For Quick Alerts
  ALLOW NOTIFICATIONS  
  For Daily Alerts

  ಬ್ಯಾಂಕಾಕ್ ನಲ್ಲಿ ಗೋಲ್ಡನ್ ಸ್ಟಾರ್ ಗಣೇಶ್!

  By Rajendra
  |

  ಗೋಲ್ಡನ್ ಸ್ಟಾರ್ ಗಣೇಶ್ ನಾಯಕ ನಟನಾಗಿ ಅಭಿನಯಿಸುತ್ತಿರುವ ಸ್ವಮೇಕ್ ಚಿತ್ರ 'ಮದುವೆ ಮನೆ'. ಈಗ ಈ ಚಿತ್ರದ ಹಾಡುಗಳ ಚಿತ್ರೀಕರಣ ಬ್ಯಾಂಕಾಕ್‌ನಲ್ಲಿ ನಡೆಯುತ್ತಿದೆ. ಹತ್ತು ದಿನಗಳ ಕಾಲ ಚಿತ್ರೀಕರಣ ನಡೆಯಲಿದ್ದು, 24ಜನರ ತಂಡ ಬ್ಯಾಂಕಾಕ್‌ಗೆ ಪ್ರಯಾಣ ಬೆಳೆಸಿದೆ.ಜೆ.ಜೆ ಇಂಟರ್ ನ್ಯಾಷನಲ್ ಸಂಸ್ಥೆಯ ಮೂಲಕ ರುಹಿನಾ ರೆಹಮಾನ್ ಅವರು ನಿರ್ಮಿಸುತ್ತಿರುವ ಚಿತ್ರ ಇದಾಗಿದೆ.

  ಗಣೇಶ್ ನಾಯಕನಾಗಿ ಅಭಿನಯಿಸುತ್ತಿರುವ ಈ ಚಿತ್ರದ ನಾಯಕಿ ಶ್ರದ್ಧಾಆರ್ಯ. ಅವಿನಾಶ್(ಜುಗಾರಿ), ತಬಲನಾಣಿ, ಶರಣ್, ಅರವಿಂದ್, ಹನುಮಂತೇಗೌಡ, ಕೆ.ವಿ.ನಾಗೇಶ್‌ಕುಮಾರ್, ಎಂ.ಎನ್.ಎಂ. ಚಿತ್ಕಲಾ, ಡಾ:ನಾಗೇಶ್, ಜಾದವ್ ಮೈಸೂರು, ಚಿನ್ನ ಮುಂತಾದವರು ಈ ಚಿತ್ರದಲ್ಲಿ ಅಭಿನಯಿಸುತ್ತಿರುವ ಕಲಾವಿದರು.

  ಕಿರುತೆರೆಯ ಧಾರಾವಾಹಿಗಳನ್ನು ನಿರ್ದೇಶಿಸಿ ಅನುಭವವಿರುವ ಸುನೀಲ್‌ಕುಮಾರ್ ಸಿಂಗ್ ಈ ಚಿತ್ರದ ನಿರ್ದೇಶಕರು. 'ಮದುವೆಮನೆ'ಗೆ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದಿರುವ ನಿರ್ದೇಶಕರಿಗೆ ಇದು ಚೊಚ್ಚಲ ಚಿತ್ರ. ಮಣಿಕಾಂತ್ ಕದ್ರಿ ಸಂಗೀತವಿರುವ ಈ ಚಿತ್ರಕ್ಕೆ ಶೇಖರ್‌ಚಂದ್ರು ರವರ ಛಾಯಾಗ್ರಹಣ, ಸೌಂದರ್‌ರಾಜ್ ಸಂಕಲನ, ರವಿವರ್ಮ ಸಾಹಸ ಹಾಗೂ ಮೋಹನ್ ಬಿ ಕೆರೆ ಕಲಾನಿರ್ದೇಶನವಿದೆ.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X