For Quick Alerts
  ALLOW NOTIFICATIONS  
  For Daily Alerts

  ಫೆಬ್ರವರಿ 11ಕ್ಕೆ ಪ್ರಜ್ವಲ್ ದೇವರಾಜ್ ಕೋಟೆ ತೆರೆಗೆ

  By Rajendra
  |

  ಪ್ರಜ್ವಲ್ ದೇವರಾಜ್ ನಾಯಕ ನಟನಾಗಿ ಅಭಿನಯಿಸಿರುವ 'ಕೋಟೆ' ಚಿತ್ರ ಫೆಬ್ರವರಿ 11ಕ್ಕೆ ಚಿತ್ರಮಂದಿರಕ್ಕೆ ಮುತ್ತಿಗೆ ಹಾಕಲಿದೆ. ಜಾಕ್ ಮಂಜು ನಿರ್ಮಿಸಿರುವ ಚಿತ್ರಕ್ಕೆ ಆಕ್ಷನ್,ಕಟ್ ಹೇಳಿದವರು ಶ್ರೀನಿವಾಸ ರಾಜು. ಈ ಹಿಂದೆ ಇವರು 'ಸಂಗಾತಿ', 'ನನ್ನವನು' ಚಿತ್ರಗಳನ್ನು ನಿರ್ದೇಶಿಸಿದ್ದರು.

  ಚಿತ್ರವನ್ನು ವೀಕ್ಷಿಸಿರುವ ಪ್ರಾದೇಶಿಕ ಸೆನ್ಸಾರ್ ಮಂಡಳಿ 'ಕೋಟೆ'ಗೆ 'ಎ' ಪ್ರಮಾಣ ಪತ್ರವನ್ನು ನೀಡಿದೆ. ಚಿತ್ರದಲ್ಲಿ ಒಂದು ಭರ್ಜರಿ ಆಕ್ಷನ್ ಸನ್ನಿವೇಶ ಹಾಗೂ ಐಟಂ ಹಾಡಿನ ಕಾರಣ ಚಿತ್ರಕ್ಕೆ 'ಎ' ಪ್ರಮಾಣ ಸಿಕ್ಕಿದೆ ಎಂದು ಚಿತ್ರದ ನಿರ್ಮಾಪಕ ಜಾಕ್ ಮಂಜು ತಿಳಿಸಿದ್ದಾರೆ.

  ಚಿತ್ರದಲ್ಲಿ ಪ್ರಜ್ವಲ್ ದೇವರಾಜ್ ಅಭಿನಯ ಅದ್ಭುತವಾಗಿ ಮೂಡಿಬಂದಿದೆ. ರಘು ದೀಕ್ಷಿತ್ ಅವರ ಸಂಗೀತ ಸಂಯೋಜನೆಯೂ ಅಷ್ಟೇ ಸೊಗಸಾಗಿದೆ. ಹುಬ್ಬಳ್ಳಿ ಸೇರಿದಂತೆ ಉತ್ತರ ಕರ್ನಾಟಕ ಬಹುತೇಕ ಭಾಗಗಳಲ್ಲಿ ಚಿತ್ರೀಕರಿಸಿದ್ದೇವೆ ಎಂದಿದ್ದಾರೆ ನಿರ್ದೇಶಕ ಶ್ರೀನಿವಾಸ ರಾಜು.

  ಇಲ್ಲಿಯವರೆಗೂ ತಾನು ಅಭಿನಯಿಸಿದ ಎಲ್ಲ ಪಾತ್ರಗಳಿಗಿಂತ 'ಕೋಟೆ' ಪಾತ್ರ ಭಿನ್ನವಾಗಿದೆ. ಈ ಹಿಂದೆಂದೂ ಈ ರೀತಿಯ ಪಾತ್ರವನ್ನು ನಾನು ಮಾಡಿರಲಿಲ್ಲ. ಪ್ರೇಕ್ಷಕರಿಗೆ ಇಷ್ಟವಾಗುವ ಎಲ್ಲ ಮನರಂಜನಾತ್ಮಕ ಅಂಶಗಳು ಚಿತ್ರದಲ್ಲಿವೆ ಎನ್ನುತ್ತಾರೆ ಪ್ರಜ್ವಲ್.

  English summary
  Prajwal Devraj lead movie Kote is all set to release on 11th Feb all over Karnataka. The movie is produced by Jack Manju and directed by Sreenivasa Raju. The film has been censored with an A certificate. The most part of the film shot at Hubli.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X