»   »  ಗಣೇಶನ ಸದ್ಯದ ನಂಬರ್ ನಾಟ್ ರೀಚಬಲ್!

ಗಣೇಶನ ಸದ್ಯದ ನಂಬರ್ ನಾಟ್ ರೀಚಬಲ್!

By: *ಜಯಂತಿ
Subscribe to Filmibeat Kannada

2006 ರ ಗಣೇಶ

Ganesh
ಪ್ರೆಸ್ ಕಾನ್ಫರೆನ್ಸ್‌ನ ಸ್ಥಳ. ಗೋಷ್ಠಿ ಶುರುವಾಗಲು ಇನ್ನೂ ಹದಿನೈದು ನಿಮಿಷ ಬಾಕಿ ಇದೆ. 'ಮುಂಗಾರು ಮಳೆ"ಯ ವಾಸನೆ ಜೋರಾಗಿದ್ದ ಕಾಲ. ನಗುಮುಖ ಹೊತ್ತು ಎಲ್ಲರನ್ನೂ ಪರಿಚಯ ಮಾಡಿಕೊಂಡು, ಉಭಯಕುಶಲೋಪರಿ ವಿಚಾರಿಸಿ, ನಿಮ್ಮಿಂದಲೇ ಎತ್ತರಕ್ಕೆ ಬೆಳೆದದ್ದು ಹಾಗೆ ಹೀಗೆ ಅಂತೆಲ್ಲಾ ಹೇಳಿಕೊಳ್ಳುತ್ತಿದ್ದ ಕಾಮಿಡಿ ಟೈಮ್ ಹುಡುಗ. ಎಷ್ಟು ಪ್ರಶ್ನೆ ಕೇಳಿದರೂ ಬೇಸರವಿಲ್ಲ. ಎಲ್ಲಕ್ಕೂ ನಗುಮೊಗದ ಉತ್ತರ. ಪರಿಣಾಮ ಕೆಲವು ಸುದ್ದಿಮಿತ್ರರೊಟ್ಟಿಗೂ ಅತಿಯಾದ ನಂಟು. ಆಗೀಗ ಮನೆಗೆ ಹೋಗಿ ಊಟ ಮಾಡಿಕೊಂಡು ಬರುತ್ತಿದ್ದುದೂ ಉಂಟು! ಹಬ್ಬ ಹರಿದಿನಗಳಿಗೆ ಎಸ್‌ಎಂಎಸ್ ಶುಭ ಸಂದೇಶ. ವಿನಾಕಾರಣ ಫೋನ್ ಮಾಡಿ, ಆರೋಗ್ಯ ವಿಚಾರಿಸಿಕೊಳ್ಳುವ ವಿಚಿತ್ರ ಪರಿ (ತನಗೆ ತಾನೇ ಒಳ್ಳೆಯ ಪಿಆರ್ ಆಗುವುದು ಅಂದರೆ ಇದೇನೆ!).

2007ರ ಗಣೇಶ
'ಸರ್, ಗಣೇಶ ಬೇಕಿತ್ತಲ್ಲಾ?" ಅಂತ ಫೋನೆತ್ತಿದವರಿಗೆ ಪ್ರಶ್ನೆ. 'ಅವರ ಕಾಲ್‌ಷೀಟ್ ಇಲ್ಲ" ಅಲ್ಲಿಂದ ಉತ್ತರ. 'ಕಾಲ್‌ಷೀಟ್ ಅಲ್ಲ, ಒಂದು ಸಮಾರಂಭಕ್ಕೆ ಅತಿಥಿಯಾಗಿ ಬರಬೇಕು; ಅಷ್ಟೆ" ವಿನಂತಿ. 'ಅವರ ರೇಟು ದಿನಕ್ಕೆ ಐದು ಲಕ್ಷ ಇದೆ. ಇಷ್ಟವಿದ್ದರೆ ಮುಂದುವರಿಯಬಹುದು. ಫಂಕ್ಷನ್ನಿಗೂ ಅಷ್ಟೇ ರೇಟು". ವಿನಂತಿಸಿಕೊಂಡವರು ಬೆಚ್ಚಿ ಬೀಳುವುದಷ್ಟೇ ಬಾಕಿ!

2008ರ ಗಣೇಶ
ಉಲ್ಲಾಸ ಉತ್ಸಾಹ ಪ್ರೆಸ್ ಕಾನ್ಫರೆನ್ಸ್. ಮೇಲ್ಮಹಡಿಯಲ್ಲಿ ಕೆಲವು ಇಂಗ್ಲಿಷ್ ಪತ್ರಕರ್ತರ ಜೊತೆ (ಪತ್ರಕರ್ತೆಯರು ಅನ್ನುವ ಪದ ಬಳಕೆಯಲ್ಲಿ ಇಲ್ಲವಲ್ಲ!) ಗಣೇಶನ ಒನ್ ಟು ಒನ್. ಈಗ ಬಂದಾರು ಆಗ ಬಂದಾರು ಅನ್ನುವ ನಿರೀಕ್ಷೆಯಲ್ಲಿ ಕೆಳಗೆ ಸ್ದುದಿಮಿತ್ರರು. ನಿಗದಿತ ಸಮಯಕ್ಕಿಂತ ಕೇವಲ ಮುಕ್ಕಾಲು ಗಂಟೆ ತಡವಾಗಿ ಗಣೇಶ ಬಂದರು. ಸುದ್ದಿಗೋಷ್ಠಿಯ ನಂತರ ಪಾನಗೋಷ್ಠಿ. ಅಲ್ಲಿ ಸಿಟಿಂಗ್‌ಗೆ ಕೂತವರು ಮತ್ತೆ ಗಣೇಶ ಬಂದಾನು ಅಂತ ಕಾದದ್ದೇ ಕಾದದ್ದು. ಇದೋ ಬಂದೆ ಅಂತ ಹೊರಟ ಗಣೇಶ ಕೊನೆಗೂ ಬರಲೇ ಇಲ್ಲ! ಅವರು ಯಾವ ಕೆರೆಯಲ್ಲಿ ಮುಳುಗಿದರೊ?

ಈ ಮೂರು ವರ್ಷಗಳಲ್ಲಿ ಗಣೇಶನ ಫೋನ್ ನಂಬರ್ ಪದೇಪದೇ ಬದಲಾಗಿದೆ. ಸದ್ಯದ ನಂಬರ್ ನಾಟ್ ರೀಚಬಲ್!

ಹೊಸ ಉಲ್ಲಾಸ ನವ ಉತ್ಸಾಹದಲ್ಲಿ ಗಣೇಶ!

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada