»   »  ಕರಿಸುಬ್ಬು ಸ್ಟುಡಿಯೋದಲ್ಲಿ 'ಸೆಲ್ಯೂಟ್'

ಕರಿಸುಬ್ಬು ಸ್ಟುಡಿಯೋದಲ್ಲಿ 'ಸೆಲ್ಯೂಟ್'

Posted By:
Subscribe to Filmibeat Kannada
BC Patil
'ಕೌರವ' ಚಿತ್ರದ ಮೂಲಕ ನಾಯಕನ ಪಟ್ಟ ಅಲಂಕರಿಸಿದ ಬಿ.ಸಿ.ಪಾಟೀಲ್ 'ಪ್ರೇಮಾಚಾರಿ' ಎಂದು ಪ್ರಸಿದ್ದರಾದವರು. ಪೊಲೀಸ್ ಅಧಿಕಾರಿಯಾಗಿ, ಶಾಸಕರಾಗಿ ಜನಪ್ರಿಯರಾಗಿರುವ ಪಾಟೀಲರು ಈಗ ಮತ್ತೆ ಚಿತ್ರರಂಗದತ್ತ ಧಾವಿಸಿದ್ದಾರೆ.

ಪ್ರಸ್ತುತ ಅವರು ನಿರ್ಮಿಸಿ, ನಟಿಸಿ, ನಿರ್ದೇಶಿಸುತ್ತಿರುವ 'ಸೆಲ್ಯೂಟ್' ಚಿತ್ರಕ್ಕೆ ಚಿತ್ರೀಕರಣ ಪೂರ್ಣವಾದ ಬೆನ್ನಲ್ಲೇ ಕರಿಸುಬ್ಬು ಅವರ ಬಾಲಾಜಿ ಡಿಜಿಟಲ್ ಸ್ಟೂಡಿಯೋದಲ್ಲಿ ಮಾತುಗಳ ಜೋಡಣೆ ಪ್ರಕ್ರಿಯೆ ನಡೆಯುತ್ತಿದೆ. ಪಾಟೀಲ್ ಅವರು ಪ್ರಧಾನ ಪಾತ್ರದಲ್ಲಿ ಅಭಿನಯಿಸುತ್ತಿರುವ ಈ ಚಿತ್ರದಲ್ಲಿ ನೈಸ್ ಸಂಸ್ಥೆಯ ಮಾಲೀಕ ಅಶೋಕ್ ಖೇಣಿ ಗಮನಾರ್ಹ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಓಂ ಶಕ್ತಿ ಫಿಲಂಸ್ ಲಾಂಛನದಲ್ಲಿ ನಿರ್ಮಾಣವಾಗುತ್ತಿರುವ ಈ ಚಿತ್ರಕ್ಕೆ ಬಿ.ಸಿ.ಪಾಟೀಲ್ ಅವರೇ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ಸಾಯಿ ಕಾರ್ತಿಕ್ ಸಂಗೀತ, ನಿರಂಜನ ಬಾಬು ಛಾಯಾಗ್ರಹಣ, ರವಿವರ್ಮ ಸಾಹಸ, ಕೆ.ವಿ.ಮಂಜುನಾಥ ರೆಡ್ಡಿ, ಶಂಕರ್ ಸಹ ನಿರ್ದೇಶನವಿರುವ ಚಿತ್ರದ ತಾರಾಬಳಗದಲ್ಲಿ ಬಿ.ಸಿ.ಪಾಟೀಲ್, ಅಶ್ವಿನಿ, ಬಿ.ವಿ.ರಾಧ, ಶೋಭರಾಜ್, ಪ್ರಕಾಶ್, ಸತ್ಯಜಿತ್, ಹರೀಶ್ ರಾಯ್, ಅಶೋಕ್ ಖೇಣಿ, ಲಕ್ಷ್ಮಣ್ ಮುಂತಾದವರಿದ್ದಾರೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada