»   » ಪೃಥ್ವಿ ನೋಡಿ ಸಿಡಿದೆದ್ದ ಸಿದ್ದರಾಮಯ್ಯ

ಪೃಥ್ವಿ ನೋಡಿ ಸಿಡಿದೆದ್ದ ಸಿದ್ದರಾಮಯ್ಯ

Posted By:
Subscribe to Filmibeat Kannada

24/7 ರಾಜಕಾರಣಿಗಳಲ್ಲಿ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಸಹ ಒಬ್ಬರು. ಸಿದ್ದರಾಮಯ್ಯ ಅಂದ್ರೆ ಬರೀ ವಿರೋಧ ವ್ಯಕ್ತಪಡಿಸುವುದೇ ಅವರ ಕಾಯಕ ಅಂತ ಜನ ತಿಳಿದುಕೊಂಡಿದ್ದಾರೆ. ಈ ಅಪವಾದದಿಂದ ಸಿದ್ದರಾಮಯ್ಯ ಬುಧವಾರ ಬಂಧಮುಕ್ತರಾದರು. ಮೈಸೂರಿನ ಸರಸ್ವತಿ ಚಿತ್ರಮಂದಿರದಲ್ಲಿ ಸಾಮಾನ್ಯ ಪ್ರೇಕ್ಷಕರ ಜೊತೆ ಕೂತು 'ಪೃಥ್ವಿ' ಚಿತ್ರ ನೋಡಿ ಆನಂದಿಸಿದರು. ಬಳ್ಳಾರಿ ದುಸ್ಥಿತಿ ಕಂಡು ಕನಲಿ ಕೆಂಡಾಮಂಡಲವಾಗಿದ್ದಾರೆ.

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ 'ಪೃಥ್ವಿ' ಚಿತ್ರ ಹಲವು ರಾಜಕಾರಣಿಗಳ ಗಮನ ಸೆಳೆಯುತ್ತಿರುವುದು ಗೊತ್ತೆ ಇದೆ. ಈ ಹಿಂದೆ ಮಾಜಿ ಪ್ರಧಾನಿ ಹಾಗೂ ಜೆಡಿ(ಎಸ್) ರಾಷ್ಟ್ರಾಧ್ಯಕ್ಷ ಎಚ್ ಡಿ ದೇವೇಗೌಡ 'ಪೃಥ್ವಿ' ಚಿತ್ರವನ್ನು ನೋಡಿದ್ದರು. ಇದೀಗ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಚಿತ್ರವನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಚಿತ್ರದಲ್ಲಿ ಬಳ್ಳಾರಿ ನಾಗರಿಕರ ದಾರುಣ ಸ್ಥಿತಿ ಕಂದು ಸಿಡಿದೆದ್ದರು.

ಪ್ರಚಲಿತ ವಿದ್ಯಮಾನವನ್ನು ನಿರ್ದೇಶಕ ಜಾಕಬ್ ವರ್ಗೀಸ್ ಸಮರ್ಥವಾಗಿ ತೆರೆಗೆ ತಂದಿದ್ದಾರೆ ಎಂದು ಸಿದ್ದರಾಮಯ್ಯ ತಣ್ಣಗೆ ಪ್ರತಿಕ್ರಿಯಿಸಿದ್ದಾರೆ. ಕುತೂಹಲ ತಡೆಯಲಾರದೆ ಪೃಥ್ವಿ ಚಿತ್ರವನ್ನು ನೋಡಿದೆ. ಎಲ್ಲೂ ನಿರಾಸೆಗೊಳಿಸಲಿಲ್ಲ. ಅಕ್ರಮ ಗಣಿಗಾರಿಕೆ, ಆಂಧ್ರ ಕರ್ನಾಟಕ ಗಡಿ ಸಮಸ್ಯೆಯಂತಹ ವಿವಾದಿತ ಅಂಶಗಳನ್ನು ಚಿತ್ರದಲ್ಲಿ ನೇರವಾಗಿ ತೋರಿಸಲಾಗಿದೆ ಎಂದು ಸಿದ್ದರಾಮಯ್ಯ ಚಿತ್ರದ ಬಗ್ಗೆ ಸಂತಸ ವ್ಯಕ್ತಪಡಿಸಿದ್ದಾರೆ.

'ಪೃಥ್ವಿ' ಚಿತ್ರ ಬಿಡುಗಡೆಯಾದ ಎರಡು ವಾರಗಳ ಬಳಿಕ ಒಬ್ಬೊಬ್ಬರಾಗಿ ರಾಜಕಾರಣಿಗಳು ಚಿತ್ರರಂಗದತ್ತ ಹೆಜ್ಜೆ ಹಾಕುತ್ತಿದ್ದಾರೆ. ಮುಖ್ಯವಾಗಿ ಕಾಂಗ್ರೆಸ್ ಮತ್ತು ಜೆಡಿಎಸ್ ಪಾಳಯದಲ್ಲಿ ಈ ಚಿತ್ರ ತೀವ್ರ ಕುತೂಹಲ ಮೂಡಿಸಿದೆ. ಬಳ್ಳಾರಿಯಲ್ಲಿ ಯುವ ಜಿಲ್ಲಾಧಿಕಾರಿಯೊಬ್ಬ (ಪುನೀತ್) ಭ್ರಷ್ಟಾಚಾರ, ಅಕ್ರಮ ಗಣಿಗಾರಿಕೆ, ಭ್ರಷ್ಟ ರಾಜಕಾರಣಿಗಳ ವಿರುದ್ಧ ತಿರುಗಿಬೀಳುವ ಕಥಾ ಹಂದರವನ್ನು ಈ ಚಿತ್ರ ಒಳಗೊಂಡಿದೆ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada