»   » ಮನೀಷಾ ಕೋಯಿರಾಲ ಮಧುಚಂದ್ರ ಎಲ್ಲಿ ಗೊತ್ತೆ?

ಮನೀಷಾ ಕೋಯಿರಾಲ ಮಧುಚಂದ್ರ ಎಲ್ಲಿ ಗೊತ್ತೆ?

Posted By:
Subscribe to Filmibeat Kannada

ನೂತನ ದಾಂಪತ್ಯಕ್ಕೆ ಅಡಿಯಿಟ್ಟಿರುವ ಬಾಲಿವುಡ್ ತಾರೆ ಮನೀಷಾ ಕೋಯಿರಾಲ ತಮ್ಮ ಮಧುಚಂದ್ರವನ್ನು ಯೂರೋಪ್ ನಲ್ಲಿ ಕಳೆಯುವುದಾಗಿ ತಿಳಿಸಿದ್ದಾರೆ. ಮದುವೆ ಮಾಡಿಕೊಳ್ಳಬೇಕು ಎಂಬುದು ನನ್ನ ಕನಸಾಗಿತ್ತು. ಈಗ ಅದು ನೆರವೇರಿದೆ. ಮದುವೆಯ ಬಳಿಕ ನಾನೇನು ಸುಸ್ತಾಗಿಲ್ಲ. ಮುಂದೆಯೂ ಚಿತ್ರಗಳಲ್ಲಿ ನಟಿಸುವುದಾಗಿ ಹೇಳಿದ್ದಾರೆ.

ಮದುವೆಯ ಬಳಿಕ ಜೀವನದಲ್ಲಿ ಹೊಸ ಹುರುಪು ಉಂಟಾಗಿದೆ. ಜೀವನೋತ್ಸಾಹ ಇಮ್ಮಡಿಸಿದೆ ಎಂದು ಮನೀಷಾ ತಮ್ಮ ಮನದಾಳದ ಮಾತನ್ನು ಬಿಚ್ಚಿಟ್ಟಿದ್ದಾರೆ. ಒಂದು ತಿಂಗಳ ಕಾಲ ಯೂರೋಪ್ ನಲ್ಲಿ ಮನೀಷಾ ಆಕೆಯ ಪತಿ ಸಾಮ್ರಾಟ್ ದಹಲ್ ಜೊತೆ ಮಧುಚಂದ್ರವನ್ನು ಕಳೆಯಲಿದ್ದಾರೆ.

ಈ ಹಿಂದೆ ಯೂರೋಪ್ ಗೆ ಒಂಟಿಯಾಗಿ ಹೋಗಿದ್ದೆ. ಇದೀಗ ಗಂಡನೊಂದಿಗೆ ಹೊರಡುತ್ತಿದ್ದೇನೆ. ಪ್ಯಾರಿಸ್ ನಲ್ಲಿ ಹೆಚ್ಚಿನ ದಿನ ಕಳೆಯುವುದಾಗಿ ತಿಳಿಸಿದ್ದಾರೆ. ಪ್ಯಾರಿಸ್ ನಲ್ಲಿ ಸ್ವಂತ ಮನೆಯನ್ನು ಕಟ್ಟಬೇಕು ಎಂಬುದು ಮನೀಷಾರ ಮತ್ತೊಂದು ಕನಸಂತೆ. ಮಧುಚಂದ್ರ ಮನೋಹರವಾಗಿರಲು ಕೆಲವೊಂದು ಟಿಪ್ಸ್ ಇಲ್ಲಿವೆ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada