»   » ತೆಲುಗು ಡಾರ್ಲಿಂಗ್ ಅಪ್ಪಿಕೊಂಡ ಚಾಲೆಂಜಿಂಗ್ ಸ್ಟಾರ್

ತೆಲುಗು ಡಾರ್ಲಿಂಗ್ ಅಪ್ಪಿಕೊಂಡ ಚಾಲೆಂಜಿಂಗ್ ಸ್ಟಾರ್

Posted By:
Subscribe to Filmibeat Kannada

ತೆಲುಗಿನ ಸೂಪರ್ ಹಿಟ್ 'ಡಾರ್ಲಿಂಗ್' ಚಿತ್ರದ ರೀಮೇಕ್ ಹಕ್ಕುಗಳನ್ನು ಚಾಲೆಂಜಿಂಗ್ ಸ್ಟಾರ್ ದರ್ಶನ್ ಖರೀದಿಸಿದ್ದಾರೆ. ಈ ಚಿತ್ರದಲ್ಲಿ ಪ್ರಭಾಸ್ ಮತ್ತು ಕಾಜಲ್ ಅಗರವಾಲ್ ಮುಖ್ಯಭೂಮಿಕೆಯಲ್ಲಿ ಅಭಿನಯಿಸಿದ್ದರು. ಕರುಣಾಕರನ್ ನಿರ್ದೇಶನದಲ್ಲಿ ಮೂಡಿಬಂದಂತಹ ಚಿತ್ರ. ಈ ತೆಲುಗು ಚಿತ್ರಕ್ಕೆ ಕರ್ನಾಟಕದಲ್ಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು.

ದರ್ಶನ್ ಈ ಚಿತ್ರವನ್ನು ಸ್ವಂತ ಬ್ಯಾನರ್ ನಲ್ಲಿ ನಿರ್ಮಿಸಲಿದ್ದಾರೆ. ಚಿತ್ರಕ್ಕೆ ಆಕ್ಷನ್, ಕಟ್ ಹೇಳುವವರು ಎಂ ಡಿ ಶ್ರೀಧರ್. ಸದ್ಯಕ್ಕೆ ಕೈಯಲ್ಲಿರುವ ಚಿತ್ರಗಳನ್ನು ಮುಗಿಸಿದ ಬಳಿಕ ದರ್ಶನ್ ಡಾರ್ಲಿಂಗ್ ಳನ್ನು ಅಪ್ಪಿಕೊಳ್ಳಲಿದ್ದಾರೆ. ' ಪ್ರಿನ್ಸ್' ಚಿತ್ರ ಸೇರಿದಂತೆ 'ಚಿಂಗಾರಿ' ಹಾಗೂ 'ಸಂಗೊಳ್ಳಿ ರಾಯಣ್ಣ' ಚಿತ್ರಗಳ ಬಳಿಕವಷ್ಟೆ ಡಾರ್ಲಿಂಗ್ ಸೆಟ್ಟೇರಲಿದೆ.

ಸಾಹಸಭರಿತ ಪ್ರೇಮಕಥಾನಕದ ಚಿತ್ರ ಡಾರ್ಲಿಂಗ್. ಎಲ್ಲ ಕಮರ್ಷಿಯಲ್ ಅಂಶಗಳು ಒಳಗೊಂಡಿರುವ ಚಿತ್ರ. ಚಿತ್ರಕತೆ ಪರ್ವಾಗಿಲ್ಲ ಅನ್ನಿಸಿಕೊಂಡರು ಸಾಹಸ ಸನ್ನಿವೇಶಗಳಿಂದ ಚಿತ್ರ ಗಮನಸೆಳೆದಿತ್ತು. ಭಾವನಾತ್ಮಕ, ಸಾಹಸಭರಿತ ಹಾಗೂ ಕಾಮಿಡಿ ಸೂತ್ರದಲ್ಲಿ ಬಂದಂತಹ ಚಿತ್ರ. ಇದನ್ನು ಕನ್ನಡಕ್ಕೆ ಹೇಗೆ ತರುತ್ತಾರೆ ಎಂಬುದನ್ನು ಕಾದುನೋಡಬೇಕು.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada