»   »  ಸೆನ್ಸಾರ್ ವೀಕ್ಷಣೆಗೆ 'ಮಳೆ ಬರಲಿ ಮಂಜೂ ಇರಲಿ'

ಸೆನ್ಸಾರ್ ವೀಕ್ಷಣೆಗೆ 'ಮಳೆ ಬರಲಿ ಮಂಜೂ ಇರಲಿ'

Posted By:
Subscribe to Filmibeat Kannada
A still from Male Barali Manju Irali
ದಕ್ಷತ್ ಕಂಬೈನ್ಸ ಲಾಂಛನದಡಿಯಲ್ಲಿ ಜೈ ಜಗದೀಶ್ ಮತ್ತು ವಿಜಯಲಕ್ಷ್ಮಿ ಸಿಂಗ್ ನಿರ್ಮಿಸಿ ಇದೀಗ ತೆರೆಗೆ ಸಿದ್ಧವಾಗಿರುವ 'ಮಳೆ ಬರಲಿ.. ಮಂಜೂ ಇರಲಿ' ಚಿತ್ರವು ಈ ವಾರ ಸೆನ್ಸಾರ್ ವೀಕ್ಷಣೆಗೆ ಹೋಗಲಿದೆ.

ಚಿತ್ರವನ್ನು ಈಗಾಗಲೆ ವೀಕ್ಷಿಸಿರುವ ಕೆಲವರು ಶ್ರೀನಗರ ಕಿಟ್ಟಿ ಮತ್ತು ಪಾರ್ವತಿ ಮೆನನ್ ಅಭಿನಯವನ್ನು ಮುಕ್ತ ಕಂಠದಿಂದ ಪ್ರಶಂಸಿಸಿದ್ದಾರೆ.ಚಿತ್ರವು ಮೇ ತಿಂಗಳಲ್ಲಿ ತೆರೆಗೆ ಬರಲಿದೆ ಎಂದು ನಿರ್ಮಾಪಕ ಜೈ ಜಗದೀಶ್ ಹೇಳಿದ್ದಾರೆ. ಚಿತ್ರಕ್ಕೆಬಿ ಎ ಮಧು ಸಂಬಾಷಣೆ, ಮನೋಮೂರ್ತಿ ಸಂಗೀತ, ಯೋಗರಾಜ್ ಭಟ್ ಸಾಹಿತ್ಯ ಮತ್ತು ಕೆಂಪರಾಜ್ ಅವರ ಸಂಕಲನವಿದೆ. ಚಿತ್ರದ ಕಥೆ, ಚಿತ್ರಕಥೆ, ನಿರ್ದೇಶನದ ಹೊಣೆಯನ್ನು ವಿಜಯಲಕ್ಷ್ಮಿ ಸಿಂಗ್ ಹೊತ್ತಿದ್ದಾರೆ.

ಪ್ರಮುಖ ತಾರಾಗಣದಲ್ಲಿ ಶ್ರೀನಗರ ಕಿಟ್ಟಿ , ಪಾರ್ವತಿ ಮೆನನ್, ನಾಗಕಿರಣ್, ಜೈ ಜಗದೀಶ್, ಹರಿಪ್ರಿಯ, ಹೇಮಾ ಚೌಧರಿ, ಮುಖ್ಯಮಂತ್ರಿ ಚಂದ್ರು, ಶರಣ್, ಸಾಧು ಕೋಕಿಲ, ಮೇಘ ಶ್ರೀ ಮುಂತಾದವರಿದ್ದಾರೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

ಎರಡನೇ ಮದುವೆಗೆ ಸಜ್ಜಾದ ನಟಿ ಶ್ರುತಿ
ಜಗ್ಗೇಶ್ ವಿರುದ್ಧ ಸಿಡಿದೆದ್ದ ಅಂಬಿ ಅಭಿಮಾನಿಗಳು
ಜಗ್ಗೇಶ್ ವಿರುದ್ಧ ಸಿಡಿದೆದ್ದ ಅಂಬಿ ಅಭಿಮಾನಿಗಳು

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada