಡುಗಳನ್ನು ಸೆನ್ಸಾರ್ ಮಾಡಲು ನಾಗರಾಜ್ ರು.50,000 ಹಾಗೂ ಇಡೀ ಚಿತ್ರದ ಸೆನ್ಸಾರ್‌ಗೆ ರು.5 ಲಕ್ಷ ಲಂಚ ಕೇಳಿದರು ಎಂದು ಮದನ್ ಪಟೇಲ್ ಆರೋಪಿಸಿದ್ದಾರೆ. ಅವರು ಭಾನುವಾರ (ಡಿ.4) ಗಾಂಧಿನಗರದ ಗ್ರೀನ್ ಹೌಸ್‌ನಲ್ಲಿ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡುತ್ತಿದ್ದರು.

    ತಮ್ಮ ಚಿತ್ರವನ್ನು ಸೆನ್ಸಾರ್ ಮಾಡಲು ಲಂಚ ಕೇಳಿದ ನಾಗರಾಜ್ ಅವರು ಕೂಡಲೆ ತಮ್ಮ ಸ್ಥಾನದಿಂದ ಇಳಿಯಬೇಕು ಎಂದು ಮದನ್ ಪಟೇಲ್ ಆಗ್ರಹಿಸಿದರು. ಚೆನ್ನೈ ಹಾಗೂ ಹೈದರಾಬಾದ್ ಪ್ರಾದೇಶಿಕ ಸೆನ್ಸಾರ್ ಮಂಡಳಿಯಲ್ಲಿ ಕೆಲಸ ಕಾರ್ಯಕ್ರಗಳು ಸುಸೂತ್ರವಾಗಿ ಆಗುತ್ತದೆ. ಆದರೆ ಬೆಂಗಳೂರಿನಲ್ಲಿ ಮಾತ್ರ ಈ ರೀತಿಯ ಭ್ರಷ್ಟ ಅಧಿಕಾರಿಗಳಿಂದ ಕೆಲಸ ಕಾರ್ಯಗಳು ಆಗುತ್ತಿಲ್ಲ ಎಂದು ಮದನ್ ಕಿಡಿಕಾರಿದ್ದಾರೆ.

    <ul id="pagination-digg"><li class="next"><a href="/news/05-madan-patel-to-face-defamation-suit-aid0052.html">Next »</a></li></ul>

    English summary
    The regional censor officer of Banglore K Nagaraju asked Rs.50000 bribe for censoring two songs of ‘Satyananda’ and Rs.5 lakh on censoring the entire film alleged the producer and director of the film Madan Patel addressing the media on Sunday evening at Green House Raj Milan.
    Monday, December 5, 2011, 13:07
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X