ನಟ ದರ್ಶನ್ ಸಹ ಕೈದಿಗಳಿಂದ ಕಣ್ಣೀರಧಾರೆ

ಅವರು ಬೇರೆ ಯಾರೂ ಅಲ್ಲ ಚಾಲೆಂಜಿಂಗ್ ಸ್ಟಾರ್ ದರ್ಶನ್. ಹೌದು ದರ್ಶನ್ ಬಿಡುಗಡೆ ಅವರ ಅಪಾರ ಅಭಿಮಾನಿ ಬಳಗಕ್ಕೆ ಸಂತಸ ತಂದಿದ್ದರೆ ಸಹ ಕೈದಿಗಳಿಗೆ ಭರಿಸಲಾಗದ ದುಃಖಕ್ಕೆ ಕಾರಣವಾಗಿದೆ. ಹಾಗೆಯೇ ದರ್ಶನ್ ಜೈಲ್ ಮೇಟ್ ಕಟ್ಟಾ ಜಗದೀಶ್ ಅವರಿಗೂ ಒಂಥರಾ ಮನಸ್ಸಿಗೆ ಬಾಧೆಯಾಗಿದೆಯಂತೆ.
ಶ್ರೀಕೃಷ್ಣ ಪರಮಾತ್ಮನ ಜನ್ಮಸ್ಥಳದಿಂದ ತಮಗೆ ಯಾವಾಗ ಬಿಡುಗಡೆ ಭಾಗ್ಯ ಲಭಿಸುತ್ತದೋ ಎಂಬ ನೋವು ಒಂದು ಕಡೆಯಾದರೆ, ತಮ್ಮ ಜೈಲ್ ಮೇಟ್ ತಮ್ಮನ್ನು ಬಿಟ್ಟುಹೋಗುತ್ತಿದ್ದಾರಲ್ಲಾ ಎಂಬ ಯಾತನೆ ಮತ್ತೊಂದು ಕಡೆ. ಒಟ್ಟಿನಲ್ಲಿ ಜೂ.ಕಟ್ಟಾ ಅವರದು ಮಿಕ್ಸ್‌ಡ್ ರಿಯಾಕ್ಷನ್.
ಇನ್ನು ಸಹ ಕೈದಿಗಳು ದರ್ಶನ್‌ರೊಂದಿಗಿನ ಒಡನಾಡ ನೆನೆದು ಕಣ್ಣೀರಾಗಿದ್ದಾರೆ. ದರ್ಶನ್ ನಮ್ಮ ಜೊತೆ ಬೆಳಗ್ಗೆ ವಾಕಿಂಗ್ ಬರುತ್ತಿದ್ದರು. ಹೂಗಿಡಗಳಿಗೆ ನೀರೆಯುತ್ತಿದ್ದರು. ನಮ್ಮ ಹೆಗಲೆ ಮೇಲೆ ಕೈಹಾಕಿಕೊಂಡು ಮಾತನಾಡಿಸುತ್ತಿದ್ದರು. ಕೆಲವೇ ದಿನಗಳಲ್ಲಿ ಅವರು ನಮಗೆಲ್ಲಾ ಆಪ್ತರಾಗಿಬಿಟ್ಟರು.
ಈಗ ಅವರು ನಮ್ಮನ್ನೆಲ್ಲಾ ಬಿಟ್ಟುಹೋಗುತ್ತಿರುವುದು ನಿಜಕ್ಕೂ ದುಃಖವಾಗುತ್ತಿದೆ. ಅವರಿಗೆ ಜೈಲಿನಿಂದ ಬಿಡುಗಡೆ ಭಾಗ್ಯ ಲಭಿಸಿರುವುದು ಸಂತಸ ವಿಚಾರವಾದರೂ ಅವರ ಆತ್ಮೀಯತೆ ನಮ್ಮನ್ನು ಕಾಡುತ್ತಿದೆ ಎಂಬ ಅಭಿಪ್ರಾಯ ಜೈಲ್ ಮೇಟ್‌ಗಳಲ್ಲಿ ವ್ಯಕ್ತವಾಗಿದೆ. (ಒನ್‍ಇಂಡಿಯಾ ಕನ್ನಡ)


Click it and Unblock the Notifications











