»   »  ಪುನೀತ್ ಅಭಿನಯದ 'ರಾಮ್' ವಿಡಿಯೋ

ಪುನೀತ್ ಅಭಿನಯದ 'ರಾಮ್' ವಿಡಿಯೋ

Subscribe to Filmibeat Kannada

'ಅಂತು ಇಂತು ಪ್ರೀತಿ ಬಂತು', ಪರಮೇಶ ಪಾನ್‌ವಾಲ' ಚಿತ್ರಗಳನ್ನು ನಿರ್ಮಿಸಿದ್ದ ಆದಿತ್ಯಬಾಬು ಈಗ 'ರಾಮ್' ಚಿತ್ರವನ್ನು ನಿರ್ಮಿಸುತ್ತಿದ್ದು, ಪವರ್‌ಸ್ಟಾರ್ ಪುನೀತ್‌ರಾಜಕುಮಾರ್ ನಾಯಕನಾಗಿ ನಟಿಸುತ್ತಿದ್ದಾರೆ. ಖ್ಯಾತ ಅಭಿನೇತ್ರಿ ಪ್ರಿಯಾಮಣಿ 'ರಾಮ್' ನ ನಾಯಕಿ. ಇದು ಪ್ರಿಯಾಮಣಿ ಅವರು ನಟಿಸುತ್ತಿರುವ ಪ್ರಥಮ ಕನ್ನಡ ಚಿತ್ರವೂ ಹೌದು.

'ಗಜ' ಖ್ಯಾತಿಯ ನಿರ್ದೇಶಕ ಕೆ.ಮಾದೇಶ್ 'ರಾಮ್' ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಚಿತ್ರಕ್ಕೆ ಬೆಂಗಳೂರು, ಮೈಸೂರು, ಕುಶಾಲ ನಗರ ಹಾಗೂ ವಿದೇಶದಲ್ಲಿ ಚಿತ್ರೀಕರಣ ನಡೆಸಲಾಗಿದ್ದು, ಮಾತುಗಳ ಜೋಡಣೆಯೂ ಮುಕ್ತಾಯವಾಗಿದೆ. ಇತ್ತೀಚೆಗೆ ಮೈಸೂರಿನಲ್ಲಿ 'ರಾಮ್' ಚಿತ್ರದ ಧ್ವನಿಸುರುಳಿಗಳು ಅನಾವರಣಗೊಂಡವು. ಚಿತ್ರ ನವಂಬರ್‌ನಲ್ಲಿ ಬಿಡುಗಡೆಯಾಗಲಿದೆ ಅಂದಿದ್ದಾರೆ ನಿರ್ದೇಶಕರು.

ನಿರ್ದೇಶಕರೇ ಚಿತ್ರಕಥೆ ಬರೆದಿರುವ ಈ ಚಿತ್ರಕ್ಕೆ ಕೆ.ಕೃಷ್ಣಕುಮಾರ್ ಅವರ ಛಾಯಾಗ್ರಹಣವಿದೆ. ವಿ.ಹರಿಕೃಷ್ಣ ಸಂಗೀತ, ದೀಪು.ಎಸ್.ಕುಮಾರ್ ಸಂಕಲನ, ಪಳನಿರಾಜ್, ರವಿವರ್ಮ ಸಾಹಸ, ಎಂ.ಎಸ್.ರಮೇಶ್ ಸಂಭಾಷಣೆ ಹಾಗೂ ಮೋಹನ್ ಬಿ ಕೆರೆ ಕಾಲಾ ನಿರ್ದೇಶನವಿರುವ ಚಿತ್ರದ ತಾರಾಬಳಗದಲ್ಲಿ ಪುನೀತ್‌ರಾಜಕುಮಾರ್, ಪ್ರಿಯಾಮಣಿ, ರಂಗಾಯಣ ರಘು, ಸಾಧುಕೋಕಿಲಾ, ಶ್ರೀನಾಥ್, ಸಂಗೀತಾ, ಚಿತ್ರಾಶೆಣೈ, ಜ್ಯೋತಿ, ದೊಡ್ಡಣ್ಣ, ಪದ್ಮಾವಾಸಂತಿ ಮುಂತಾದವರಿದ್ದಾರೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada