»   »  ಮರಸುತ್ತೊ ಪ್ರೇಮಿಗಳಾಗಿ ಉಪ್ಪಿ, ಪ್ರಿಯಾಂಕ

ಮರಸುತ್ತೊ ಪ್ರೇಮಿಗಳಾಗಿ ಉಪ್ಪಿ, ಪ್ರಿಯಾಂಕ

Subscribe to Filmibeat Kannada

ನಟಿ ಪ್ರಿಯಾಂಕಾ ದಾಂಪತ್ಯಕ್ಕೆ ಅಡಿಯಿಟ್ಟ ಮೇಲೆ ನಟನೆಯಿಂದ ದೂರ ಸರಿದಿದ್ದರು. 7-8 ವರ್ಷಗಳ ಬಳಿಕ ಈಗ ಮತ್ತೆ ಬಣ್ಣಬಳಿದುಕೊಳ್ಳಲು ಒಪ್ಪಿಕೊಂಡಿದ್ದಾರೆ. ಅವರನ್ನು ಒಪ್ಪಿಸಿರುವುದು ಮತ್ಯಾರು ಅಲ್ಲ ಪ್ರಿಯಾಂಕರ ಪತಿ ಉಪೇಂದ್ರ. ಸುದೀರ್ಘ ವಿರಾಮದ ನಂತರ ಉಪೇಂದ್ರ ಮತ್ತು ಪ್ರಿಯಾಂಕ ಪ್ರೇಮಿಗಳಾಗಿ ಮರಸುತ್ತಲಿದ್ದಾರೆ.

ನಟನೆಗಿಂತಲೂ ಮಕ್ಕಳ ಲಾಲನೆ, ಪಾಲನೆಯೇ ಮುಖ್ಯ ಎನ್ನುತ್ತಾರೆ ಪ್ರಿಯಾಂಕ. ಉಪೇಂದ್ರ ಜತೆ ನಟಿಸುವುದು ಅನಿವಾರ್ಯವಾಗಿರುವ ಕಾರಣ ಮಕ್ಕ್ಕಳನ್ನು ನೋಡಿಕೊಳ್ಳಲು ಕೋಲ್ಕತ್ತಾದಿಂದ ತಮ್ಮ ತಾಯಿಯನ್ನು ಕರೆಸುತ್ತಿರುವುದಾಗಿ ಪ್ರಿಯಾಂಕ ಹೇಳಿದ್ದಾರೆ .

ಬೆಂಗಳೂರಿನ ಹೆಬ್ಬಾಳದಲ್ಲಿ ಚಿತ್ರೀಕರಣ ಭರದಿಂದ ಸಾಗುತ್ತಿದೆ. ಕತೆ, ಚಿತ್ರಕತೆ, ಸಂಭಾಷಣೆ ಉಪೇಂದ್ರ. ವೇಮರೆಡ್ಡಿ ನಿರ್ಮಿಸುತ್ತಿರುವ ಈ ಚಿತ್ರವನ್ನು ತೆಲುಗಿನ ಸಂಪತ್ ನಿರ್ದೇಶಿಸುತ್ತಿದ್ದಾರೆ. ಸೆಲೀನಾ ಜೇಟ್ಲಿಯನ್ನು ಈ ಚಿತ್ರಕ್ಕೆ ಕರೆತರುವ ಪ್ರಯತ್ನವನ್ನು ಮಾಡಲಾಗಿತ್ತು. ನಂತರ ಉಪೇಂದ್ರರ ಪತ್ನಿ ಪ್ರಿಯಾಂಕರನ್ನೇ ನಾಯಕಿಯನ್ನಾಗಿ ಆಯ್ಕೆ ಮಾಡಲಾಗಿದೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

ಪ್ರಿಯಾಂಕ ಉಪೇಂದ್ರ ಚಿತ್ರಪಟ

Please Wait while comments are loading...