»   »  ತುಂಟಾಟದ ನಟಿ ಛಾಯಾಸಿಂಗ್ ಗೆ ಕಂಕಣ ಭಾಗ್ಯ!

ತುಂಟಾಟದ ನಟಿ ಛಾಯಾಸಿಂಗ್ ಗೆ ಕಂಕಣ ಭಾಗ್ಯ!

Posted By:
Subscribe to Filmibeat Kannada

ಕನ್ನಡ, ತಮಿಳು ಮತ್ತು ಮಲಯಾಳಂ ಚಿತ್ರರಂಗದ ತಾರೆ ಛಾಯಾಸಿಂಗ್ ಅವರಿಗೆ ಕಂಕಣಬಲ ಕೂಡಿ ಬಂದಿದೆ. ಹೈದರಾಬಾದ್ ಮೂಲದ ಹಾರ್ಡ್ ವೇರ್ ವ್ಯಾಪಾರಿಯೊಬ್ಬರನ್ನು ಛಾಯಾ ವರಿಸಲಿದ್ದಾರೆ. ಛಾಯಾಸಿಂಗ್ ಅವರನ್ನು ಮದುವೆಯಾಗಲಿರುವ ವರನ ವಿವರಗಳು ಸದ್ಯಕ್ಕೆ ಲಭ್ಯವಿಲ್ಲ.

ಛಾಯಾಸಿಂಗ್ ಹುಟ್ಟಿದ್ದು ಬೆಂಗಳೂರಿನಲ್ಲಿ. ಅವರ ತಂದೆ ತಾಯಿ ಉತ್ತರ ಪ್ರದೇಶ ಮೂಲದವರು. ಬಹಳ ವರ್ಷಗಳ ಹಿಂದೆಯೇ ಅವರು ಕರ್ನಾಟಕಕ್ಕೆ ವಲಸೆ ಬಂದಿದ್ದರು. ತಾರಾ ಮುಖ್ಯಪಾತ್ರದ 'ಹಸೀನಾ' ಚಿತ್ರದ ಮೂಲಕ ಬೆಳ್ಳಿತೆರೆಗೆ ಅಡಿಯಿಟ್ಟಿದ್ದ ಛಾಯಾ ತಮ್ಮ ಪಾತ್ರಗಳ ಆಯ್ಕೆಯಲ್ಲಿ ಬಲು ಜಾಗ್ರತ್ತೆ ವಹಿಸುತ್ತಿದ್ದರು. ತಮಿಳು ಚಿತ್ರರಂಗಕ್ಕೆ ಹೋದ ನಂತರ ಐಟಂ ಪಾತ್ರಗಳಲ್ಲಿ ಹೆಚ್ಚಾಗಿ ಮಿಂಚ ತೊಡಗಿದರು.

ಒಂದು ವರ್ಷದ ಹಿಂದೆ ತೆರೆಕಂಡ 'ಆಕಾಶ ಗಂಗೆ' ಸೇರಿದಂತೆ ಅವರ ಯಾವ ಚಿತ್ರವೂ ಅಂತಹ ಯಶಸ್ಸು ತಂದುಕೊಡಲಿಲ್ಲ. ಇತ್ತೀಚೆಗೆ ಜೀ ಕನ್ನಡದ ಕುಣಿಯೋ ಬಾರಾ ಕಾರ್ಯಕ್ರಮದ ತೀರ್ಪುಗಾರರಾಗಿಯೂ ಅವರು ಕಾಣಿಸಿಕೊಂಡಿದ್ದರು. ತುಂಟಾಟ, ಬಲಗಾಲಿಟ್ಟು ಒಳಗೆ ಬಾ, ಪ್ರೀತಿಸಲೇಬೇಕು, ಸಖ ಸಖಿ ಆಕೆ ನಟಿಸಿದ ಇತರೆ ಕನ್ನಡ ಚಿತ್ರಗಳು. ತಮಿಳಿನ 'ತಿರುಡಾ ತಿರುಡಿ' ಚಿತ್ರ ದಲ್ಲಿ ಬಿಂದಾಸ್ ಆಗಿ ನಟಿಸಿ ತಮಿಳು ಪ್ರೇಕ್ಷಕರ ಮನಗೆದ್ದಿದ್ದರು.


''ಛಾಯಾ ವೃತ್ತಿ ಜೀವನದಲ್ಲಿ ಒಂದು ಹಂತವನ್ನು ಮುಟ್ಟಿದ್ದಾರೆ. ಮದುವೆ ಇದೇ ಸೂಕ್ತ ಸಮಯ. ಹಾಗಾಗಿ ಮದುವೆಗೆ ಸಿದ್ಧತೆ ನಡೆಯುತ್ತಿದೆ'' ಎನ್ನುತ್ತಾರೆ ಛಾಯಾ ಅವರ ತಾಯಿ. ಮದುವೆಯ ನಂತರವೂ ಆಕೆ ಚಿತ್ರಗಳಲ್ಲಿ ನಟಿಸಲಿದ್ದಾರೆ ಎಂಬ ಸುಳಿವನ್ನು ಛಾಯಾರ ತಾಯಿ ನೀಡಿದ್ದಾರೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada