»   » ಹ್ಯಾಟ್ರಿಕ್ ಹೀರೋ ತಮಸ್ಸುಗೆ 'ಎ' ಸರ್ಟಿಫಿಕೇಟ್

ಹ್ಯಾಟ್ರಿಕ್ ಹೀರೋ ತಮಸ್ಸುಗೆ 'ಎ' ಸರ್ಟಿಫಿಕೇಟ್

Posted By:
Subscribe to Filmibeat Kannada

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ 'ತಮಸ್ಸು' ಚಿತ್ರಕ್ಕೆ ಪ್ರಾದೇಶಿಕ ಸೆನ್ಸಾರ್ ಮಂಡಳಿ 'ಎ' ಪ್ರಮಾಣ ಪತ್ರ ನೀಡಿದೆ. ಚಿತ್ರದಲ್ಲಿನ ಕೆಲವು ವಿವಾದಿತ ದೃಶ್ಯಗಳಿಗೆ ಕತ್ತರಿ ಪ್ರಯೋಗ ಮಾಡಿ ಎ ಪ್ರಮಾಣ ಪತ್ರ ನೀಡಲಾಗಿದೆ. ತಮಸ್ಸು ಚಿತ್ರ ಸೆನ್ಸಾರ್ ನಲ್ಲಿ ಪಾಸಾಗುವ ಮೂಲಕ ವಿವಾದ ಬಗೆಹರಿದಿದೆ.

ಚಿತ್ರದಲ್ಲಿ ಹಿಂದು ಮುಸ್ಲಿಂ ಬಾಂಧವ್ಯಕ್ಕೆ ಧಕ್ಕೆ ತರುವ ಅವಹೇಳನಕಾರಿ ದೃಶ್ಯಗಳಿವೆ. ಧಾರ್ಮಿಕ ಭಾವನೆಗಳನ್ನು ಕೆರಳಿಸುವ ಸಂಭಾಷಣೆಗಳಿವೆ" ಎಂದು ಸೆನ್ಸಾರ್ ಮಂಡಳಿ ಆಕ್ಷೇಪ ವ್ಯಕ್ತಪಡಿಸಿತ್ತು. ಚಿತ್ರದ ನಿರ್ಮಾಪಕ ಎಂ ಎಸ್ ರವೀಂದ್ರ ಅವರು ಸೆನ್ಸಾರ್ ಮಂಡಳಿ ಚಿತ್ರವನ್ನು ಎಡಿಜಿಪಿ (ಕಾನೂನು ಮತ್ತು ಸುವ್ಯವಸ್ಥೆ) ಎ ಆರ್ ಇನ್ ಫ್ಯಾಂಟ್ ಅವರಿಗೆ ತೋರಿಸುವ ಅವಶ್ಯಕತೆ ಏನಿತ್ತು ಎಂದು ಪ್ರಶ್ನಿಸಿದ್ದರು.

ತ್ರದಲ್ಲಿ ಸಾಮಾಜಿಕ ಹಿತಾಸಕ್ತಿಗೆ ಮಾರಕವಾಗುವ ಅಂಶಗಳಿವೆ ಎಂದರೆ ಅದಕ್ಕೆ ಸಂಬಂಧಪಟ್ಟ ಯಾರನ್ನು ಬೇಕಾದರೂ ಚಿತ್ರ ವೀಕ್ಷಣೆಗೆ ಆಹ್ವಾನಿಸಬಹುದು ಎಂದು ಹೇಳಿದ್ದ ಸೆನ್ಸಾರ್ ಕಡೆಗೂ ಚಿತ್ರಕ್ಕೆ 'ಎ' ಪ್ರಮಾಣ ಪತ್ರ ನೀಡುವ ಮೂಲಕ ವಿವಾದಕ್ಕೆ ಅಂತ್ಯ ಹಾಡಿದೆ.

ಚಿತ್ರದ ತಾರಾಗಣದಲ್ಲಿ ಶಿವರಾಜ್ ಕುಮಾರ್, ಪದ್ಮಪ್ರಿಯ, ಹರ್ಷಿಕಾ ಪೂಣಚ್ಚ, ಶರತ್ ಲೋಹಿತಾಶ್ವ ಮುಂತಾದವರಿದ್ದಾರೆ. ಮೆಗಾ ಮೂವೀಸ್ ಲಾಂಛನದಲ್ಲಿ ನಿರ್ಮಾಣವಾಗಿರುವ ಚಿತ್ರ ಜೂನ್ 11ರಂದು ಬಿಡುಗಡೆಯಾಗುತ್ತಿದೆ. ತಮಸ್ಸು ಚಿತ್ರವನ್ನು ಪ್ರೇಕ್ಷಕರು ಕಾತುರದಿಂದ ನಿರೀಕ್ಷಿಸುವಂತಾಗಿದೆ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada