ನಂಜನಗೂಡಿನಿಂದ ಬೆಂಗಳೂರಿಗೆ ನಂಜುಂಡ

By Staff

ತನ್ನ ಹೆಂಡತಿ ಸುಂದರಿಯಾಗಿರುವುದೇ ನಾಯಕ ನಂಜುಂಡನ ಅನುಮಾನಕ್ಕೆ ಮೂಲ ಕಾರಣ. ಆಕೆಯನ್ನು ಯಾರು ಮಾತನಾಡಿಸಿದರೂ ಅನುಮಾನಿಸಿ, ಗೊಂದಲ ಉಂಟುಮಾಡಿಕೊಳ್ಳುತ್ತಾನೆ. ಉಳಿದವರ ಕಣ್ಣಲ್ಲಿ ಅಪಹಾಸ್ಯಕ್ಕೀಡಾಗುತ್ತಾನೆ. ಮಾನಸಿಕ ರೋಗಿಯೊಬ್ಬನ ಈ ಕಥೆಯನ್ನು ಹಾಸ್ಯದ ಟಚ್ ಕೊಟ್ಟು ನಿರ್ದೇಶಕ ಶ್ರೀನಿವಾಸಪ್ರಸಾದ್ ತಮ್ಮ ನಿರ್ದೇಶನದ 'ನಂಜನಗೂಡು ನಂಜುಂಡ' ಚಿತ್ರದಲ್ಲಿ ರಸವತ್ತಾಗಿ ನಿರೂಪಿಸುತ್ತಿದ್ದಾರೆ.

ಮಲಯಾಳಂನ 'ಒಡಕ್ಕು ನೌಕಿ ಎಂದಿರಂ' ಚಿತ್ರದ ಕಥೆ ಈ ಚಿತ್ರಕ್ಕೆ ಸ್ಪೂರ್ಥಿ. ಮೈಸೂರು ಸುತ್ತಮುತ್ತ 30 ದಿನಗಳ ಕಾಲ ಮಾತಿನ ಭಾಗ ಚಿತ್ರೀಕರಿಸಿರುವ ಚಿತ್ರ ತಂಡ ಕಳೆದ ವಾರ ನಂಜನಗೂಡಿನಲ್ಲಿ ನಾಯಕನ ಪರಿಚಯದ ಹಾಡನ್ನು ಚಿತ್ರೀಕರಿಸಿಕೊಂಡು ಬೆಂಗಳೂರಿಗೆ ವಾಪಸ್ಸಾಗಿದೆ. ನಾಲ್ಕುದಿನಗಳ ಕಾಲ ನಡೆದ ಈ ಹಾಡಿನ ಚಿತ್ರೀಕರಣದಲ್ಲಿ ನಾಯಕ ರವಿಶಂಕರ್, ಆನೆಯ ಮೇಲೆ ಅಂಬಾರಿಯಲ್ಲಿ ಕುಳಿತು ಅಭಿನಯಿಸಿದ್ದಾರೆ.

ಜೊತೆಗೆ ನಾಯಕಿ ಹಂಸಿಣಿ ಹಾಗೂ 75 ಜನ ನೃತ್ಯ ಕಲಾವಿದರು ಈ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಬೆಂಗಳೂರಿನ ರಾಕ್‌ಲೈನ್ ಸ್ಟುಡಿಯೋದಲ್ಲಿ ಚಿತ್ರದ ಇನ್ನೊಂದು ಹಾಡಿಗೆ ಸೆಟ್ ನಿರ್ಮಿಸಲಾಗುತ್ತಿದ್ದು, ಅದರಲ್ಲಿ ನಾಯಕ, ನಾಯಕಿಯ ಡ್ಯುಯೆಟ್ ಹಾಡನ್ನು ಸದ್ಯದಲ್ಲೇ ಚಿತ್ರೀಕರಿಸಲಾಗುವುದು.

ಉದ್ಯಮಿ ಸುಭಾಷ್ ಕೂರ್ಗ್ ನಿರ್ಮಿಸುತ್ತಿರುವ ಈ ಚಿತ್ರದ ಆರು ಹಾಡುಗಳಿಗೆ ರವಿಚಂದ್ರ ಸಂಗೀತ ಸಂಯೋಜನೆ ಮಾಡಿದ್ದಾರೆ. ಸುರೇಶ್‌ರ ಛಾಯಾಗ್ರಹಣ ಇರುವ ಈ ಚಿತ್ರದ ಪ್ರಮುಖ ತಾರಾಗಣದಲ್ಲಿ ಸಿಲ್ಲಿಲಲ್ಲಿ ಖ್ಯಾತಿಯ ರವಿಶಂಕರ್, ನವನಾಯಕಿ ಹಂಸಿಣಿ, ಕೆ.ಎಸ್.ಎಲ್. ಸ್ವಾಮಿ, ನಾಗರಾಜ್ ಕೋಟೆ ಇದ್ದಾರೆ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X