»   »  ಯೋಗೀಶ್ ಸಂಭಾವನೆ ದಿನಕ್ಕೆ ಸಾವಿರ ರುಪಾಯಿ!

ಯೋಗೀಶ್ ಸಂಭಾವನೆ ದಿನಕ್ಕೆ ಸಾವಿರ ರುಪಾಯಿ!

Subscribe to Filmibeat Kannada
Yogish gets thousand rupees a day
ಎರಡು ಹಿಟ್ ಚಿತ್ರಗಳ(ನಂದ ನಂದಿತಾ ಮತ್ತು ಅಂಬಾರಿ) ನಾಯಕ ಯೋಗೀಶ್ ಕೈಯಲ್ಲಿ ಈಗ ಮೂರು ಚಿತ್ರಗಳಿವೆ. ಅವು ಯೋಗಿ, ಪ್ರೀತ್ಸೆ ಪ್ರೀತ್ಸೆ ಮತ್ತು ರಾವಣ. ಒಟ್ಟಿನಲ್ಲಿ ಯಶಸ್ಸಿನ ಉಯ್ಯಾಲೆಯಲ್ಲಿ ತೂಗುತ್ತಿರುವ ನಟ ಎನ್ನಬಹುದು. ಹೌದು ನೀವು ಚಿತ್ರವೊಂದಕ್ಕೆ ಎಷ್ಟು ಸಂಭಾವನೆ ಪಡೆಯುತ್ತೀರಾ ಎಂದರೆ? ಆ ವಿಚಾರ ನನಗೇ ಗೊತ್ತಿಲ್ಲ ಎನ್ನುತ್ತಾರೆ ಯೋಗೀಶ್!

ಈ ಹಣಕಾಸು ವ್ಯವಹಾರ ಎಲ್ಲ ನಮ್ಮ ತಂದೆ(ನಿರ್ಮಾಪಕ ಸಿದ್ಧರಾಜು) ಮತ್ತು ತಾಯಿ ನೋಡಿಕೊಳ್ಳುತ್ತಾರೆ. ನಿರ್ಮಾಪಕರ ಬಳಿ ಅವರೇ ಎಲ್ಲಾ ವ್ಯವಹಾರ ಮಾತನಾಡಿಕೊಳ್ಳುತ್ತಾರೆ. ನನಗೆ ಎಷ್ಟು ಸಂಭಾವನೆ ಕೊಡುತ್ತಾರೆ ಎಂದು ಇದುವರೆಗೂ ಗೊತ್ತಿಲ್ಲ ಎನ್ನುತ್ತಾರೆ ಯೋಗೀಶ್. ಈಗ ಪೂರ್ಣವಾಗಿ ನಟನೆಗೆ ಸೀಮಿತವಾಗಿರುವ ಕಾರಣ ಯೊಗೀಶ್ ಓದಿಗೆ ಗುಡ್ ಬೈ ಹೇಳಿದ್ದಾರೆ. ಖಾಸಗಿ ಅಭ್ಯರ್ಥಿಯಾಗಿ ದ್ವಿತೀಯ ಪಿಯುಸಿ ಪರೀಕ್ಷೆಯನ್ನು ತೆಗೆದುಕೊಂಡಿದ್ದಾರೆ.

ದಿನಕ್ಕೆ ಪಾಕೆಟ್ ಮನಿ ಎಂದು ರು.1000 ಕೊಡ್ತಾರಂತೆ. ಡೀಸೆಲ್ ಖರ್ಚಿಗೆ ಅಂತ ರು.500 ಖರ್ಚಾಗುತ್ತದೆ. ಉಳಿದ ಹಣ ನನ್ನ ಸಹಾಯಕರಿಗೆ ಹೋಗುತ್ತದೆ. ನನಗೆ ಹೆಚ್ಚಿಗೆ ಹಣ ಬೇಕು ಎಂದರೆ ನನ್ನ ತಂದೆ ಇಲ್ಲ ಎನ್ನುವುದಿಲ್ಲ. ನನ್ನ ಎಲ್ಲ ಬೇಕು ಬೇಡಗಳನ್ನು ಅವರೇ ನೋಡಿಕೊಳ್ಳುತ್ತಾರೆ. ಸದ್ಯಕ್ಕೆ ಯೋಗೀಶ್ ಒಮ್ಮೆಯಾದರೂ ರಮ್ಯಾ ಜತೆ ನಟಿಸಬೇಕು ಎಂದು ಕನಸು ಕಾಣುತ್ತಿದ್ದಾರೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

ಎಲ್ಲ ಯೋಗೀಶನ ಮಹಿಮೆ, ಶತಕದತ್ತ ಅಂಬಾರಿ
ಚಿತ್ರವಿಮರ್ಶೆ: ನಂದಾ ಲವ್ಸ್ ನಂದಿತಾ
ದುನಿಯಾದ 'ಲೂಸ್ ಮಾದನ' ಬಗ್ಗೆ ಒಂದಿಷ್ಟು

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada