For Quick Alerts
  ALLOW NOTIFICATIONS  
  For Daily Alerts

  ಒಂದೇ ವಾರದಲ್ಲಿ ಎರಡನೇ ಬಾರಿ ರಜನಿ ಆಸ್ಪತ್ರೆಗೆ

  By Prasad
  |

  ಒಂದೇ ವಾರದಲ್ಲಿ ಸೂಪರ್ ಸ್ಟಾರ್ ರಜನಿಕಾಂತ್ ಅವರು ಎರಡನೇ ಬಾರಿ ಚೆನ್ನೈನ ಆಸ್ಪತ್ರೆಗೆ ದಾಖಲಾಗಿದ್ದಾರೆ. ಪುಪ್ಪುಸದಲ್ಲಿ ಆಗಿರುವ ಸೋಂಕು ಮತ್ತು ವಿಪರೀತ ಜ್ವರವಿರುವ ಕಾರಣ ಅವರನ್ನು ಬುಧವಾರ ರಾತ್ರಿ ಇಸಾಬೆಲ್ ಆಸ್ಪತ್ರೆಗೆ ದಾಖಲು ಮಾಡಿದ್ದು, ಎರಡು ದಿನ ತುರ್ತು ನಿಗಾ ಘಟಕದಲ್ಲಿ ಇರಿಸಲಾಗುತ್ತಿದೆ.

  ಕಳೆದ ಶುಕ್ರವಾರ, ಏಪ್ರಿಲ್ 29ರಂದು ಅವರನ್ನು ಇದೇ ಆಸ್ಪತ್ರೆಗೆ ದಾಖಲಿಸಲಾಗಿತ್ತು. ವಿಪರೀತ ಸುಸ್ತು ಮತ್ತು ಡಿಹೈಡ್ರೇಷನ್ ಇದ್ದ ಅವರಿಗೆ ಚಿಕಿತ್ಸೆ ನೀಡಿ ಒಂದೇ ದಿನದಲ್ಲಿ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿತ್ತು. ಆದರೆ, ಒಂದೇ ವಾರದಲ್ಲಿ ಮತ್ತೆ ಆಸ್ಪತ್ರೆಗೆ ದಾಖಲಾಗಿರುವುದು ಅಭಿಮಾನಿಗಳಲ್ಲಿ ಕಳವಳ ಮೂಡಿಸಿದೆ. ವಿಷಯ ತಿಳಿಯುತ್ತಿದ್ದಂತೆ ಕೆಲ ಅಭಿಮಾನಿಗಳು ಆಸ್ಪತ್ರೆಯ ಎದಿರು ಜಮಾಯಿಸಿದ್ದಾರೆ.

  ಮುಂಜಾಗ್ರತಾ ಕ್ರಮವಾಗಿ ಅವರನ್ನು ಎರಡು ದಿನ ತುರ್ತು ನಿಗಾ ಘಟಕದಲ್ಲಿ ಇರಸಲಾಗುತ್ತಿದೆಯಾದರೂ 60 ವರ್ಷದ ಸೂಪರ್ ಸ್ಟಾರ್ ಆರೋಗ್ಯ ಸ್ಥಿತಿ ಸಮತೋಲನದಲ್ಲಿದೆ. ಯಾವುದೇ ಆತಂತಕ್ಕೆ ಕಾರಣವಿಲ್ಲ ಎಂದು ಆಸ್ಪತ್ರೆಯ ಆರೋಗ್ಯಾಧಿಕಾರಿಗಳು ತಿಳಿಸಿದ್ದಾರೆ. ರಜನಿಕಾಂತ್ ಅವರಿಗೆ ವಿಶ್ರಾಂತಿಯ ಅವಶ್ಯಕತೆಯಿದ್ದರಿಂದ ಅಭಿಮಾನಿಗಳು ಆಸ್ಪತ್ರೆಯ ಎದಿರು ಬಂದು ತೊಂದರೆ ಕೊಡಬಾರದೆಂದು ಅವರ ಕುಟುಂಬದವರು ಆಗ್ರಹಿಸಿದ್ದಾರೆ.

  ರಜನಿಕಾಂತ್ ಅವರ ಹೊಸ ಚಿತ್ರ ರಾಣಾ ಸೆಟ್ ಏರಿದ ದಿನವೇ ಅವರು ಮೊದಲ ಬಾರಿ ಆಸ್ಪತ್ರೆಗೆ ದಾಖಲಾಗಿದ್ದರು. ತ್ರಿಪಾತ್ರದಲ್ಲಿ ಅಭಿನಯಿಸುತ್ತಿರುವ ಅವರ ಜೊತೆ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ, ಅಸಿನ್ ಮತ್ತು ಅನುಷ್ಕಾ ಶೆಟ್ಟಿ ನಾಯಕಿಯರಾಗಿ ಅಭಿನಯಿಸುತ್ತಿದ್ದಾರೆ.

  English summary
  Southern superstar Rajinikanth has been admitted to Isabella hospital in Chennai again in a week due to infection in bronchitis and high fever. He will be in ICU for two days and doctors have adviced rest for few days.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X