»   »  ಚಿತ್ರೀಕರಣ ಮುಗಿಸಿಕೊಂಡಭಾಗ್ಯದ ಬಳೆಗಾರ

ಚಿತ್ರೀಕರಣ ಮುಗಿಸಿಕೊಂಡಭಾಗ್ಯದ ಬಳೆಗಾರ

Posted By:
Subscribe to Filmibeat Kannada
Bhagyada Balegare shooting completes
ಸಿಂಹಾದ್ರಿ ಪ್ರೊಡಕ್ಷನ್ಸ್ ಲಾಂಛನದಲ್ಲಿ ನಿರ್ಮಾಣವಾಗುತ್ತಿರುವ 'ಭಾಗ್ಯದ ಬಳೆಗಾರ' ಚಿತ್ರಕ್ಕಾಗಿ ನಾಗೇಂದ್ರ ಪ್ರಸಾದ್ ರಚಿಸಿರುವ 'ನಾಳೆ ನಡೆಯೋದ್ ಹೇಳ್ತಾನೆ, ಹೇಳ್ತಾನೆ ಕೋಳಿ ಕೂಗೋಕ್ ಮುಂಚೆನೇ ಬುಡ್‌ಬುಡ್ ಕೈಯಾ ಬುಡ್‌ಬುಡ್‌ಕ್ಕೆ - ಸತ್ಯ ಒಂದೇ ಹೇಳ್ತಾನೆ, ಹೇಳ್ತಾನೆ, ಸುದ್ದಿ ಒಂದು ತಂದೌನೆ, ತಂದೌನೆ -ಬುಡ್‌ಬುಡ್ ಕೈಯಾ ಬುಡ್‌ಬುಡ್‌ಕ್ಕೆ ಎಂಬ ಗೀತೆ ಚನ್ನಪಟ್ಟಣದ ಆಸುಪಾಸಿನಲ್ಲಿ ಚಿತ್ರೀಕರಣಗೊಂಡಿದೆ. ತಾರಾ ಅವರ ನೃತ್ಯ ಸಂಯೋಜನೆಯಲ್ಲಿ ಶಿವರಾಜಕುಮಾರ್, ನವ್ಯ ನಾಯರ್ ಹಾಗೂ ರಮೇಶ್ ಭಟ್ ಅಭಿನಯಿಸಿದ ಈ ಗೀತೆಯ ಚಿತ್ರೀಕರಣದೊಂದಿಗೆ 'ಭಾಗ್ಯದ ಬಳೆಗಾರ ಚಿತ್ರದ ಚಿತ್ರೀಕರಣ ಮುಕ್ತಾಯವಾಗಿದೆ ಎಂದು ನಿರ್ದೇಶಕ ಓಂ ಸಾಯಿಪ್ರಕಾಶ್ ತಿಳಿಸಿದ್ದಾರೆ.

ವಾತ್ಸಲ್ಯ ಭರಿತ ಚಿತ್ರಗಳ ನಿರ್ದೇಶನಕ್ಕೆ ಹೆಸರಾದವರು ನಿರ್ದೇಶಕ ಓಂ ಸಾಯಿಪ್ರಕಾಶ್. ಪ್ರಸ್ತುತ ಗ್ರಾಮೀಣ ಸೊಗಡಿನ ಚಿತ್ರವೊಂದ್ದನ್ನು ನಿರ್ದೇಶಿಸುತ್ತಿರುವ ಅವರು ಈ ಚಿತ್ರದಲ್ಲಿ ಬರುವ ಬಾಂಧವ್ಯದ ಸನ್ನಿವೇಶಗಳು ಜನರ ಮನದಲ್ಲಿ ಮನೆ ಮಾಡಲಿದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ. ಹಲವು ಪಾತ್ರಗಳಲ್ಲಿ ಅಭಿನಯಿಸಿ ಅಭಿಮಾನಿಗಳ ಹೃದಯ ಗೆದ್ದಿರುವ ಶಿವರಾಜಕುಮಾರ್ ಇದೇ ಮೊದಲ ಬಾರಿಗೆ ಬಳೆಗಾರನ ಪಾತ್ರದಲ್ಲಿ ಕಾಣಿಸಿಕೊಂಡರೆ, ಬೆಡಗಿ ನವ್ಯಾ ನಾಯರ್ ಗ್ರಾಮೀಣ ಪ್ರದೇಶದ ಹೆಣ್ಣು ಮಗಳಾಗಿ ಅಭಿನಯಿಸಿದ್ದಾರೆ. ಚಿತ್ರೀಕರಣ ಪೂರ್ಣವಾಗಿರುವ ಚಿತ್ರಕ್ಕೆ ಸದ್ಯದಲ್ಲೇ ನಂತರದ ಚಟುವಟಿಕೆಗಳಿಗೆ ಚಾಲನೆ ದೊರಕಲಿದೆ ಎಂದು ನಿರ್ಮಾಪಕ ರಮೇಶ್ ಕಶ್ಯಪ್ ತಿಳಿಸಿದ್ದಾರೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

ಶಿವರಾಜ್ ಕುಮಾರ್ ನೂರನೇ ಚಿತ್ರ ಜೋಗಯ್ಯ
ಅಮಿತಾಬ್ ಜತೆ ನಟಿಸಬೇಕೆಂಬ ಆಸೆ: ಶಿವಣ್ಣ
ರಾಜ್ ಬಿಡುಗಡೆಗೆ ಹಣ ಕೊಟ್ಟಿದ್ದ್ದು ನಿಜ: ಶಿವಣ್ಣ
ಶಿವಣ್ಣನಿಗೆ ಹೊಸ ತಂಗಿಯಾಗಿ ಮೀರಾ ಜಾಸ್ಮಿನ್

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada