»   » ಹಾಯ್ ಮಚ್ಚಾ ಲವ್ ಯು ಆಲ್; ನಮಿತಾ ಟ್ವೀಟ್

ಹಾಯ್ ಮಚ್ಚಾ ಲವ್ ಯು ಆಲ್; ನಮಿತಾ ಟ್ವೀಟ್

Posted By:
Subscribe to Filmibeat Kannada

ನಮಿತಾ ಎಲ್ಲಿ ನಮಿತಾ ಎಲ್ಲಿ ಎಂದು ಹುಡುಕಿತ್ತಿರುವ ಆಕೆಯ ವೀರ ಅಭಿಮಾನಿಗಳಿಗೊಂದು ಸಂತಸದ ಸುದ್ದಿ. ಜನಪ್ರಿಯ ಸಾಮಾಜಿಕ ತಾಣ ಟ್ವಿಟ್ಟರ್ ಗೆ ನಮಿತಾ ಪದಾರ್ಪಣೆ ಮಾಡಿದ್ದಾರೆ. ಟ್ವಿಟ್ಟರ್ ಗೆ ನಮಿತಾ ಜಿಗಿದಿದ್ದೇ ತಡ ಆಕೆಯ ಸಾವಿರಕ್ಕೂ ಅಧಿಕ ಅಭಿಮಾನಿಗಳು ಆಕೆಯ ಹಿಂದೆ ಬಿದ್ದಿದ್ದಾರೆ. ಅದರಲ್ಲೂ ಮುಖ್ಯವಾಗಿ ಟ್ವಿಟ್ಟರ್ ಬಗ್ಗೆ ಅರಿವಿರುವ ಅಭಿಮಾನಿಗಳು ಮಾತ್ರ.

ಟ್ವಿಟ್ಟರ್ ಅಂದ್ರೆ ಏನು ಎಂದು ಗೊತ್ತಿಲ್ಲದವರ ಪರಿಸ್ಥಿತಿ ಕೈಲಾದವನು ಮೈ ಪರಚಿಕೊಂಡ ಎಂಬಂತಾಗಿದೆ. ಕೆಲವರಂತೂ ಟ್ವಿಟ್ಟರ್ ರನ್ನು ಬಳಸುವುದು ಹೇಗೆ? ನಮಿತಾರನ್ನು ಫಾಲೋ ಮಾಡುವುದು ಹೇಗೆ ಎಂದು ತಲೆಕೆಡಿಸಿಕೊಂಡು ಚಿಂತಾಜನಕ ಪರಿಸ್ಥಿತಿಯಲ್ಲಿದ್ದಾರೆ. ಅವರು ಟ್ವಿಟ್ಟರ್ ಕಲಿಯುವುದು ಅನಿವಾರ್ಯವಾಗಿದೆ.

ತಮ್ಮ ಚೊಚ್ಚಲ ಟ್ವೀಟ್ ನಲ್ಲೇ ನಮಿತಾ "ಹಾಯ್ ಮಚ್ಚಾ!! ಲವ್ ಯು ಆಲ್, This is my PERSONAL twitter account" ಎಂದು ಹೇಳಿ ಅಭಿಮಾನಿಗಳನ್ನು ಕೆಣಕಿದ್ದಾರೆ. ಬರೀ ಹಾಯ್ ಹೇಳಿ ನಮಿತಾ ಬಾಯಿ ಮುಚ್ಚಿಕೊಂಡಿಲ್ಲ. ಜೊತೆಗೆ ತಮ್ಮ ಒಂದು ಬೊಂಬಾಟ್ ಚಿತ್ರವನ್ನು ಟ್ವಿಟ್ಟರ್ ನಲ್ಲಿ ತೇಲಿ ಬಿಟ್ಟಿದ್ದಾರೆ. ಆಕೆಯ ಮೈ ಪುಳಕಿಸುವ ಚಿತ್ರವನ್ನು ಕಂಡು ಅಭಿಮಾನಿಗಲು ಧನ್ಯರಾಗಿದ್ದಾರೆ.

ತಮ್ಮ ಚಿತ್ರಗಳು ಹಿಟ್ ಆದಂತೆ ಟ್ವಿಟ್ಟರ್ ನಲ್ಲೂ ನಮಿತಾ ಸೂಪರ್ ಹಿಟ್ ಆಗುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ಟ್ವಿಟ್ಟರ್ ಅಕೌಂಟ್ ತೆರೆಯುವುದೇನೋ ಸುಲಭ. ಆದರೆ ಅದರಲ್ಲಿ ಎಷ್ಟು ಮಂದಿ ಕ್ರಿಯಾಶೀಲರಾಗಿರುತ್ತಾರೆ ಎಂಬುದೇ ಪ್ರಶ್ನೆ. ದಕ್ಷಿಣದ ತಾರೆಗಳಾದ ತ್ರಿಶಾ, ಮಮತಾ, ರಮ್ಯಾ ಟ್ವಿಟ್ಟರ್ ನಲ್ಲಿ ಸದ್ಯಕ್ಕೆ ಕ್ರೀಯಾಶೀಲರಾಗಿದ್ದಾರೆ. ನಮಿತಾ ಸಹ ಅಭಿಮಾನಿಗಳಿ ನಿರಾಸೆ ಮೂಡಿಸದೆ ನಿರಾತಂಕವಾಗಿ ಟ್ವೀಟ್ ಮಾಡುತ್ತಿರಲಿ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada