For Quick Alerts
  ALLOW NOTIFICATIONS  
  For Daily Alerts

  ತವರುಮನೆಗೆ ಅಡಿಯಿಟ್ಟ ಹರಿಪ್ರಿಯಾ

  |

  ದಕ್ಷಿಣದ ಒಂದು ಸುತ್ತಿನ ಪ್ರದಕ್ಷಿಣೆಯ ನಂತರ ಕನ್ನಡತಿ ಹರಿಪ್ರಿಯಾ ಮತ್ತೆ ತವರಿಗೆ ಬಂದಿದ್ದಾರೆ. 'ಕಳ್ಳರ ಸಂತೆ' ಚಿತ್ರದಲ್ಲಿನ ಆಕೆಯ ನಟನೆ ಪ್ರೇಕ್ಷಕರಿಗೆ ಇಷ್ಟವಾಗಿದೆ. ಈವರೆಗೆ ನಟನೆಗಿಂತ ವಿವಾದ ಹಾಗೂ ಜಗಳಗಳ ಮೂಲಕವೇ ಸುದ್ದಿಯಾಗುತ್ತಿದ್ದ ಹರಿಪ್ರಿಯಾ ಮೊದಲ ಬಾರಿಗೆ ನಟನೆಯ ಮೂಲಕ ಗಮನಸೆಳೆದಿದ್ದಾರೆ. 'ಕಳ್ಳರ ಸಂತೆ'ಯಲ್ಲಿ ಹರಿಪ್ರಿಯಾ ನಟನೆ ಯಾವ ಮಟ್ಟಿಗೆ ಇದೆಯೆಂದರೆ, ಈ ಚೆಲುವೆಯ ಎದುರು ಯುವನಾಯಕ ಯಶ್ ಪಾಪದ ಹುಡುಗನಂತೆ ಕಾಣಿಸುತ್ತಾನೆ.

  'ಕಳ್ಳರ ಸಂತೆ'ಯಲ್ಲಿನ ತಮ್ಮ ಪಾತ್ರದ ಯಶಸ್ಸನ್ನು ಹರಿಪ್ರಿಯಾ ನಿರ್ದೇಶಕರಿಗೆ ಅರ್ಪಿಸುತ್ತಾಳೆ. ನಿರ್ದೇಶಕಿ ಸುಮನಾ ಕಿತ್ತೂರು ಬಗೆಗೆ ಅವರದ್ದು ಶಿಷ್ಯಭಾವ! 'ಕಳ್ಳರ ಸಂತೆ' ಅನುಭವದ ಬಗ್ಗೆ ಖುಷಿ ವ್ಯಕ್ತಪಡಿಸುವ ಹರಿಪ್ರಿಯಾ, 'ಸುಮನಾ ನನಗೆ ಅಕ್ಕನಿದ್ದಂತೆ' ಎನ್ನುವ ಹರಿಪ್ರಿಯಾ- ಅಕ್ಕನಿಂದ ಸಾಕಷ್ಟು ಪಾಠ ಕಲಿತಿರುವುದಾಗಿ ಹೇಳಿಕೊಂಡಿದ್ದಾರೆ.

  ಅತ್ತ ತೆಲುಗಿನಲ್ಲಿ ಹರಿಪ್ರಿಯಾ ನಟನೆಯ 'ಥಕಿತಾ ಥಕಿತಾ' ಚಿತ್ರದ ಬಗೆಗೂ ಒಳ್ಳೆಯ ಮಾತುಗಳಿವೆ. ನಟಿ ಭೂಮಿಕಾ ಚಾವ್ಲಾ ನಿರ್ಮಿಸಿರುವ ಈ ಚಿತ್ರ ಗೆದ್ದರೆ ಕನ್ನಡದ ಹುಡುಗಿ ತೆಲುಗಿನಲ್ಲಿ ಇನ್ನಷ್ಟು ಅವಕಾಶಗಳನ್ನು ಗಿಟ್ಟಿಸಿದರೂ ಗಿಟ್ಟಿಸಬಹುದು. 'ಕಳ್ಳರ ಸಂತೆ'ಯಲ್ಲಿ ಗಮನ ಸೆಳೆದರೂ ಹರಿಪ್ರಿಯಾಳ ಅದೃಷ್ಟ ಉಜ್ವಲವಾಗಿರುವಂತೆ ಕಾಣಿಸುತ್ತಿಲ್ಲ.

  ಒಳ್ಳೆಯ ವಿಮರ್ಶೆಗಳನ್ನು ಪಡೆದರೂ ಸಂತೆಯ ಬಗ್ಗೆ ಪ್ರೇಕ್ಷಕ ಅಷ್ಟಾಗಿ ಆಸಕ್ತಿ ವ್ಯಕ್ತಪಡಿಸಿಲ್ಲ. ಇದರ ಬೆನ್ನಿಗೇ, ಸಂಕ್ರಾಂತಿಗೆ ಸೆಟ್ಟೇರಲಿರುವ ಯೋಗರಾಜ ಭಟ್ ನಿರ್ಮಾಣ-ನಿರ್ದೇಶನದ ಚಿತ್ರದಿಂದ ಹರಿಪ್ರಿಯಾಳನ್ನು ಕೈಬಿಡಲಾಗಿದೆ ಎನ್ನುವ ಸುದ್ದಿಯಿದೆ. ಈ ಮೊದಲು ದಿಗಂತ್‌ಗೆ ಜೋಡಿಯಾಗಿ ಹರಿಪ್ರಿಯಾಳನ್ನು ನಿಕ್ಕಿ ಮಾಡಿದರೂ, ಬದಲಾದ ಕಥೆಗೆ ಬೇರೆ ನಾಯಕಿಯನ್ನು ಭಟ್ಟರು ಬಯಸುತ್ತಿದ್ದಾರಂತೆ.

  ಉಳಿದಂತೆ 'ನಂದೇ' ಎನ್ನುವ ಚಿತ್ರವೊಂದಕ್ಕೆ ನಾಯಕಿಯಾಗಿ ಆಯ್ಕೆಯಾಗಿದ್ದಾಳೆ. ಶ್ರೀಮುರಳಿ ಈ ಚಿತ್ರದ ನಾಯಕ.ಶಿವರಾಜಕುಮಾರ್ ನಾಯಕತ್ವದ 'ಚೆಲುವೆಯೇ ನಿನ್ನೇ ನೋಡಲು' ಚಿತ್ರದಲ್ಲೂ ಹರಿಪ್ರಿಯಾ ನಟಿಸಿದ್ದಾಳೆ. ಹಾಡಿನ ದೃಶ್ಯಗಳಲ್ಲಿ ಶಿವರಾಜ್‌ಗೆ ಸಮವಾಗಿ ಹರಿಪ್ರಿಯಾ ಕುಣಿದಿದ್ದಾಳೆ ಎನ್ನುತ್ತದೆ ಚಿತ್ರತಂಡ. ಚೆಲುವೆಯಾದರೂ ಹರಿಪ್ರಿಯಾಳಿಗೆ ಬೇಡಿಕೆ ಕುದುರಿಸುತ್ತದಾ ನೋಡಬೇಕು.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X