»   » ರೇವಾ ಕಾಲೇಜಿನಲ್ಲಿ ಪ್ರಶಾಂತ್ ಎಂಗೇಜ್‌ಮೆಂಟ್

ರೇವಾ ಕಾಲೇಜಿನಲ್ಲಿ ಪ್ರಶಾಂತ್ ಎಂಗೇಜ್‌ಮೆಂಟ್

Posted By:
Subscribe to Filmibeat Kannada

ಆತ ಪ್ರಸಿದ್ದ ಕಾರ್ಯಕ್ರಮವೊಂದರ ನಿರೂಪಕ. ಆತನಿಗೆ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ ಹುಡುಗಿಯೊಬ್ಬಳ ಮೇಲೆ ಪ್ರೀತಿ ಹುಟ್ಟಿದ ಸಮಯ. ಪ್ರೀತಿಯ ವಿಷಯವನ್ನು ಪ್ರೇಯಸಿಯ ಬಳಿ ಹೇಳಲು ನಾಯಕ ಕಾಲೇಜಿಗೆ ಆಗಮಿಸುತ್ತಾನೆ. ಆತನ ಕಂಡ ಕೂಡಲೆ ಅಲ್ಲಿ ನೆರೆದ ಅಭಿಮಾನಿ ವೃಂದ ಹಸ್ತಾಕ್ಷರ ಪಡೆಯುತ್ತಾರೆ.

ಅಭಿಮಾನಿಗಳ ಮನ ಗೆದ್ದ ಆತ ಪ್ರೇಯಸಿಯ ಮನ ಓಲೈಸಲು ಮುಂದಾಗುತ್ತಾನೆ. ಅಲ್ಲಿದ್ದ ಜನಸಮೂಹದ ಮುಂದೆ ಇವಳೇ ಶ್ರಾವಂತಿ. ನಾನು ಇವಳನ್ನೇ ಮದುವೆ ಆಗೋದು ಅಂತ ಹೇಳುತ್ತಾನೆ. ಈ ಸನ್ನಿವೇಶವವನ್ನು ಶ್ರೀಸತ್ಯನಾರಾಯಣ ಕಂಬೈನ್ಸ್ ಲಾಂಛನದಲ್ಲಿ ನಿರ್ಮಾಣವಾಗುತ್ತಿರುವ 'ಎಂಗೇಜ್‌ಮೆಂಟ್' ಚಿತ್ರಕ್ಕಾಗಿ ನಿರ್ದೆಶಕ ಎಸ್.ಪಿ.ನಂಜುಂಡಿ ಬೆಂಗಳೂರಿನ ರೇವಾ ಕಾಲೇಜಿನಲ್ಲಿ ಚಿತ್ರಿಸಿಕೊಂಡರು. ನಾಯಕ ಪ್ರಶಾಂತ್, ನಾಯಕಿ ಆಶಾ ಮುಂತಾದವರು ಈ ಭಾಗದ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದರು.

ನಿರ್ದೇಶಕರೇ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದಿರುವ ಈ ಚಿತ್ರಕ್ಕೆ ಎ.ಟಿ.ರವೀಶ್ ಅವರ ಸಂಗೀತವಿದೆ. ರೇಣುಕುಮಾರ್ ಛಾಯಾಗ್ರಹಣ, ದಾಮೋದರ್ ಸಂಕಲನ, ಶ್ರೀನಿವಾಸ್ ಕಲಾನಿರ್ದೆಶನ ಹಾಗೂ ದಾಡಿ ರಮೇಶ್ ನಿರ್ಮಾಣ ನಿರ್ವಹಣೆ 'ಎಂಗೇಜ್‌ಮೆಂಟ್' ಚಿತ್ರಕ್ಕಿದೆ. ಪ್ರಶಾಂತ್, ಆಶಾ, ಚಂದನ್, ರಾಮಕೃಷ್ಣ, ರಮೇಶ್‌ಭಟ್, ಬ್ಯಾಂಕ್‌ಜನಾರ್ದನ್, ಜ್ಯೋತಿ, ಮೈಕಲ್‌ಮಧು, ಕಿಲ್ಲರ್‌ವೆಂಕಟೇಶ್, ಸತ್ಯಜಿತ್, ಮಾಸ್ಟರ್ ಅಭಿಷೇಕ್ ಮುಂತಾದವರು ಚಿತ್ರದ ತಾರಾಬಳಗದಲ್ಲಿದ್ದಾರೆ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada