»   »  ಎಷ್ಟು ನಗ್ತಿ ನಗು ಚಿತ್ರಕ್ಕೆ ಯು ಅರ್ಹತಾ ಪತ್ರ

ಎಷ್ಟು ನಗ್ತಿ ನಗು ಚಿತ್ರಕ್ಕೆ ಯು ಅರ್ಹತಾ ಪತ್ರ

Subscribe to Filmibeat Kannada
Clean censor for Estu Nagti Nagu
ಶ್ರೀಕಂಠೇಶ್ವರ ಫಿಲಂ ಅವರ 'ಎಷ್ಟು ನಗ್ತಿ ನಗು" ಚಿತ್ರವನ್ನು ವೀಕ್ಷಿಸಿದ ಪ್ರಾದೇಶಿಕ ಸೆನ್ಸಾರ್ ಮಂಡಳಿ ಯು ಅರ್ಹತಾ ಪತ್ರವನ್ನು ನೀಡಿದೆ. ಈ ಚಿತ್ರದ ಬಗ್ಗೆ ಮಂಡಳಿ ಮೆಚ್ಚುಗೆಯ ಮಾತುಗಳನಾಡಿದೆ ಎಂದು ನಿರ್ಮಾಪಕರು ತಿಳಿಸಿದ್ದಾರೆ.

'ಎಷ್ಟು ನಗ್ತಿ ನಗು' ಹಲವು ವರ್ಷಗಳಿಂದ ಪ್ರೇಕ್ಷಕರನ್ನು ರಂಜಿಸಿ ಕೊಂಡು ಬಂದಿರುವ ನಗೆ ನಾಟಕ. ಈ ಜನಪ್ರಿಯ ನಾಟಕವನ್ನು ಸಿನೆಮಾ ಮಾಡಿದವರು ನಿರ್ಮಾಪಕ ಚಿಂದೋಡಿ ಶ್ರೀಕಂಠೇಶ. ಸದ್ಯದಲ್ಲೇ ಚಿತ್ರವನ್ನು ಬಿಡುಗಡೆ ಮಾಡುವುದಾಗಿ ತಿಳಿಸಿರುವ ನಿರ್ಮಾಪಕರು ನಾಟಕದಷ್ಟೇ ಜನಪ್ರಿಯತೆಯನ್ನು ಈ ನಮ್ಮ ಸಿನೆಮಾ ಗಳಿಸಲಿದೆ ಎಂದಿದ್ದಾರೆ.

ಅನಂತನಾಗ್, ದ್ವಾರಕೀಶ್, ಮೋಹನ್, ಶ್ರೀಕಂಠೇಶ, ಸುಧಾರಾಣಿ, ಬ್ಯಾಂಕ್ ಜನಾರ್ದನ್ ಅವರಂತ ಹಿರಿಯ ಕಲಾವಿದರು ಹಾಗೂ ಹೊಸನಟಿಯರಾದ ರೋಶಿನಿ. ಸನಾರೊಂದಿಗೆ ನಾಯಕನಾಗಿ ಚಿಂದೋಡಿ ವಿಜಯಕುಮಾರ್ ಅಭಿನಯಿಸಿದ್ದಾರೆ. ಬೆಂಗಳೂರು, ಮೈಸೂರು ಹಾಗೂ ಕುಂದಾಪುರದ ಆಸುಪಾಸಿನಲ್ಲಿ ಚಿತ್ರದ ಚಿತ್ರೀಕರಣ ನಡೆದಿದೆ. ಚಿಂದೋಡಿ ಬಂಗಾರೇಶರ ನಿರ್ಮಾಣ ನಿರ್ವಹಣೆಯಿರುವ ಈ ಚಿತ್ರವನ್ನು ಚಿಂದೋಡಿ ಮದುಕೇಶ ನಿರ್ದೇಶಿಸಿದ್ದಾರೆ. ಎಂ.ಮಾರುತಿ ಸಂಗೀತ, ಏಳುಕೋಟಿ ಚಂದ್ರು ಛಾಯಾಗ್ರಹಣ 'ಎಷ್ಟು ನಗ್ತಿ ನಗು' ಚಿತ್ರಕ್ಕಿದೆ.

(ದಟ್ಸ್ ಕನ್ನಡ ಚಿತ್ರ ವಾರ್ತೆ)

ಇದನ್ನೂ ಓದಿ
ಹರೀಶ್ ರಾಜ್ ಕಲಾಕಾರ್ ಚಿತ್ರಕ್ಕೆ ಕ್ಲೀನ್ ಸೆನ್ಸಾರ್
ಉಪೇಂದ್ರ ರುಪ್ಪೀಸ್ ರೆಸಾರ್ಟ್ ನಲ್ಲಿ ಅರುಂಧತಿ
ಕಿರುತೆರೆಯ ಬಾದ್ ಷಾ ರವಿಕಿರಣ್ ಗೆ ಪ್ರಶಸ್ತಿ
ದುಬಯ್ ಬಾಬು ಚಿತ್ರದ ಹಾಡುಗಳು ಹೇಗಿವೆ?

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada