»   » ಜೈಲಿನಿಂದ ಬಿಡುಗಡೆಗೊಂಡ ದರ್ಶನ್ ಮನೆಯತ್ತ ಪ್ರಯಾಣ!

ಜೈಲಿನಿಂದ ಬಿಡುಗಡೆಗೊಂಡ ದರ್ಶನ್ ಮನೆಯತ್ತ ಪ್ರಯಾಣ!

Posted By:
Subscribe to Filmibeat Kannada
Darshan
ಕೊನೆಗೂ ನಟ ದರ್ಶನ್ ಅವರಿಗೆ ಜೈಲಿನಿಂದ ಮುಕ್ತಿ ಸಿಕ್ಕಿದೆ. ಷರತ್ತುಬದ್ಧ ಜಾಮೀನಿನ ಮೇರೆಗೆ ಬಿಡುಗಡೆಗೊಂಡ ದರ್ಶನ್ ಪರಪ್ಪನ ಅಗ್ರಹಾರದ ಜೈಲಿನಿಂದ ಫಾರ್ಚ್ಯುನರ್ ಕಾರಿನಲ್ಲಿ ನೇರವಾಗಿ ಅವರ ರಾಜರಾಜೇಸ್ವರಿ ನಿವಾಸದತ್ತ ತೆರಳಿದ್ದಾರೆ.

ದರ್ಶನ್ ರ ದರ್ಶನ ಪಡೆಯಲು ಜೈಲಿನ ಸುತ್ತ ನೆರೆದಿದ್ದ ಅಪಾರ ಅಭಿಮಾನಿಗಳಿಗೆ ಅವರ ದರ್ಶನ ಭಾಗ್ಯ ಲಭಿಸಲಿಲ್ಲ. ಅಭಿಮಾನಿಗಳನ್ನು ಉದ್ದೇಶಿಸಿ ದರ್ಶನ್ ಮಾತನಾಡುತ್ತಾರೆ, ಕ್ಷಮೆ ಕೇಳುತ್ತಾರೆ ಎಂದು ಹೇಳಲಾಗಿತ್ತು ಹಾಗೂ ನಿರೀಕ್ಷಿಸಲಾಗಿತ್ತು.

ಪರಪ್ಪನ ಅಗ್ರಹಾರದಿಂದ ಸಾಯಂಕಾಲ ಸುಮಾರು 6.40ರ ಸುಮಾರಿಗೆ ಬಿಡುಗಡೆಗೊಂಡು ಮನೆಯತ್ತ ಪ್ರಯಾಣ ಬೆಳೆಸಿದ ದರ್ಶನ್ ತಮ್ಮ ದರ್ಶನಕ್ಕಾಗಿ ನೆರೆದಿದ್ದ ಸಹಸ್ರಾರು ಅಭಿಮಾನಿಗಳನ್ನು ಉದ್ದೇಶಿಸಿ ಯಾವ ಮಾತನ್ನೂ ಹೇಳಲಿಲ್ಲ. ತಮಗೆ ದರ್ಶನ್ ದರ್ಶನ ಆಗುತ್ತದೆ ಎಂಬ ನಿರೀಕ್ಷೆಯಲ್ಲಿದ್ದ ಅಭಿಮಾನಿಗಳಿಗೆ ನಿರಾಸೆಯಾಗಿದೆ. ಆದರೆ ಯಾಕೆ ಹೀಗಾಯ್ತೋ...!

ಆದರೆ ದರ್ಶನ್ ನೇರವಾಗಿ ಕಾರು ಹತ್ತಿ ಮನೆಗೆ ತೆರಳಿದರೂ ಅವರ ಅಭಿಮಾನಿಗಳು ಬೇಸರಿಸಿಕೊಳ್ಳದೇ ಬಿಡುಗಡೆಯ ಸಂಭ್ರಾಮಾಚರಣೆಯನ್ನು ಕೇಕೆ, ಹಾಡು, ನೃತ್ಯಗಳ ಮೂಲಕ ಆಚರಿಸುತ್ತಿದ್ದಾರೆ. ರಸ್ತೆಯ ಇಕ್ಕೆಲಗಳಲ್ಲಿ ನಿಂತು ಜನರು ದರ್ಶನ್ ಪರ ಘೋಷಣೆ ಕೂಗುತ್ತಿದ್ದುದು ಹಾಗೂ ಸಂತೋಷ ಮುಗಿಲು ಮುಟ್ಟಿದ್ದು ಕಂಡುಬರುತ್ತಿತ್ತು.

ಈ ಸಂದರ್ಭದಲ್ಲಿ ಮಾದ್ಯಮದೊಂದಿಗೆ ಮಾತನಾಡಿದ ದಿನಕರ್ " ಅವರು ಬಿಡುಗಡೆಯಾದ ತಕ್ಷಣ ಅಭಿಮಾನಗಳ ಜೊತೆ ಮಾತನಾಡುತ್ತಾರೆ ಎಂದು ನಾವ್ಯಾರು ಹೇಳಿರಲಿಲ್ಲ. ಅವರು ಒಂದಿ ದಿನ ವಿಶ್ರಾಂತಿ ತೆಗೆದುಕೊಂಡು ನಂತರ ಅಭಿಮಾನಿಗಳ ಜೊತೆ ಮಾತನಾಡುತ್ತಾರೆ. ಸದ್ಯದಲ್ಲೇ ದರ್ಶನ್ ಮೈಸೂರಿನ ಚಾಮುಂಡಿ ಬೆಟ್ಟ ಹಾಗೂ ಧರ್ಮಸ್ಥಳಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆಯಲಿದ್ದಾರೆ" ಎಂದಿದ್ದಾರೆ.

English summary
Challenging Star Darshan is released from Jail, Parappana Agrahara. He went to his house which is in Rajarajeshwari Nagar. 
 

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada