For Quick Alerts
  ALLOW NOTIFICATIONS  
  For Daily Alerts

  'ಖುಷಿ' ರೀಮೇಕ್ ಚಿತ್ರಕ್ಕೆ ಗಣೇಶ್, ಪ್ರಿಯಾಮಣಿ

  |

  ಇನ್ನೂ ಹೆಸರಿಡದ ಗೋಲ್ಡನ್ ಸ್ಟಾರ್ ಗಣೇಶ್ ಹೊಸ ಚಿತ್ರಕ್ಕೆ ನಾಯಕಿಯಾಗಿ ರಾಷ್ಟ್ರ ಪ್ರಶಸ್ತಿ ವಿಜೇತೆ ಪ್ರಿಯಾಮಣಿ ಆಯ್ಕೆಯಾಗಿದ್ದಾರೆ. ಈ ಚಿತ್ರವನ್ನು ಮುಸ್ಸಂಜೆ ಮಹೇಶ್ ನಿರ್ದೇಶಿಸುತ್ತಿದ್ದು 'ಬಿಂದಾಸ್' ನಿರ್ಮಿಸಿದ್ದ ಎಂ ಚಂದ್ರಶೇಖರ್ ಈ ಚಿತ್ರಕ್ಕೆ ಬಂಡವಾಳ ಹೂಡುತ್ತಿದ್ದಾರೆ.

  ತಮಿಳಿನಲ್ಲಿ ವಿಜಯ್ ಮತ್ತು ಜ್ಯೋತಿಕಾ ನಟಿಸಿದ್ದ ಯಶಸ್ವಿ ಚಿತ್ರ 'ಖುಷಿ'ಯನ್ನು ಚಂದ್ರಶೇಖರ್ ಕನ್ನಡಕ್ಕೆ ತರುತ್ತಿದ್ದಾರೆ. ಈಗಾಗಲೇ ಪ್ರಕಾಶ್ ನಿರ್ದೇಶನದಲ್ಲಿ 'ಖುಷಿ'ಹೆಸರಿನ ಚಿತ್ರವೊಂದು ಕನ್ನಡದಲ್ಲಿ ಈಗಾಗಲೇ ತೆರೆಕಂಡಿದೆ. ವಿಜಯರಾಘವೇಂದ್ರ, ಸಿಂಧು ಮೆನನ್ ಮುಖ್ಯಭೂಮಿಕೆಯಲ್ಲಿದ್ದ ಚಿತ್ರ. ಹಾಗಾಗಿ ಈ ರೀಮೇಕ್ ಚಿತ್ರಕ್ಕೆ ಹೊಸ ಶೀರ್ಷಿಕೆ ಹುಡುಕುತ್ತಿದ್ದಾರೆ ನಿರ್ಮಾಪಕರು.

  ಈ ಚಿತ್ರವನ್ನು 'ಕಂಠಿ'(ಮುರಳಿ, ರಮ್ಯಾ ನಟನೆಯ ಚಿತ್ರ) ಚಿತ್ರ ನಿರ್ದೇಶಿಸಿದ್ದ ಭರತ್ ನಿರ್ದೇಶಿಸಬೇಕಾಗಿತ್ತಂತೆ. ಆದರೆ ಭರತ್ ಈಗ ಮಾಡುತ್ತೇನೆ ಆಗ ಮಾಡಿಕೊಡುತ್ತೇನೆ ಎಂದು ಕಾಲ ದೂಡಿದ ಕಾರಣ ಬೇಸತ್ತ ನಿರ್ಮಾಪಕರು ಮುಸ್ಸಂಜೆ ಮಹೇಶ್ ಗೆ ನಿರ್ದೇಶನದ ಜವಾಬ್ದಾರಿಯನ್ನು ಕೊಟ್ಟಿದ್ದಾರಂತೆ. ಗಣೇಶ್ ರ 'ಉಲ್ಲಾಸ ಉತ್ಸಾಹ' ಚಿತ್ರ ಬಿಡುಗಡೆಗೆ ತವಕಿಸುತ್ತಿದೆ. ಈ ಮಧ್ಯೆ ಮತ್ತೊಂದು ಹೊಸ ರೀಮೇಕ್ ಚಿತ್ರ ಸೆಟ್ಟೇರಲು ಸಿದ್ಧವಾಗಿದೆ.

  (ದಟ್ಸ್ ಕನ್ನಡ ಚಿತ್ರವಾರ್ತೆ)

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X