For Quick Alerts
  ALLOW NOTIFICATIONS  
  For Daily Alerts

  ಲೀಲಾವತಿಯರನ್ನು ಮರೆತ ಮಹಿಳಾ ದಿನಾಚರಣೆ

  By *ಬಾಲರಾಜ್ ತಂತ್ರಿ
  |

  ಹೃದಯ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದ ನಟ ವಿನೋದ್ ರಾಜ್ ಇನ್ನೆರಡು ದಿನಗಳಲ್ಲಿ ಎಂ ಎಸ್ ರಾಮಯ್ಯ ಆಸ್ಪತ್ರೆಯಿಂದ ಬಿಡುಗಡೆಗೊಳ್ಳಲಿದ್ದಾರೆ. ಒಂದಲ್ಲಾ ಒಂದು ನೋವು, ಅವಮಾನಗಳಿಂದ ಜೀವನ ಸಾಗಿಸುತ್ತಿರುವ ಲೀಲಾವತಿ ಕುಟುಂಬಕ್ಕೆ ದೇವರು ಎಲ್ಲೋ ಸ್ವಲ್ಪ ಕರುಣೆ ತೋರಿದ್ದಾನೆ.

  ಆ ಸಮಯದಲ್ಲಿ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಇನ್ನೊಂದು ರೋಗಿಗೆ ಮೀಸಲಾಗಿಟ್ಟಿದ್ದ 'operation theater' ಮತ್ತು ವೈದ್ಯರ ತಂಡ ವಿನೋದ್ ರಾಜ್ ಗೆ ಶಸ್ತ್ರಚಿಕಿತ್ಸೆ ನಡೆಸಿ ಗಂಡಾಂತರದಿಂದ ಪಾರು ಮಾಡಿದೆ. ಸದ್ಯ, ಲವಲವಿಕೆಯಿಂದ ಇರುವ ವಿನೋದ್ ಮತ್ತು ತಾಯಿ ಲೀಲಾವತಿ ಮುಖದಲ್ಲಿ ಏನೋ ವಿಷಾದ ಎದ್ದು ಕಾಣುತ್ತಿದೆ.

  ಎಲ್ಲರಿಗೂ ತಿಳಿದಿರುವ ಹಾಗೆ ಆರು ತಿಂಗಳ ಅವಧಿಯಲ್ಲಿ ಎರಡು ಬಾರಿ ಅವರ ತೋಟದ ಮನೆಗೆ ಬೆಂಕಿ ಬಿತ್ತೋ ಅಥವಾ ಹಚ್ಚಲಾಯಿತೋ? ಅದಕ್ಕೆ ಬಹುಷಃ ಲೀಲಾವತಿ ಕುಟುಂಬ ಮಾತ್ರ ಸರಿಯಾದ ಉತ್ತರ ಹೇಳಬಹುದು. ಭೂಮಿಯಲ್ಲಿ ಯಾವುದೇ ಒಂದು ಕುಟುಂಬ ಒಂದು ನೋವು ಅನುಭವಿಸಲೂ ಒಂದು ಇತಿಮಿತಿ ಬೇಕಲ್ಲವೇ? ಲೀಲಾವತಿ ಕುಟುಂಬಕ್ಕೆ ಯಾಕೆ ಹೀಗೆ? "ಪ್ರಪಂಚದಲ್ಲಿ ಎಲ್ಲಾ ತಾಯಿಂದರಿಗೂ ನನಗೆ ಸಿಕ್ಕಂತ ಮಗನೆ ಸಿಗಲಿ, ಆದರೆ ನಾನು ಅನುಭವಿಸಿದ ನೋವು ಬೇರೆಯಾರಿಗೂ ಬಾರದಿರಲಿ" ಎಂದು ಕಣ್ಣೀರಿಡುತ್ತಾ ಹೇಳುವ ಹಿರಿಯ ಕಲಾವಿದೆ ಲೀಲಾವತಿ ನೋವಿನ ಹಿಂದೆ ಏನೇನು ಸತ್ಯ ಅಡಗಿದೆಯೋ?

  ಡಾ. ರಾಜಕುಮಾರ್ ಕಾಲದಿಂದ ಇಂದಿನ ವರೆಗೂ ಲೀಲಾವತಿ ಅವರನ್ನು ಚಿತ್ರರಸಿಕರು ವಿವಿಧ ಪಾತ್ರದಲ್ಲಿ ನೋಡಿದ್ದಾರೆ, ಅವರ ಪಾತ್ರದಿಂದ ನೋವು, ನಲಿವು ಅನುಭವಿಸಿದ್ದಾರೆ. ತಾಯಿಯ ಪಾತ್ರವೆಂದರೆ ಅದು ಪಂಡರೀಬಾಯಿ ಅಥವಾ ಲೀಲಾವತಿ. ಇಂತಹ ತಾಯಿ ನೋವಿಗೆ ಯಾರೂ ಓಗೂಡದೆ ಇರುವುದು ದುಃಖದ ವಿಚಾರ. ಸುಮಾರು 600ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿ, ಕನ್ನಡಿಗರ ಮನದಲ್ಲಿ ತಾಯಿ ಸ್ಥಾನದಲ್ಲಿರುವ ಲೀಲಾವತಿ ಮಗ ವಿನೋದ್ ರಾಜ್ ಹೃದಯಬೇನೆಗೆ ಒಳಗಾಗಿ ಆಸ್ಪತ್ರೆಗೆ ದಾಖಲಾದಾಗ ಸಾಂತ್ವನ ನೀಡಲು ಚಿತ್ರರಂಗದಿಂದ ಒಬ್ಬರೇ ಒಬ್ಬರು ಹೋಗದೆ ಇದ್ದಿದ್ದು ಬಹಳ ನೋವಿನ ವಿಚಾರ.

  ತಾನಾಯಿತು, ತನ್ನ ಕೆಲಸವಾಯಿತು ಎಂದು ಬೇರೆಯವರ ತಂಟೆಗೆ ಹೋಗದೆ ತಮ್ಮ ಪಾಡಿಗೆ ತಾವಿರುವ ಲೀಲಾವತಿ ಕುಟುಂಬದ ಮೇಲೆ ಯಾಕೆ ಚಿತ್ರರಂಗದವರಿಗೆ ಅಸಡ್ಡೆ ಎನ್ನುವುದು ಎಲ್ಲರನ್ನೂ ಕಾಡುವ ಪ್ರಶ್ತ್ನೆ. ವಿನೋದ್ ರಾಜ್ ಗೆ ನಿರ್ಮಾಪಕ ದ್ವಾರಕೀಶ್ ಬ್ರೇಕ್ ನೀಡಿದರೂ ಆಮೇಲೆ ವಿನೋದ್ ರಾಜ್ ಅವಲಂಬಿಸಿದ್ದು ತನ್ನ ಸ್ವಂತ ಬ್ಯಾನರ್ ನಿರ್ಮಾಣದ ಚಿತ್ರಗಳನ್ನೇ. ಕಲೆಯನ್ನೇ ನಂಬಿ ಅದನ್ನೇ ಉಸಿರಾಗಿಸಿ ಬದುಕುತ್ತಿರುವ ಈ ಕುಟುಂಬಕ್ಕೆ ಯಾರೂ ತಮ್ಮ ಚಿತ್ರಗಳಲ್ಲಿ ನಟಿಸಲು ಅವಕಾಶ ನೀಡದಿರುವುದು ಯಾರಿಗೇ ಆಗಲೀ, ಸರಿ ಅನಿಸುತ್ತಾ?

  ಚಿತ್ರರಂಗವನ್ನೇ ನಂಬಿ ಬದುಕುತ್ತಿರುವ ಹಿರಿಯ ಕಲಾವಿದರ ಕುಟುಂಬಕ್ಕೆ ಇದೇನಾ ನಮ್ಮ ಚಿತ್ರರಂಗ ತೋರುವ ಸೌಜನ್ಯ, ಮರ್ಯಾದೆ. ಆರ್ಥಿಕ ಸಹಾಯದ ಅವಶ್ಯಕತೆ ಇಲ್ಲದ ಈ ಕುಟುಂಬಕ್ಕೆ ಬೇಕಾಗಿರುವುದು ಅಭಿಮಾನಿಗಳ ಮತ್ತು ಚಿತ್ರರಂಗದ ಪ್ರೀತಿ, ವಿಶ್ವಾಸ. ನಮ್ಮ ಸಿನಿಮಾ ಕಲಾವಿದರ ಸಂಘ, ರಾಜ್ಯ ಚಲನಚಿತ್ರ ಮಂಡಳಿ, ನಿರ್ಮಾಪಕರ ಸಂಘ, ಆ... ಈ.. ಮುಂತಾದ ಯಾವ ಸಂಘಗಳಿಗೂ, ಮಂಡಳಿಗೂ ಲೀಲಾವತಿ ಕುಟುಂಬದ ನೋವಿಗೆ ಸ್ಪಂಧಿಸುವ, ವಿನೋದ್ ರಾಜ್ ಅವರನ್ನು ಭೇಟಿ ಮಾಡಿ ಸಾಂತ್ವನ ಹೇಳುವ ಕನಿಷ್ಠ ಸೌಜನ್ಯ ಇಲ್ಲದಿರುವುದು ದುರಂತವಲ್ಲದೆ ಇನ್ನೇನು?

  ಈ ಭೂಮಿಯಲ್ಲಿ ಕಷ್ಟ, ನೋವು, ಹೆಜ್ಜೆ ಹೆಜ್ಜೆಗೂ ಅವಮಾನ, ಆಸರೆಯಿಲ್ಲದೆ ಬದುಕುತ್ತಿರುವ, ಹೋರಾಟವೇ ಬದುಕು ಎನ್ನುವಂತಿರುವ ಎಷ್ಟೋ ತಾಯಂದಿಯರು/ ಮಹಿಳೆಯರೂ ಇದ್ದಾರೆ. ಅಂಥವರ ಪ್ರತಿನಿಧಿಯಾಗಿ ಕಾಣಿಸುವ ಅಭಿನೇತ್ರಿ ಲೀಲಾವತಿ ಅಮ್ಮನವರಿಗೆ ಮಹಿಳಾ ದಿನಾಚರಣೆಯ ಶುಭ ಹಾರೈಕೆಗಳು.

  English summary
  Oneindia Kannada wishes happy women's day to veteran Kannada actress Leelavathi. Her only son and only hope Vinod Rajs heart showing recovery after it suffered attack last week.
 Vinod will be released from M S Ramaiah hospital in a day or two.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X