For Quick Alerts
  ALLOW NOTIFICATIONS  
  For Daily Alerts

  ಗಣೇಶನ ಹೊಸ ಉಲ್ಲಾಸ ನವ ಉತ್ಸಾಹ!

  By Staff
  |
  ಗೋಲ್ಡನ್ ಸ್ಟಾರ್ ಗಣೇಶ್ ವರ್ಷದ ಆರಂಭದಲ್ಲೇ ಉತ್ಸಾಹಿತರಾಗಿದ್ದಾರೆ. ಸರ್ಕಸ್ ಚಿತ್ರದ ಹಾಡುಗಳು ಜನರ ಬಾಯಲ್ಲಿ ನಲಿದಾಡುತ್ತಿವೆ. ಇದರ ಜೊತೆಗೆ ಹೊಸ ಚಿತ್ರಗಳು ಸೆಟ್ಟೇರುತ್ತಿದೆ.ಈಗಾಗಲೇ ದಟ್ಸ್ ಕನ್ನಡದಲ್ಲಿ ಪ್ರಕಟವಾದಂತೆ, ಉಲ್ಲಾಸಂಗಾ ಉತ್ಸಾಹಂಗಾ ಚಿತ್ರದ ಕನ್ನಡ ರಿಮೇಕ್ ಉಲ್ಲಾಸ ಉತ್ಸಾಹ ದ ಚಿತ್ರೀಕರಣ ಭರದಿಂದ ಸಾಗಿದೆ. ಈಗಾಗಲೇ ಎರಡು ಶೆಡ್ಯೂಲ್ ಚಿತ್ರೀಕರಣ ಪೂರ್ಣಗೊಂಡಿದೆ.

  ಕಳೆದ ವರ್ಷದ ಕೊನೇ ಭಾಗದಲ್ಲಿ ಬಿಡುಗಡೆಗೊಂಡು ಇಡೀ ಆಂಧ್ರದಾದ್ಯಂತ ಮಿಂಚಿನ ಸಂಚಲನವನ್ನೇ ಸೃಷ್ಟಿಸಿ ಇಡೀ ದಕ್ಷಿಣ ಭಾರತದ ಸಿನಿಮಾ ಮಂದಿಯನ್ನು ಆಕರ್ಷಿಸಿದ ತೆಲುಗಿನ ಉಲ್ಲಾಸಂಗಾ ಉತ್ಸಾಹಂಗಾ ಚಿತ್ರ ಈಗ ಕನ್ನಡಕ್ಕೆ ರೀಮೇಕ್ ಆಗುತ್ತಿದೆ. ತೆಲುಗಿನ ಮೂಲ ಚಿತ್ರವನ್ನು ಕೂಡ ನಮ್ಮ ಕನ್ನಡದ ಹಳೆಯ ನಿರ್ಮಾಪಕ ಸೋಮು ಅವರೇ ನಿರ್ಮಿಸಿದ್ದರು. ಅಷ್ಟೇ ಅಲ್ಲದೆ ಅವರ ಮಗ ಯಶೋ ಸಾಗರ್ ನಾಯಕನಟನಾಗಿ ಕಾಣಿಸಿಕೊಂಡಿದ್ದ. ಈ ಯಶೋ ಸಾಗರ್ ಕನ್ನಡದ ಹುಡುಗನೇ ಆಗಿದ್ದರೂ ಕನ್ನಡ ಅವತರಿಣಿಕೆಯಲ್ಲಿ ಗಣೇಶ್‌ನನ್ನು ನಾಯಕನನ್ನಾಗಿ ಆಯ್ಕೆ ಮಾಡಿಕೊಂಡಿರುವುದು ವಿಶೇಷ.

  ಓಂಪ್ರಕಾಶ್ ರಾವ್, ನಾಗಣ್ಣ ಮುಂತಾದ ನಿರ್ದೇಶಕರ ಕೈಕೆಳಗೆ ಸಹಾಯಕ ನಿರ್ದೇಶಕರಾಗಿ, ಸಹ ನಿರ್ದೇಶಕರಾಗಿ ದುಡಿದ ದೇವರಾಜ್ ಪಾಲನ್ ಈ ಚಿತ್ರವನ್ನು ನಿದೇಶಿಸುತ್ತಿದ್ದಾರೆ. ಸುಮಾರು 48 ಚಿತ್ರಗಳಿಗೆ ಅಸೋಸಿಯೇಟ್ ಆಗಿದ್ದ ದೇವರಾಜ್ ಅವರ ಅನುಭವಕ್ಕೆ ನಿರ್ಮಾಪಕ ಸೋಮು ಮತ್ತು ಅವರ ಸಹೋದರ ತ್ಯಾಗು ಮಣೆ ಹಾಕಿದ್ದಾರೆ.

  ಇನ್ನು ರವಿಚಂದ್ರನ್ ಗರಡಿಯಲ್ಲಿ ಪಳಗಿಬಂದ ಸೀತಾರಾಂ ಈ ಚಿತ್ರಕ್ಕೆ ಕ್ಯಾಮೆರಾ ಕೆಲಸವನ್ನು ನಿಭಾಯಿಸುತ್ತಿದ್ದಾರೆ. ಈ ಚಿತ್ರದ ನಾಯಕಿಯಾಗಿ ಕಿರುತೆರೆಯಲ್ಲಿ ಮಿಂಚುತ್ತಿರುವ ಯಾಮಿ ಗೌತಂ ಆಯ್ಕೆಯಾಗಿದ್ದಾರೆ. ಉತ್ಸಾಹದಿಂದ ಚಿತ್ರೀಕರಣದಲ್ಲಿ ಪಾಲ್ಗೊಂಡಿರುವ ತಂಡಕ್ಕೆ ರಿಮೇಕ್ ಚಿತ್ರವಾದರೂ ಮುಂದೆ ಉಲ್ಲಾಸ ಮೂಡಲಿ ಎಂದು ಹಾರೈಸೋಣ.

  (ದಟ್ಸ್ ಕನ್ನಡಸಿನಿ ವಾರ್ತೆ)
  ಮತ್ತೊಂದು ರಿಮೇಕ್ ಚಿತ್ರದಲ್ಲಿ ಗೋಲ್ಡನ್ ಸ್ಟಾರ್
  ಯಶಸ್ಸಿನ ಸಾಗರದಲ್ಲಿ ಪಲಾಯನವಾದ ಪ್ರತಿಭೆ
  ಗಣೇಶ್ ರಿಮೇಕ್ ಚಿತ್ರಕ್ಕೆ ಆಮದು ಬೆಡಗಿ ಯಾಮಿ

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X