»   »  ಇನ್ನೋವೇಟಿವ್ ಫಿಲಂ ಸಿಟಿಯಲ್ಲಿ 'ದೇವದಾಸ್'

ಇನ್ನೋವೇಟಿವ್ ಫಿಲಂ ಸಿಟಿಯಲ್ಲಿ 'ದೇವದಾಸ್'

Posted By:
Subscribe to Filmibeat Kannada

ಪ್ರೀತಿಯ ಹುಚ್ಚನಾದ 'ದೇವದಾಸ್' ಕೊನೆಗೂ ತನ್ನ ಹುಡುಗಿಯ ಮನಸ್ಸನ್ನು ಗೆದ್ದು ಆಕೆಯನ್ನು ವರಿಸಲು ಮುಂದಾಗುತ್ತಾನೆ. ತನ್ನ ಹೆತ್ತ ತಂದೆಯ ಎದುರೇ ರೌಡಿಗಳೊಂದಿಗೆ ಹೊಡೆದಾಡಿ ತನ್ನ ಹುಡುಗಿಯನ್ನು ರಕ್ಷಿಸಿ, ಆಕೆಯನ್ನು ಶಾಸ್ತ್ರೋಕ್ತವಾಗಿ ಸಾಂಪ್ರದಾಯದಂತೆ ಸಪ್ತಪದಿ ತುಳಿದು ಮದುವೆ ಮಾಡಿಕೊಳ್ಳುತ್ತಾನೆ.

ಆ ಮದುವೆಗೆ ಆತನ ಬಂಧುಗಳು ಬಂದು ನೂತನ ವಧೂ-ವರರನ್ನು ಆಶೀರ್ವದಿಸಿದರು. ಈ ಮೇಲಿನ ದೃಶ್ಯವನ್ನು ದೇವದಾಸ್ ಚಿತ್ರದ ನಿರ್ದೇಶಕ ಎ.ಬಿ.ಸಿ.ಡಿ.ಶಾಂತಕುಮಾರ್ ಅವರು ಬೆಂಗಳೂರಿನ ಇನ್ನೋವೇಟಿವ್ ಫಿಲಂ ಸಿಟಿಯಲ್ಲಿ ಚಿತ್ರೀಕರಿಸಿಕೊಂಡರು. ರಂಗಾಯಣ ರಘು, ನಾಯಕ ಯೋಗೀಶ್, ನಾಯಕ ಜೀನಲ್ ಪ್ಯಾಂಡಿ ಹಾಗೂ ನೂರಾರು ಸಹ ಕಲಾವಿದರು ಈ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದರು. ಈ ದೃಶ್ಯದೊಂದಿಗೆ ಚಿತ್ರದ ಮಾತಿನ ಭಾಗದ ಚಿತ್ರೀಕರಣ ಮುಕ್ತಾಯಗೊಂಡಿತು.

ಜಿ.ರೇಣುಕುಮಾರ್ ಛಾಯಾಗ್ರಹಣ, ವಿ ಹರಿಕೃಷ್ಣ ಸಂಗೀತ, ಎಸ್.ಮಂಜುನಾಥ ಸಂಭಾಷಣೆ, ಶ್ಯಾಂ ಸಂಕಲನ, ಢಿಫರೆಂಟ್ ಡ್ಯಾನಿ ಸಾಹಸ, ಜಿ.ನರಸಿಂಹ ಬಿ.ಎ.ಕಿರಣ್‌ಕುಮಾರ್ ಸಹ ನಿರ್ಮಾಪಕರು. ವಿಜಿ ಭದ್ರಾವತಿ, ಮೋಹನ್ ಮಾಳಗಿ, ಎಸ್.ಕೃಷ್ಣ ಸಹ ನಿರ್ದೇಶನವಿರುವ ಚಿತ್ರದ ತಾರಾಬಳಗದಲ್ಲಿ ಯೋಗೇಶ್ ಜೀನಲ್ ಪ್ಯಾಂಡೆ, ತಾರಾ, ರಂಗಾಯಣ ರಘು ರಮೇಶ್ ಭಟ್, ಶರಣ್, ಧರ್ಮ, ಅರವಿಂದ್ ಪ್ರಮೀಳಾ ಜೋಷಾಯ್ ಮುಂತಾದವರು ಅಭಿನಯಿಸಿದ್ದಾರೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada