»   »  ಕಂಠೀರವ ಸ್ಟುಡಿಯೋದಿಂದ ಮಲ್ಟಿಫ್ಲೆಕ್ಸ್ ಗಳ ನಿರ್ಮಾಣ

ಕಂಠೀರವ ಸ್ಟುಡಿಯೋದಿಂದ ಮಲ್ಟಿಫ್ಲೆಕ್ಸ್ ಗಳ ನಿರ್ಮಾಣ

Posted By:
Subscribe to Filmibeat Kannada

ಖಾಸಗಿ ವಲಯದ ಸಹಕಾರದೊಂದಿಗೆ ರಾಜ್ಯದ ಬಿ ಮತ್ತು ಸಿ ಕೇಂದ್ರಗಳಲ್ಲಿ 150 ಚಿತ್ರಮಂದಿರ ನಿರ್ಮಿಸಲು ಕಂಠೀರವ ಸ್ಟುಡಿಯೋ ಮುಂದಾಗಿದೆ. ಕನ್ನಡ ಚಿತ್ರರಂಗಕ್ಕೆ ಮತ್ತಷ್ಟು ಜೀವ ನೀಡುವ ಉದ್ದೇಶದಿಂದ ಸುಮಾರು 200 ಕೋಟಿ ರುಪಾಯಿ ವೆಚ್ಚದಲ್ಲಿ ಈ ನಿರ್ಧಾರ ತೆಗೆದುಕೊಂಡಿರುವುದಾಗಿ ಸ್ಟುಡಿಯೋ ಅಧ್ಯಕ್ಷ ಗಿರೀಶ್ ಮಟ್ಟಣ್ಣನವರ್ ತಿಳಿಸಿದ್ದಾರೆ.

ರಾಜ್ಯದ ತಾಲೂಕುಗಳನ್ನು ಬಿ ಮತ್ತು ಹೋಬಳಿಗಳನ್ನು ಸಿ ಕೇಂದ್ರವೆಂದು ಗುರುತಿಸಲಾಗಿದೆ. ಇದರಿಂದ ಕನ್ನಡ ಚಿತ್ರರಂಗ ಬೆಳವಣಿಗೆ ಸಾಧ್ಯ. ಚಿತ್ರಮಂದಿರ ನಿರ್ಮಾಣ ಮಾಡಲು ಖಾಸಾಗಿ ವಲಯ ಉತ್ಸುಕವಾಗಿದೆ. ವಾಣಿಜ್ಯ ಮಳಿಗೆ, ಮಾಲ್ ಮತ್ತು ಸಮುದಾಯ ಭವನಗಳನ್ನು ಹೊಂದಿರುವ ಚಿತ್ರಮಂದಿರ(ಮಲ್ಟಿಫ್ಲೆಕ್ಸ್) ನಿರ್ಮಿಸುವ ಉದ್ದೇಶ ಹೊಂದಿದ್ದು ಖಾಸಾಗಿ ವಲಯ ನಿರ್ಮಾಣ ಉಸ್ತುವಾರಿ ವಹಿಸಿಕೊಳ್ಳಲಿದೆ ಎಂದು ಮಟ್ಟಣ್ಣನವರ್ ಹೇಳಿದ್ದಾರೆ.

ಚಿತ್ರಮಂದಿರಗಳ ಕೊರತೆಯಿಂದ ಕನ್ನಡ ಚಿತ್ರದ್ಯೋಮ ಬಡವಾಗುತ್ತಿದೆ. ಈ ನಿಟ್ಟಿನಲ್ಲಿ ಉತ್ತಮ ಗುಣಮಟ್ಟದ ಚಿತ್ರಮಂದಿರಗಳನ್ನು ನಿರ್ಮಿಸಲಾಗುತ್ತದೆ. ಸರಕಾರದ ವಿವಿಧ ಇಲಾಖೆಗಳ ಕುರಿತು ಉತ್ಕೃಷ್ಟ ವಾದಸಾಕ್ಷ್ಯ ಚಿತ್ರಗಳನ್ನು ಸ್ಟುಡಿಯೋ ತಯಾರಿಸಲಿದೆ. ಸಾಕ್ಷ್ಯಚಿತ್ರಗಳ ತಯಾರಿಕಾ ವೆಚ್ಚವನ್ನು ಕಡಿಮೆ ಮಾಡುವುದಷ್ಟೇ ಅಲ್ಲ, ಗುಣಮಟ್ಟದಿಂದ ಕೂಡಿದ ಮತ್ತು ಪಾರದರ್ಶಕತೆ ನಮ್ಮ ಆದ್ಯತೆ. ಹಾಗೆಯೇ ಚಿತ್ರೋದ್ಯಮದ ಬೇಡಿಕೆಗೆ ತಕ್ಕಂತೆ ಸ್ಟುಡಿಯೋದಲ್ಲಿ ಸೌಲಭ್ಯಗಳನ್ನು ಹೆಚ್ಚಿಸಲಾಗುತ್ತಿದೆ ಎಂದು ಮಟ್ಟಣ್ಣನವರ್ ತಿಳಿಸಿದರು.

(ದಟ್ಸ್ ಕನ್ನಡ ಚಿತ್ರವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada