»   »  ಚುನಾವಣಾ ಪ್ರಚಾರದಲ್ಲಿ ನಟಿ ತಾರಾಗೆ ಸಿಕ್ಕಿದ್ದೇನು?

ಚುನಾವಣಾ ಪ್ರಚಾರದಲ್ಲಿ ನಟಿ ತಾರಾಗೆ ಸಿಕ್ಕಿದ್ದೇನು?

Subscribe to Filmibeat Kannada
actress tara busy in distributing sarees
ಇಷ್ಟು ದಿನ ಬಿಜೆಪಿ ಪರ ಚುನಾವಣಾ ಪ್ರಚಾರದಲ್ಲಿ ಬ್ಯುಸಿಯಾಗಿದ್ದ ನಟಿ ತಾರಾ ಈಗ ಕೊಂಚ ರಿಲ್ಯಾಕ್ಸ್ ಆಗಿದ್ದಾರೆ. ಚುನಾವಣಾ ಪ್ರಚಾರದಲ್ಲಿ ತಾರಾ ಅವರಿಗೆ ಸಿಕ್ಕಿದ್ದೇನು? ಹಾಗಂತ ಅವರನ್ನು ಕೇಳಿದರೆ, ಅವರು ನಕ್ಕು 50 ಸೀರೆಗಳು ಮತ್ತು 150 ರವಿಕೆ ಬಟ್ಟೆಗಳು ಬಳುವಳಿಯಾಗಿ ಬಂದಿವೆ ಎನ್ನುತ್ತಾರೆ!

ಅಷ್ಟು ಸೀರೆ ಮತ್ತು ರವಿಕೆ ಬಟ್ಟೆಗಳನ್ನು ಏನು ಮಾಡುತ್ತಿದ್ದೀರಿ? ಎಂದು ಪ್ರಶ್ನಿಸಿದರೆ, ಆಪ್ತರು ಮತ್ತು ದೇವಸ್ಥಾನಗಳಿಗೆ ಹಂಚುತ್ತಿರುವುದಾಗಿ ತಿಳಿಸುತ್ತಾರೆ. ಬಿಜೆಪಿ ಕಾರ್ಯಕರ್ತರೇ ಈ ಸೀರೆ, ಕುಪ್ಪಸಗಳನ್ನು ಕೊಡುತ್ತಿರಬೇಕು ಎಂದುಕೊಂಡಿದ್ದೆ. ಆದರೆ ಅವರ್ಯಾರು ಬಿಜೆಪಿ ಕಾರ್ಯಕರ್ತರಲ್ಲ. ನನ್ನ ಮೇಲಿನ ಅಭಿಮಾನದಿಂದ ಕೊಡುತ್ತಿದ್ದಾರೆ ಎಂದು ನಂತರ ಗೊತ್ತಾಯಿತು ಎನ್ನುತ್ತಾರೆ ತಾರಾ. ಲೋಕಸಭೆ ಚುನಾವಣಾ ಪ್ರಚಾರದಲ್ಲಿ ಕರ್ನಾಟಕದ ಹಳ್ಳಿ ಹಳ್ಳಿಗಳನ್ನು ನೋಡುವ ಸೌಭಾಗ್ಯ ದೊರೆಯಿತು. ಹಿಂದೆಂದೂ ನೋಡದಷ್ಟು ಹಳ್ಳಿಗಳನ್ನ್ನು ಸಂದರ್ಶಿಸಿದ್ದೇನೆ ಎಂದು ಖುಷಿಯಾಗುತ್ತಾರೆ ತಾರಾ.

ಬಿಡುವಿಲ್ಲದ ಚುನಾವಣಾ ಪ್ರಚಾರ ಕಾರ್ಯಗಳಿಂದ ಬಳಲಿ ಬೆಂಡಾಗಿರುವ ತಾರಾ, ದಣಿವಾರಿಸಿಕೊಳ್ಳಲು ಅವರ ಬಾಳ ಸಂಗಾತಿ ವೇಣು ಜತೆ ಪ್ರವಾಸ ಹೊರಡುವ ಸಿದ್ಧತೆಯಲ್ಲಿದ್ದಾರೆ. ಆದರೆ ವೇಣು ಮಾತ್ರ ಕ್ಯಾಮೆರಾ ಹಿಡಿದು 'ಸೂರ್ಯಕಾಂತಿ' ಚಿತ್ರೀಕರಣಕ್ಕಾಗಿಉಜ್ಬೆಕಿಸ್ತಾನಕ್ಕೆ ಹಾರಿದ್ದಾರೆ! ವೇಣು ಹಿಂತಿರುಗುವುದು ಇನ್ನ್ನೂ ಒಂದು ತಿಂಗಳಾಗುತ್ತದಂತೆ. ಅಲ್ಲಿಯವರೆಗೂ ತಾರಾ ಮೇಡಂ ಸೀರೆ, ಕುಪ್ಪಸಗಳನ್ನು ಹಂಚುವ ಬ್ಯುಸಿ!

(ದಟ್ಸ್ ಕನ್ನಡ ವಾರ್ತೆ)

ನಟಿ ತಾರಾ ಅಧಿಕೃತವಾಗಿ ಬಿಜೆಪಿಗೆ ಸೇರ್ಪಡೆ
ಭಾರತೀಯ ಜನತಾ ಪಕ್ಷಕ್ಕೆ 'ತಾರಾ' ಬಲ?
ಅನಂತಕುಮಾರ್ ಪರ ನಟಿ ತಾರಾ ಖಡಕ್ ಪ್ರಚಾರ!
ನಟಿ ತಾರಾ ಸುರಿಸಿದ ಗಂಗಾ ಕಾವೇರಿ ಪ್ರವಾಹ

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada