»   »  ಲಕ್ಷಲಕ್ಷ ದುಡ್ಡು ಎಣಿಸುವ ಕನ್ನಡ ಹಾಸ್ಯ ನಟರು!

ಲಕ್ಷಲಕ್ಷ ದುಡ್ಡು ಎಣಿಸುವ ಕನ್ನಡ ಹಾಸ್ಯ ನಟರು!

Subscribe to Filmibeat Kannada
ಸೂಪರ್ ಸ್ಟಾರ್, ಚಾಲೆಂಜಿಂಗ್ ಸ್ಟಾರ್, ಲವ್ಲಿ ಸ್ಟಾರ್, ಆಕ್ಷನ್ ಸ್ಟಾರ್, ಪವರ್ ಸ್ಟಾರ್, ಬಾಕ್ಸಾಫೀಸ್ ಕಿಂಗ್ ... ಮುಂತಾದ ಸ್ಟಾರ್ ಗಳ ವಿಚಾರ ಬಿಡಿ! ಹೌದು ಕಾಮಿಡಿ ಸ್ಟಾರ್ ಗಳ ಸಂಭಾವನೆ ಎಷ್ಟು? ದೊಡ್ಡಣ್ಣ, ಕೋಮಲ್ ಕುಮಾರ್, ಸಾಧು ಕೋಕಿಲ, ರಂಗಾಯಣ ರಘು, ಬುಲೆಟ್ ಪ್ರಕಾಶ್ ಎಷ್ಟು ಸಂಭಾವನೆ ಪಡೆಯುತ್ತಾರೆ?

ಕನ್ನಡ ಚಿತ್ರೋದ್ಯಮದಲ್ಲಿ ಹಾಸ್ಯ ಸಹ ಮಾರಾಟದ ಸರಕು. ಹಾಗಾಗಿಯೇ ಹಾಸ್ಯ ಪ್ರಧಾನ ಚಿತ್ರಗಳಿಗೆ ಬಲು ಬೇಡಿಕೆ.ಅನಾದಿ ಕಾಲದಿಂದಲೂ ಹಾಸ್ಯ ಚಕ್ರವರ್ತಿಗಳಿಗೆ ಅಂತ ಒಂದು ಸ್ಥಾನ ಇದ್ದೇ ಇದೆ. ನೆನಪಿರಲಿ ಪ್ರೇಮ್ ಮತ್ತು ಅಜಯ್ ರಾವ್ ಚಿತ್ರವೊಂದಕ್ಕೆ ಬರೋಬ್ಬರಿ ರು.20 ಲಕ್ಷ ಚಾರ್ಜ್ ಮಾಡುತ್ತಾರೆ. ಆದರೆ ಕಾಮಿಡಿ ನಟರಿಗೆ ದಿನವೊಂದಕ್ಕೆ ರು.1 ಲಕ್ಷಕ್ಕೂ ಹೆಚ್ಚ್ಚೂ ಸಂಭಾವನೆ ಕೊಡಬೇಕಾಗುತ್ತದೆ ಎನ್ನುತ್ತಿದೆ ಚಿತ್ರೋದ್ಯಮ.

ಎಲ್ಲ ಕಾಮಿಡಿ ನಟರು ರು.1 ಲಕ್ಷ ಸಂಭಾವನೆ ಪಡೆಯುವಷ್ಟು ಸಮರ್ಥರಲ್ಲ. ರಂಗಾಯಣ ರಘು, ಸಾಧು ಕೋಕಿಲ, ಕೋಮಲ್...ಹೀಗೆ ಮೊದಲ ಪಟ್ಟಿಯ ಹಾಸ್ಯ ಚಕ್ರವರ್ತಿಗಳು ಮಾತ್ರ ಅಷ್ಟು ಸಂಭಾವನೆ ಜೇಬಿಗಿಳಿಸುತ್ತಿದ್ದಾರೆ. ನಾಯಕ ನಟರ ರೀತಿ ವರ್ಷಕ್ಕೆ ಒಂದೇ ಒಂದು ಚಿತ್ರದಲ್ಲಿ ನಟಿಸಬೇಕು ಎಂಬಂತಿಲ್ಲ. ಹಲವಾರು ಚಿತ್ರಗಳಲ್ಲಿ ನಟಿಸುತ್ತಾ ವರ್ಷ ಪೂರ್ತಿ ಇವರಿಗೆ ಕೈತುಂಬ ಕೆಲಸ ಇರುತ್ತದೆ.

ಚಿತ್ರೋದ್ಯಮದ ಮೂಲಗಳ ಪ್ರಕಾರ ಹಾಸ್ಯ ನಟರ ವಾರ್ಷಿಕ ಆದಾಯ ವಿಷ್ಣುವರ್ಧನ್, ಪುನೀತ್ ರಾಜ್ ಕುಮಾರ್, ಉಪೇಂದ್ರ ಮತ್ತು ಸುದೀಪ್ ರ ಸಂಭಾವನೆಗೆ ಸರಿತೂಗುತ್ತಿದೆಯಂತೆ! ಮುಖ್ಯಮಂತ್ರಿ ಚಂದ್ರು, ಉಮಾಶ್ರೀ, ದೊಡ್ಡಣ್ಣನಂತಹ ಕೆಲವು ನಟರಿಗೆ ಅನಾರೋಗ್ಯ ಹಾಗೂ ರಾಜಕೀಯದಲ್ಲಿ ಬ್ಯುಸಿಯಾಗಿರುವ ಕಾರಣ ಬಂದ ಎಲ್ಲ ಆಫರ್ ಗಳನ್ನು ಒಪ್ಪಿಕೊಳ್ಳಲು ಆಗುತ್ತಿಲ್ಲ. ಹಾಗೆಯೇ ಬುಲೆಟ್ ಪ್ರಕಾಶ್ ಮತ್ತು ಓಂ ಪ್ರಕಾಶ್ ರಾವ್ ಸಹ ಸಂಭಾವನೆಯಲ್ಲಿ ಲಕ್ಷಾಧೀಶರು!

Komal Kumar
ಕೋಮಲ್ ಕುಮಾರ್ ಮತ್ತು ಸಂಗೀತ ನಿರ್ದೇಶಕ ಕಮ್ ಹಾಸ್ಯ ನಟ ಸಾಧು ಕೋಕಿಲ ಸದ್ಯ ಕನ್ನಡ ಚಿತ್ರರಂಗದಲ್ಲಿ ಬಹು ಬೇಡಿಕೆಯುಳ್ಳ ಹಾಸ್ಯ ನಟರು. ಆದರೆ ವಿಧಿ ವೈಚಿತ್ರ್ಯವೆಂದರೆ, ಮೂರು ದಶಕಗಳಿಗೂ ಹೆಚ್ಚು ಕಾಲ ಚಿತ್ರರಂಗದಲ್ಲಿರುವ ಜೈಜಗದೀಶ್, ಸುಂದರರಾಜ್ ಮತ್ತು ರಾಮಕೃಷ್ಣ ಅವರ ಸಂಭಾವನೆಗೂ ಹಾಸ್ಯ ನಟರ ಸಂಭಾವನೆಗೂ ಅಜಗಜಾಂತರ ವ್ಯತ್ಯಾಸವಿದೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

ಕೋಮಲ್ ಗೆ ನಾಯಕ ಪಟ್ಟ ಒಗ್ಗಲ್ಲ: ಸಾಧು
ಕೋಮಲ್ ಜೊತೆಗಿನ ಸಿನಿಮಾಕ್ಕೆ ರಮ್ಯಾ ನಕಾರ?
ಹಂದಿ ಜ್ವರಕ್ಕೆ ಬೆಚ್ಚಿದ ಬಿದ್ದ 'ರಾಜ್' ಚಿತ್ರತಂಡ
ಬೆಂಗಳೂರು ಟೆಕ್ಕಿ ಕೈಹಿಡಿಯಲಿದ್ದಾರೆ ನಟಿ ಮೀನಾ!
ವಿವಾಹ ವಿಚ್ಛೇದನಕ್ಕಾಗಿ ಅರ್ಜಿ ಸಲ್ಲಿಸಿದ ನಟಿ ಶ್ರುತಿ

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada