»   »  ಎಸ್ಸೆಸ್ಸೆಲ್ಸಿ ಫಸ್ಟ್ ಕ್ಲಾಸ್ ನಲ್ಲಿ ಅಮೂಲ್ಯ ಪಾಸು!

ಎಸ್ಸೆಸ್ಸೆಲ್ಸಿ ಫಸ್ಟ್ ಕ್ಲಾಸ್ ನಲ್ಲಿ ಅಮೂಲ್ಯ ಪಾಸು!

Subscribe to Filmibeat Kannada
Amoolya Passed SSLC exam
ಎಸ್ಸೆಸ್ಸೆಲ್ಸಿ ಪರೀಕ್ಷೆಯನ್ನು ಹದಿಹರೆಯದ ನಟಿ ಅಮೂಲ್ಯ ಫಸ್ಟ್ ಕ್ಲಾಸ್ ನಲ್ಲಿ ಪಾಸು ಮಾಡಿದ್ದಾರೆ! ಅಮೂಲ್ಯ ಅವರಿಗೆ ರ‌್ಯಾಂಕ್ ಬಂದಷ್ಟು ಖುಷಿಯಾಗಿದೆಯಂತೆ. ಒಟ್ಟಿನಲ್ಲಿ ವಿದ್ಯಾರ್ಥಿಗಳ ಜೀವನದಲ್ಲಿ ಬಹು ಮುಖ್ಯ ತಿರುವುಗಳಲ್ಲಿ ಒಂದಾದ ಎಸ್ಸೆಸ್ಸೆಲ್ಸಿಯನ್ನು ಅಮೂಲ್ಯ ಯಶಸ್ವಿಯಾಗಿ ಪೂರೈಸಿ ಅವರ ಕುಟುಂಬದರ ಖುಷಿಗೂ ಕಾರಣರಾಗಿದ್ದಾರೆ.

ಫಸ್ಟ್ ಕ್ಲಾಸೇನೋ ಸರಿ ಎಷ್ಟು ಫರ್ಸೆಂಟ್ ತೆಗೆದಿದ್ದೀರಿ? ಎಂದು ಕೇಳುವ ಮುಂಚೆಯೇ...ಫರ್ಸೆಂಟೇಜಲ್ಲ ಹೇಳೋಕಾಗಲ್ಲ. ಫಸ್ಟ್ ಕ್ಲಾಸಲ್ಲಿ ಪಾಸಾಗಿದ್ದೀನಿ ಎಂದಷ್ಟೇ ಹೇಳುತ್ತಾರೆ. ಮುಂದೆ ಪಿಯುಸಿ ವಿಜ್ಞಾನ ವಿಭಾಗವನ್ನು ಆಯ್ಕೆ ಮಾಡಿಕೊಳ್ಳುವುದಾಗಿ ಅವರು ತಿಳಿಸಿದ್ದಾರೆ. ಸಂಶೋಧನೆಯಲ್ಲಿ ತೊಡಗಿಕೊಳ್ಳಬೇಕು ಎಂಬ ಇರಾದೆಯನ್ನು ವ್ಯಕ್ತಪಡಿಸಿದರು ಅಮೂಲ್ಯ.

ನಿಮ್ಮ ಆಸಕ್ತಿ ಚಿತ್ರರಂಗವೇ ಅಥವಾ ಶಿಕ್ಷಣವೇ? ಎಂದು ಕೇಳಿದರೆ. ಶಿಕ್ಷಣ ಮತ್ತು ಸಿನಿಮಾ ಎರಡು ನನ್ನ ಎರಡು ಕಣ್ಣುಗಳಿದ್ದಂತೆ. ಒಂದು ಕಣ್ಣಿಗೆ ಸುಣ್ಣ ಇನ್ನೊಂದು ಕಣ್ಣಿಗೆ ಬೆಣ್ಣೆ ತರಹ ಆಗಬಾರದು. ಎರಡು ನನ್ನ ಮೆಚ್ಚಿನ ಕ್ಷೇತ್ರಗಳು. ಹಾಗಾಗಿ ಶಿಕ್ಷಣದೊಂದಿಗೇ ಓದು ಮುಂದುವರಿಯಲಿದೆ ಎನ್ನ್ನುತ್ತಾರೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

ಶಾಲಾ ಬಾಲಕಿ ಅಮೂಲ್ಯ ಈಗ ಕಾಲೇಜು ಹುಡುಗಿ
ರಂಗು, ರಂಗಿನ ಚೆಲುವಿನ ಚಿತ್ತಾರ...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada