»   »  ಉಪೇಂದ್ರನಿಗೆ 40 ಹೊಸ ಡ್ರೆಸ್ ಗಳು!

ಉಪೇಂದ್ರನಿಗೆ 40 ಹೊಸ ಡ್ರೆಸ್ ಗಳು!

Subscribe to Filmibeat Kannada
Upendra
ರಾಮು ಎಂಟರ್‌ಪ್ರೈಸಸ್ ಲಾಂಛನದಲ್ಲಿ ನಿರ್ಮಾಪಕ ರಾಮು ನಿರ್ಮಿಸುತ್ತಿರುವ ಅದ್ದೂರಿ ರಜನಿ ಚಿತ್ರದ ಪ್ರಥಮ ಹಂತದ ಚಿತ್ರೀಕರಣವು ಇದೇ ಏ.23 ರಂದು ಮೈಸೂರಿನಲ್ಲಿ ಮುಕ್ತಾಯಗೊಂಡಿತು. 23 ದಿವಸಗಳ ಕಾಲ ನಡೆದ ಚಿತ್ರದ ಚಿತ್ರೀಕರಣದಲ್ಲಿ, ಖಾಲಿ ಕೂತಿದ್ದ ಈ ರಜನಿಫುಲ್ ಟೈಂಜಾಬ್ ಕೊಟ್ಲು ಸಜನಿ ಎಂಬ ಗೀತೆಯನ್ನು ಉಪೇಂದ್ರ, ಆರತಿ ಛಾಬ್ರಿಯಾ ಹಾಗೂ 80 ಜನ ಸಹ ನರ್ತಕಿಯರ ಮೇಲೆ ಮೈಸೂರು ಅರಮನೆ, ಲಲಿತಮಹಲ್‌ಸೆಟ್ ಕಪಿಲಾನದಿ, ರೈಲ್ವೆ ಬೋಗಿ, ಕೆ.ಆರ್.ಎಸ್. ಸುತ್ತಮುತ್ತ ನಾಲ್ಕು ಕ್ಯಾಮೆರಾಗಳನ್ನು ಬಳಸಿ, ಫೈವ್‌ಸ್ಟಾರ್ ಗಣೇಶ್ ನೃತ್ಯ ನಿರ್ದೇಶನದಲ್ಲಿ ನಿರ್ದೇಶಕ ಥ್ರಿಲ್ಲರ್ ಮಂಜು ಚಿತ್ರಿಸಿಕೊಂಡರು.

ಈ ಒಂದು ಹಾಡಿಗೆ ಉಪೇಂದ್ರ ನಲವತ್ತು ಡ್ರಸ್‌ಗಳನ್ನು ಬದಲಿಸಿದ್ದಾರೆ. ಹಾಗೂ ರಜನಿ ಅಣ್ಣ ರಾಮಚಂದ್ರ (ರಮೇಶ್‌ಭಟ್) ತುಳಸಿಯನ್ನು ಸರ್ಕಲ್‌ನಲ್ಲಿ ನಿಲ್ಲಿಸಿ ಗುಂಪು ಸೇರಿಸಿಕೊಂಡು ಲಂಕಾರಾಜು (ದಂಡಪಾಣಿ) ಅವಮಾನ ಮಾಡುತ್ತಿದ್ದಾಗ ಮಿಂಚಿನಂತೆ ಬಂದ ರಜನಿ ಆ ಗುಂಪಿನೊಂದಿಗೆ ಹೋರಾಡಿ ಅಣ್ಣ ಅತ್ತಿಗೆಯನ್ನು ಕಾಪಾಡುವ ಮೈ ನವಿರೇಳಿಸುವ ಸನ್ನಿವೇಶವನ್ನು ನಾಲ್ಕು ಮಾರುತಿ ವ್ಯಾನ್, ಎರಡು ಟೆಂಪೋಟ್ರಾವಲರ್, 4ಆಟೋ ಹಾಗೂ ಫೈಟರ್ಸ್‌ಗಳ ಮೇಲೆ ತಮ್ಮದೇ ಸಾಹಸ ನಿರ್ದೇಶನದಲ್ಲಿ ನಿರ್ದೇಶಕ ಥ್ರಿಲ್ಲರ್ ಮಂಜು, ಜನಾರ್ಧನ್ ಛಾಯಾಗ್ರಹಣದಲ್ಲಿ ಚಿತ್ರಿಸಿಕೊಂಡರು.

ಚಿತ್ರದ ದ್ವಿತೀಯ ಹಂತದ ಚಿತ್ರೀಕರಣವು ಏ. 28ರಿಂದ ಬೆಂಗಳೂರಿನಲ್ಲಿ ಆರಂಭವಾಗಿದೆ ಎಂದು ನಿರ್ಮಾಪಕ ರಾಮು ತಿಳಿಸಿದ್ದಾರೆ.ಚಿತ್ರಕ್ಕೆ ರಾಂ ನಾರಾಯಣ್ ಸಂಭಾಷಣೆ, ಜನಾರ್ಧನ್ ಛಾಯಾಗ್ರಹಣ, ಹಂಸಲೇಖ ಸಂಗೀತ, ಇಸ್ಮಾಯಿಲ್ ಕಲೆ, ಶ್ರೀನಿವಾಸ್‌ಕುಮಾರ್ ನಿರ್ದೇಶನ ಸಹಾಯ, ಅನಿಲ್, ಸೋಮು, ನಿರ್ಮಾಣ-ನಿರ್ವಹಣೆಯಿದ್ದು, ಚಿತ್ರದ ಸಾಹಸ ಚಿತ್ರಕಥೆ ಮತ್ತು ನಿರ್ದೇಶನ ಥ್ರಿಲ್ಲರ್‌ಮಂಜು.

(ದಟ್ಸ್ ಕನ್ನಡ ಚಿತ್ರವಾರ್ತೆ)

ಉಪೇಂದ್ರ ರಜನಿ ಚಿತ್ರದಲ್ಲಿ ಆರತಿ ಛಾಬ್ರಿಯಾ
ರಜನಿ ಚಿತ್ರಕ್ಕೆ ಮೈಸೂರಿನಲ್ಲಿ ಅದ್ದೂರಿ ಕ್ಲೈಮ್ಯಾಕ್ಸ್
'ಸ್ಟಾರ್ ರ್ಕ್ರಿಯೇಟರ್ಸ್ ಹೊಸ ಚಿತ್ರ 'ರಜನಿ"
ರಜನಿ ಆಯ್ತು ಈಗ ರಜನಿ ಸೂಪರ್ ಸ್ಟಾರ್ ಚಿತ್ರ
ಹೈದರಾಬಾದ್‌ನಲ್ಲಿ ಉಪೇಂದ್ರ ಅವರ ಶ್ರೀಮತಿ

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada