»   » ಕನ್ನಡದ 'ಡರ್ಟಿ ಪಿಕ್ಚರ್' ಶೀರ್ಷಿಕೆಗೆ ತೀವ್ರ ವಿರೋಧ

ಕನ್ನಡದ 'ಡರ್ಟಿ ಪಿಕ್ಚರ್' ಶೀರ್ಷಿಕೆಗೆ ತೀವ್ರ ವಿರೋಧ

Posted By:
Subscribe to Filmibeat Kannada
ಸ್ಯಾಂಡಲ್ ವುಡ್ ನಲ್ಲೀಗ ವಿವಾದದ್ದೇ ಕಾರುಬಾರು. ಇದೇ ಮೇ 11ಕ್ಕೇ (ಮೇ 11, 2012) ಮುಹೂರ್ತ ಫಿಕ್ಸ್ ಮಾಡಿಕೊಂಡಿರುವ ಕನ್ನಡದ 'ಡರ್ಟಿ ಪಿಕ್ಚರ್' ಚಿತ್ರಕ್ಕೆ ವಿಘ್ನವೊಂದು ಎದುರಾಗಿದೆ. ಇದೀಗ ಡರ್ಟಿ ಪಿಕ್ಚರ್ ಚಿತ್ರದ ಶೀರ್ಷಿಕೆಗೆ ಆಕ್ಷೇಪಿಸಿ ಹಿಂದಿಯಲ್ಲಿ ವಿದ್ಯಾ ಬಾಲನ್ ನಟನೆಯ 'ದಿ ಡರ್ಟಿ ಪಿಕ್ಚರ್' ನಿರ್ಮಾಪಕಿ ಏಕ್ತಾ ಕಪೂರ್, ಕನ್ನಡದಲ್ಲಿ ಈ ಚಿತ್ರ ನಿರ್ದೇಶಿಸಲಿರುವ ತ್ರಿಶೂಲ್ ಅವರಿಗೆ ಪತ್ರ ಬರೆದಿದ್ದಾರೆ ಎನ್ನಲಾಗಿದೆ.

ತ್ರಿಶೂಲ್ ಅವರ ಪ್ರೊಡಕ್ಷನ್ ಹೌಸ್ ಗೆ ಪತ್ರ ಬರೆದಿರುವ ಏಕ್ತಾ ಕಪೂರ್ "ಡರ್ಟಿ ಪಿಕ್ಚರ್' ಚಿತ್ರವನ್ನು ನೀವು ರೀಮೇಕ್ ಮಾಡುತ್ತಿದ್ದೀರಿ. ಅದು ರೀಮೇಕ್ ಅಲ್ಲದಿದ್ದರೂ ಚಿತ್ರದ ಶೀರ್ಷಿಕೆಯನ್ನು ಬದಲಾಯಿಸಿ' ಎಂಬ ಸಂದೇಶ ರವಾನಿಸಿದ್ದಾರೆ. ಆದರೆ ಆ ಪತ್ರದ ಕುರಿತು ಮಾತನಾಡಿರುವ ತ್ರಿಶೂಲ್ "ಯಾವುದೇ ಕಾರಣಕ್ಕೂ ನನ್ನ ಚಿತ್ರದ ಶೀರ್ಷಿಕೆ ಬದಲಾಯಿಸುವುದಿಲ್ಲ" ಎಂದಿದ್ದಾರೆ.

ಹಿಂದಿಯ ಏಕ್ತಾ ಕಪೂರ್ ಚಿತ್ರಕ್ಕೂ ಇಲ್ಲಿ ಕನ್ನಡದಲ್ಲಿ ತಯಾರಾಗುತ್ತಿರುವ ಡರ್ಟಿ ಪಿಕ್ಚರ್ ಚಿತ್ರಕ್ಕೂ ಯಾವುದೇ ಸಂಬಂಧವಿಲ್ಲ. ಆ ಕಥೆ ಕದ್ದು ಇಲ್ಲಿ ಮಾಡುತ್ತಿಲ್ಲ. ನಟಿ ಸಿಲ್ಕ್ ಸ್ಮಿತಾ ಜೀವನದ ಕೆಲ ಘಟನೆಗಳನ್ನಿಟ್ಟುಕೊಂಡು ಕಥೆ ಹೆಣೆದು ಇಲ್ಲಿಯ ನೇಟಿವಿಟಿಗೆ ತಕ್ಕಂತೆ ಮಾಡುತ್ತಿದ್ದೇವೆ. ಅಷ್ಟೇ ಅಲ್ಲ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯೇ ಶೀರ್ಷಿಕೆಗೆ ಅನುಮತಿ ನೀಡಿದೆ" ಎಂದು ಉತ್ತರಿಸಿದ್ದಾರೆ.

ಮುಂದಿನ ದಿನಗಳಲ್ಲಿ ನಡೆಯುವ ಯಾವುದೇ ಬೆಳವಣಿಗೆ ನಮ್ಮ ಪರವಾಗಿಲ್ಲದಿದ್ದರೆ ಕಾನೂನು ಹೋರಾಟ ನಡೆಸುವುದಾಗಿಯೂ ಹೇಳಿರುವ ತ್ರಿಶೂಲ್ ಚಿತ್ರದ ಮುಹೂರ್ತವನ್ನು ಮೇ 11 ಕ್ಕೆ ಹಾಗೂ ಫೋಟೋ ಸೆಷನ್ ಅನ್ನು ಮೇ 17 ಕ್ಕೆ ನಡೆಸಲಿದ್ದಾರೆ ಎನ್ನಲಾಗಿದೆ. ಅಂದಹಾಗೆ ಕನ್ನಡದ ಡರ್ಟಿ ಪಿಕ್ಚರ್ ಅಡಿಬರಹ 'ಸಿಲ್ಕ್ ಸಖತ್ ಹಾಟ್ ಮಗಾ...' (ಒನ್ ಇಂಡಿಯಾ ಕನ್ನಡ)

English summary
Now, Kannada Dirty Picture Title is in controversy. Bollywood movie, 'The Dirty Picture' producer Ekta Kapoor wrote letter to kannada director Trishul and told to change the Title. But, Trishul told that he will not change it hence KFCC gave permission to his title. 
 
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada