»   »  ಗೋಕುಲ ಶೇ.50ರಷ್ಟು ಚಿತ್ರೀಕರಣ ಪೂರ್ಣ

ಗೋಕುಲ ಶೇ.50ರಷ್ಟು ಚಿತ್ರೀಕರಣ ಪೂರ್ಣ

Subscribe to Filmibeat Kannada

ಅಭಯ್ ಸೂರ್ಯ ಕ್ರಿಯೇಶನ್ಸ್ ಲಾಂಛನದಲ್ಲಿ ಪ್ರಕಾಶ್ ಕಥೆ-ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿರುವ 'ಗೋಕುಲ' ಒಂದು ಸಾಂಸಾರಿಕ ಚಿತ್ರ. ಜೊತೆಗೆ ಪ್ರೀತಿ-ಪ್ರೇಮ ಎಲ್ಲಾ ಇದೆ. ಮಿಲನ ನಂತರ ಮನೋಮೂರ್ತಿ-ಪ್ರಕಾಶ್ ಮತ್ತೊಂದು ಮೆಲೋಡಿ ಹಿಟ್‌ಗೆ ಅಣಿಯಾಗಿದ್ದಾರೆ.

ಒಂದು ತಿಂಗಳ ಹಿಂದೆ ಪ್ರಾರಂಭವಾದ ಈ ಚಿತ್ರದ ಚಿತ್ರೀಕರಣ ಈಗಾಗಲೇ ಶೇ. 50 ರಷ್ಟು ಮುಗಿದಿದೆ. ಗಾಯಿತ್ರಿನಗರದ ಮಿಲ್ಕ್‌ಕಾಲೋನಿಯ ಮನೆಯೊಂದರಲ್ಲಿ 4 ಜನನಾಯಕರು ವಾಸವಿರುವ ರೂಂ ನ ಸೆಟ್‌ಹಾಕಿ 20 ದಿನಗಳ ಕಾಲ ಚಿತ್ರೀಕರಣ ಮಾಡಲಾಗಿದೆ. ಕೋರಮಂಗಲದ 4ಎಂ ಕಾಂಪ್ಲೆಕ್ಸ್ ಇನ್‌ಫೆಂಟ್ರಿ ರಸ್ತೆಯ ಖೋಡೇಸ್ ಬಂಗಲೆ ವಿದ್ಯಾರಣ್ಯಪುರದ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಹಾಗೂ ಮಾವಳ್ಳಿಯಲ್ಲಿ 5 ದಿನಗಳ ಕಾಲ ನಿರಂತರ ಚಿತ್ರೀಕರಣ ನಡೆದಿದೆ.

ಈ ತಿಂಗಳ ಅಂತ್ಯದಲ್ಲಿ ಮಾತಿನ ಭಾಗದ ಚಿತ್ರೀಕರಣ ಮುಗಿಸಿ ನಂತರ ಹಾಡುಗಳ ಚಿತ್ರೀಕರಣವನ್ನು ಪ್ರಾರಂಭಿಸಲಿರುವ ನಿರ್ದೇಶಕ ಪ್ರಕಾಶ್ ಒಂದು ಹಾಡಿಗೆ ತಾವೇ ನೃತ್ಯ ನಿರ್ದೇಶನ ಕೂಡ ಮಾಡಲಿದ್ದಾರೆ. ಪ್ರಕಾಶ್ ಅವರ ಪತ್ನಿ ತಶ್ವಿನಿ ಪ್ರಕಾಶ್ ಅವರೇ ನಿರ್ಮಿಸುತ್ತಿರುವ ಈ ಚಿತ್ರಕ್ಕೆ ಸತ್ಯ ಹೆಗಡೆ ಛಾಯಾಗ್ರಹಣ, ಮನೋಮೂರ್ತಿ ಅವರ ಸಂಗೀತ ನಿರ್ದೇಶನ, ಎಂ.ಎಸ್. ರಮೇಶ್‌ರ ಸಂಭಾಷಣೆ, ಜಯಂತ್ ಕಾಯ್ಕಿಣಿ, ಧನಂಜಯರ ಸಾಹಿತ್ಯ, ಮೋಹನ್ ಮಾಳಗಿ ಸಹ ನಿರ್ದೇಶನವಿದೆ.

ಚಿತ್ರಕಥೆಗೆ ಜಿ. ಮಗೇಶ್, ಡಾ. ಸುರೇಶ್‌ಯಲ್ಲಪ್ಪ, ರಕ್ಷಿತ್‌ಶಿವರಾಮ್ ನೆರವಾಗಿದ್ದಾರೆ. ರವಿವರ್ಮರ ಸಾಹಸ, ಇಸ್ಮಾಯಿಲ್‌ರ ಕಲಾ ನಿರ್ದೇಶನಇದ್ದು. ನಾಲ್ವರು ಅನಾಥ ಹುಡುಗರ ಪಾತ್ರದಲ್ಲಿ ವಿಜಯರಾಘವೇಂದ್ರ, ಯಶ್, ಪವನ, ರಘುರಾಜ್ ಕಾಣಿಸಿಕೊಂಡಿದ್ದಾರೆ. ಪೂಜಾ ಗಾಂಧಿ, ನಕ್ಷತ್ರ ನಾಯಕಿಯರಾಗಿದ್ದು, ಶ್ರೀನಿವಾಸಮೂರ್ತಿ ಹಾಗೂ ಸುಮಿತ್ರ ಗೋಕುಲದ ವೃದ್ಧ ದಂಪತಿಗಳಾಗಿದ್ದಾರೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada