»   » ಕನ್ನಡ ಚಿತ್ರಗಳನ್ನು ಇನ್ನು ಕದಿಯಲಾಗದು, ಜೋಕೆ!

ಕನ್ನಡ ಚಿತ್ರಗಳನ್ನು ಇನ್ನು ಕದಿಯಲಾಗದು, ಜೋಕೆ!

Posted By:
Subscribe to Filmibeat Kannada
Piracy Image
ಟೊರೆಂಟ್ಸ್ ಅಥವಾ ಬೇರೆ ಯಾವುದೇ ಅಂತರ್ಜಾಲದಿಂದ ನೀವು ಇನ್ನು ಮುಂದೆ ಕನ್ನಡ ಸಿನಿಮಾಗಳನ್ನು 'ಡೌನ್ ಲೋಡ್' ಮಾಡಲು ಸಾಧ್ಯವಾಗುವುದಿಲ್ಲ. ಏಕೆಂದರೆ ಇದೀಗ ಸ್ಯಾಂಡಲ್ ವುಡ್, ಪೈರಸಿ ವಿರುದ್ಧ ಎಚ್ಚೆತ್ತಿದೆ. "EggUp.com" ಎಂಬ ವೈಬ್ ಸೈಟ್ ನೊಂದಿಗೆ ಕೈಜೋಡಿಸಿರುವ ಅದು, ಇಂಟರ್ನೆಟ್ ನಿಂದ ಕನ್ನಡ ಚಿತ್ರಗಳನ್ನು ಕದಿಯಲು ಸಾಧ್ಯವಾಗದಂತೆ ಕ್ರಮ ಕೈಗೊಂಡಿದೆ.

ಹವಾಯಿ ಮೂಲದ ಈ ವೆಬ್ ಸೈಟ್, ಕಳೆದ ತಿಂಗಳು ಬಿಡುಗಡೆಯಾಗಿ ಕಾರ್ಯೋನ್ಮುಖವಾಗಿದೆ. ಅಷ್ಟೇ ಅಲ್ಲದೇ, ಕನ್ನಡ ಚಿತ್ರೋದ್ಯಮದ ಜೊತೆ ಕೈಜೋಡಿಸಿ ಕೆಲಸ ಮಾಡಲಿದೆ. ಈ ವೆಬ್ ಸೈಟ್ ಮೂಲಕ ಆನ್ ಲೈನಿನಲ್ಲಿ ಸುರಕ್ಷಿತವಾಗಿ ಚಿತ್ರಗಳ ವ್ಯಾಪಾರ ವಹಿವಾಟು ಮಾಡಬಹುದು. ಈ ವೆಬ್ ಸೈಟ್ ಪೋರ್ಟಲ್ ಮೂಲಕ ಚಿತ್ರದ ನಿರ್ಮಾಪಕರು ಚಿತ್ರವನ್ನು ಸ್ವತಃ ಅಪ್ ಲೋಡ್ ಮಾಡಿ, 'ವೀಕ್ಷಣೆಗಿಷ್ಟು(pay-per-view)' ಎಂದು ಗಳಿಕೆ ಮಾಡಬಹುದು.

ಡಿಜಿಟಲ್ ನಮೂನೆಯಲ್ಲಿರುವ ಡಾಟಾ ಎಗ್ಗ್ ಫೈಲ್ ನಲ್ಲಿ ಸುರಕ್ಷಿತವಾಗಿರಲಿದ್ದು, ಐಫೋನ್ ಮತ್ತು ಐಪ್ಯಾಡ್ ಗಳಲ್ಲಿ ಹರಿದಾಡಲೂ ಸಾಧ್ಯವಿದೆ. ಇಷ್ಟೇ ಅಲ್ಲದೇ ಕನ್ನಡ ಚಿತ್ರದ ನಿರ್ಮಾಪಕರು ತಾವು ಅಪ್ ಲೋಡ್ ಮಾಡಿದ ಚಿತ್ರವನ್ನು ನಂತರವೂ ಕೂಡ ಎಡಿಟ್ ಮಾಡಬಹುದಲ್ಲದೇ ದರ ಕೂಡ ನಿಗದಿ ಮಾಡಬಹುದು. ಹೆಚ್ಚಿನ ವಿವರಗಳಿಗೆ ವೆಬ್ ಸೈಟ್- http://www.eggup.comಗೆ ಲಾಗ್ ಆನ್ ಮಾಡಿ...(ಒನ್ ಇಂಡಿಯಾ ಕನ್ನಡ)

English summary
Kannada film industry has tied up with EggUp.com, will provide a platform to securely sell, distribute films online, to control piracy.
 

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X