»   »  ಥ್ರಿಲ್ಲರ್ ಮಂಜು ನಿರ್ದೇಶನದಲ್ಲಿ ಉಪೇಂದ್ರ

ಥ್ರಿಲ್ಲರ್ ಮಂಜು ನಿರ್ದೇಶನದಲ್ಲಿ ಉಪೇಂದ್ರ

Subscribe to Filmibeat Kannada
Thriller Manju to direct Upendra
ಸೂಪರ್ ಸ್ಟಾರ್ ಉಪೇಂದ್ರ ಅಭಿನಯಿಸಲಿರುವ ಹೊಸ ಚಿತ್ರದ ಹೆಸರು 'ರಜನಿ'. ಕೋಟಿ ನಿರ್ಮಾಪಕ ರಾಮು ನಿರ್ಮಿಸುತ್ತಿರುವ 'ರಜನಿ' ಮಾರ್ಚ್ 16ರಿಂದ ಚಿತ್ರೀಕರಣ ಆರಂಭಿಸಲಿದೆ. ಚಿತ್ರಕತೆ, ಸಾಹಸ ಮತ್ತು ನಿರ್ದೇಶನದ ಹೊಣೆಯನ್ನು ಥ್ರಿಲ್ಲರ್ ಮಂಜು ಹೊತ್ತಿದ್ದಾರೆ. ಹಿನ್ನೆಲೆ ಸಂಗೀತ ಹಂಸಲೇಖ ಅವರದು.

ತೆಲುಗಿನ 'ಕೃಷ್ಣ' ಚಿತ್ರದ ರೀಮೇಕ್ 'ರಜಜಿ'. ತೆಲುಗಿನಲ್ಲಿ ರವಿತೇಜ ಮತ್ತು ತ್ರಿಷಾ ನಟಿಸಿರುವ ಆ ಚಿತ್ರ ಮಾರ್ಚ್ 16ರಂದು ಬಿಡುಗಡೆಯಾಗಲಿದೆ. ಉಪೇಂದ್ರ ಜತೆ ನಟಿಸಲಿರುವ ನಾಯಕಿಗಾಗಿ ಹುಟುಕಾಟ ಆರಂಭವಾಗಿದೆ. ರಜನಿ ಚಿತ್ರ ರಂಗಾಯಣ ರಘು, ಚರಣ್ ರಾಜ್, ಸಾಧು ಕೋಕಿಲ, ಅವಿನಾಶ್, ಶರಣ್, ರಮೇಶ್ ಭಟ್ ಮುಂತಾದವರ ತಾರಾಗಣವನ್ನು ಒಳಗೊಂಡಿದೆ.

ರಾಮು ನಿರ್ಮಾಣದ 27ನೇ ಚಿತ್ರ ಇದಾಗಿದ್ದು, ಥ್ರಿಲ್ಲರ್ ಮಂಜುಗೆ 350ನೇ ಚಿತ್ರವಾಗಲಿದೆ. ಚಿತ್ರಸಾಹಿತಿ ರಾಮ್ ನಾರಾಯಣ್ ಸಂಭಾಷಣೆ ಬರೆಯುತ್ತಿದ್ದಾರೆ. ತೆಲುಗು, ತಮಿಳಿನಲ್ಲಿ ಗೆದ್ದ ಎಲ್ಲ ಮಸಾಲೆ ಚಿತ್ರಗಳೂ ಒಂದೊಂದಾಗಿ ಕನ್ನಡಕ್ಕೆ ರೀಮೇಕ್ ಆಗುತ್ತಿವೆ.ಈ ಸಾಲಿಗೆ ತೆಲುಗಿನ ಕೃಷ್ಣ ಚಿತ್ರವೂ ಹೊಸದಾಗಿ ಸೇರ್ಪಡೆಯಾಗಿದೆ.

(ದಟ್ಸ್ ಕನ್ನಡ ಚಿತ್ರವಾರ್ತೆ)
ಮರಸುತ್ತೊ ಪ್ರೇಮಿಗಳಾಗಿ ಉಪ್ಪಿ, ಪ್ರಿಯಾಂಕ

Please Wait while comments are loading...