»   »  ಡಿಟಿಎಸ್ ನಲ್ಲಿ ದುನಿಯಾ ರಶ್ಮಿ 'ಅರುಂಧತಿ'

ಡಿಟಿಎಸ್ ನಲ್ಲಿ ದುನಿಯಾ ರಶ್ಮಿ 'ಅರುಂಧತಿ'

Posted By:
Subscribe to Filmibeat Kannada
Duniya Rashmi
ಸೆಲ್ಯೂಲಾಯ್ಡ್ ಫಿಲಂಸ್ ಲಾಂಛನದಲ್ಲಿ ಬಿ.ಆರ್. ಕೇಶವ ಯುವತಿಯೋರ್ವಳ ಮಾನಸಿಕ ತುಮುಲಗಳನ್ನು ವಿವಿಧ ದೃಷ್ಟಿಕೋನದಲ್ಲಿ ತೋರಿಸುವ ನಿಟ್ಟಿನಲ್ಲಿ ಅರುಂಧತಿ ಎಂಬ ಕುತೂಹಲಕಾರಿ ಚಿತ್ರವೊಂದನ್ನು ನಿರ್ಮಿಸಿದ್ದಾರೆ. ದುನಿಯಾ, ಕೃಷ್ಣ, ಅಕ್ಕ ಚಿತ್ರಗಳಲ್ಲಿ ಗಮನ ಸೆಳೆಯುವ ಅಭಿನಯ ನೀಡಿದ ರಶ್ಮಿಯನ್ನು ನಾಯಕಿ ಪಾತ್ರ ನಿರ್ವಹಿಸಿದ್ದಾರೆ.

ಮನಃಶಾಸ್ತ್ರಕ್ಕೆ ಸಂಬಂಧಪಟ್ಟಂತೆ ಇಡೀ ಚಿತ್ರದ ಕಥೆಯನ್ನು ಸಾಕಷ್ಟು ಅಧ್ಯಯನ ಮಾಡಿದ ನಂತರವೇ ರಚಿಸಲಾಗಿದ್ದು, ಫ್ಯಾಮಿಲಿ ಸೆಂಟಿಮೆಂಟ್, ಲವ್‌ನಂಥ ಎಲ್ಲಾ ಅಂಶಗಳ ಜೊತೆಯಲ್ಲಿಯೇ ಈ ಕಥೆ ಸಾಗುತ್ತದೆ ಎನ್ನುತ್ತಾರೆ ಕಥೆ-ಚಿತ್ರಕಥೆ ಬರೆದಿರುವ ನಿರ್ದೇಶಕ ಕೇಶವ್. ಒಂದೇ ಹಂತದಲ್ಲಿ ಬೆಂಗಳೂರು ಸುತ್ತಮುತ್ತ 30ದಿನಗಳ ಕಾಲ ಚಿತ್ರೀಕರಣ ಮುಗಿಸಿದ್ದಾರೆ. ಪ್ರಸಾದ್ ರೆಕಾರ್ಡಿಂಗ್ ಸ್ಟುಡಿಯೋದಲ್ಲಿ ಕಳೆದ ಸೋಮವಾರದಿಂದ ಚಿತ್ರಕ್ಕೆ ಡಿ.ಟಿ.ಎಸ್. ತಂತ್ರಜ್ಞಾನ ಅಳವಡಿಸುವ ಕಾರ್ಯ ನಡೆಯುತ್ತಿದೆ.

ಎಂ.ಎಸ್. ಮಾರುತಿ ಅವರು ಸಂಗೀತ ಸಂಯೋಜನೆ ಮಾಡಿದ್ದಾರೆ. ಗೌರಿ ವೆಂಕಟೇಶ್ ಅವರ ಛಾಯಾಗ್ರಹಣ, ಮೋಹನ್ ಜುನೇಜಾರ ಸಂಭಾಷಣೆ, ಪ್ರಸಾದ್‌ರ ನೃತ್ಯ ನಿರ್ದೇಶನ ಈ ಚಿತ್ರಕ್ಕಿದ್ದು, ರಶ್ಮಿ ಜತೆಗೆ ಮಹೇಶ್ ಗಾಂಧಿ ನಾಯಕ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಬ್ಯಾಂಕ್ ಜನಾರ್ಧನ್, ಜೋಸೈಮನ್, ಜಯಲಕ್ಷ್ಮಿ, ವಿಕ್ರಮ್ ಉದಯ್‌ಕುಮಾರ್, ಮೋಹನ್ ಜುನೇಜಾ, ಚಂದ್ರಕಲಾ ಮೋಹನ್, ಇತರರು ಉಳಿದ ತಾರಾಗಣದಲ್ಲಿದ್ದಾರೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

ಉಪೇಂದ್ರ ರುಪ್ಪೀಸ್ ರೆಸಾರ್ಟ್ ನಲ್ಲಿ ಅರುಂಧತಿ
ಎರಡನೇ ಮದುವೆಗೆ ಸಜ್ಜಾದ ನಟಿ ಶ್ರುತಿ
ಸೆನ್ಸಾರ್ ಮಂಡಳಿಗೆ ಚಳ್ಳೆಹಣ್ಣು ತಿನ್ನಿಸಿದ ಹೊಡಿಮಗ

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada