»   » ಜ.22ಕ್ಕೆ ವಿಷ್ಣು ಕೊನೆಯ ಚಿತ್ರ 'ಆಪ್ತರಕ್ಷಕ'

ಜ.22ಕ್ಕೆ ವಿಷ್ಣು ಕೊನೆಯ ಚಿತ್ರ 'ಆಪ್ತರಕ್ಷಕ'

Subscribe to Filmibeat Kannada

ಸಾಹಸ ಸಿಂಹ ವಿಷ್ಣುವರ್ಧನ್ ಅಭಿನಯದ ಕೊನೆಯ ಅದ್ದೂರಿ ಚಿತ್ರ 'ಆಪ್ತರಕ್ಷಕ' ಜನವರಿ 22ರಂದು ರಾಜ್ಯಾದ್ಯಂತ ತೆರೆಕಾಣಲು ಅಣಿಯಾಗಿದೆ. ಹಾಗೆಯೇ 'ಆಪ್ತರಕ್ಷಕ' ಚಿತ್ರದ ಧ್ವನಿಸುರುಳಿ ಜನವರಿ15ರಂದು ಮಾರುಕಟ್ಟೆಗೆ ಬಿಡುಗಡೆಯಾಗಲಿದೆ ಎಂದು ಚಿತ್ರದ ನಿರ್ಮಾಪಕ ಕೃಷ್ಣಪ್ರಜ್ವಲ್ ತಿಳಿಸಿದ್ದಾರೆ.

ನವೆಂಬರ್ ತಿಂಗಳಲ್ಲೇ ತೆರೆಕಾಣಬೇಕಾಗಿದ್ದ 'ಆಪ್ತರಕ್ಷಕ' ರಾಜ್ಯದಲ್ಲಿ ಉಂಟಾದ ಪ್ರವಾಹದ ಕಾರಣ ಮುಂದೂಡಲಾಗಿತ್ತು. ನೆರೆಯ ಕಾರಣ ರಾಜ್ಯ ತತ್ತರಿಸುತ್ತಿರುವ ಸಂಧರ್ಭದಲ್ಲಿ ಆಪ್ತರಕ್ಷಕ ಚಿತ್ರವನ್ನು ಬಿಡುಗಡೆ ಮಾಡುವುದು ಅಷ್ಟು ಸೂಕ್ತವಲ್ಲ ಎಂಬ ನಿರ್ಧಾರಕ್ಕೆ ನಿರ್ಮಾಪಕ ಕೃಷ್ಣ ಪ್ರಜ್ವಲ್ ಬಂದಿದ್ದರು.

ಇದೀಗ ವಿಷ್ಣುವರ್ಧನ್ ಅವರ ಸಾವು ಕೃಷ್ಣ ಪ್ರಜ್ವಲ್ ಅವರನ್ನು ದಿಗ್ಭ್ರಾಂತಗೊಳಿಸಿದೆ. ಸಮಸ್ತ ಕನ್ನಡಿಗರನ್ನು ಅವರ ಅಗಲಿಕೆಯ ನೋವು ಕಾಡುತ್ತಿದೆ. ಅಭಿಮಾನಿಗಳು ಈ ನೋವಿನಿಂದ ಹೊರಬಂದ ನಂತರ ಚಿತ್ರ ಬಿಡುಗಡೆ ಮಾಡಬೇಕು ಎಂಬುದು ಅವರ ಅಭಿಲಾಷೆಯಾಗಿತ್ತು. ಹಾಗಾಗಿ ಆಪ್ತರಕ್ಷಕರನನ್ನು ಜನವರಿ 22ಕ್ಕೆ ಬಿಡುಗಡೆ ಮಾಡುತ್ತಿದ್ದಾರೆ.

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada