»   » ರಾಹುಲ್ ಬಾಳಸಂಗಾತಿಯಾಗಿ ಡಿಂಪಿ ಗಂಗೂಲಿ

ರಾಹುಲ್ ಬಾಳಸಂಗಾತಿಯಾಗಿ ಡಿಂಪಿ ಗಂಗೂಲಿ

Posted By:
Subscribe to Filmibeat Kannada

ರಾಹುಲ್ ಮಹಾಜನ್ ಕಡೆಗೂ ತಮ್ಮ ನೆಚ್ಚಿನ ಬಾಳ ಸಂಗಾತಿಯನ್ನು ಆಯ್ಕೆ ಮಾಡಿಕೊಳ್ಳುವಲ್ಲಿ ಸಫಲರಾಗಿದ್ದಾರೆ. ಸ್ವಯಂವರ ಮುಗಿಯುತ್ತಿದ್ದಂತೆ ಕೊಲ್ಕತ್ತಾ ಮೂಲದ ಬಂಗಾಳಿ ಹುಡುಗಿ ಡಿಂಪಿ ಗಂಗೂಲಿಯನ್ನು ಶಾಸ್ತ್ರೋಕ್ತವಾಗಿ ರಾಹುಲ್ ಮಹಾಜನ್ ಮದುವೆಯಾದರು.

ಪುರೋಹಿತರು ಮಂತ್ರ ಪಠಿಸುತ್ತಿದ್ದರೆ ಡಿಂಪಿ ಮತ್ತು ರಾಹುಲ್ ಸಪ್ತಪದಿ ತುಳಿದರು. ಮದುವೆಯ ಬಳಿಕ ರಾಹುಲ್ ಮಾತನಾಡುತ್ತಾ, ನನ್ನ ಕೊನೆಯುಸಿರಿರುವ ತನಕ ಡಿಂಪಿಯೊಂದಿಗೆ ಬಾಳುತ್ತೇನೆ. ಮುಂಬೈನ ಬಾಂದ್ರಾದಲ್ಲಿ ನಮ್ಮ ಮದುವೆಯನ್ನು ರಿಜಿಸ್ಟರ್ಡ್ ಮಾಡಿಸಿಕೊಳ್ಳುತ್ತೇವೆ ಎಂದು ಪ್ರತಿಕ್ರಿಯಿಸಿದರು.

ಅದ್ದೂರಿಯಾಗಿ ನಡೆದ ಇವರಿಬ್ಬರ ಮದುವೆಯನ್ನು ಮುಂಬೈನ ಹೋಟೆಲ್ ಲೀಲಾದಲ್ಲಿ ಇಮ್ಯಾಜಿನ್ ಟಿವಿ ಆಯೋಜಿಸಿತ್ತು. ರಾಹುಲ್ ಕುಟುಂಬ ಸದಸ್ಯರು, ಗೆಳೆಯರು ಮತ್ತು ಕಿರುತೆರೆ ತಾರೆಗಳು ಮದುವೆ ಸಂಭ್ರಮಕ್ಕೆ ಸಾಕ್ಷಿಯಾದರು. ಎನ್ ಡಿಟಿವಿ ಇಮ್ಯಾಜಿನ್ ನ ರಿಯಾಲಿಟಿ ಶೋ 'ರಾಹುಲ್ ಕಾ ಸ್ವಯಂವರ್' ಮೂಲಕ ತಮ್ಮ ಬಾಳಸಂಗಾತಿಯನ್ನು ರಾಹುಲ್ ಆಯ್ಕೆ ಮಾಡಿಕೊಂಡಿದ್ದಾರೆ.

'ರಾಹುಲ್ ಕಾ ಸ್ವಯಂವರ್' ಕಾರ್ಯಕ್ರಮದ ಕೊನೆಯ ಸುತ್ತಿನಲ್ಲಿ ಮೂವರು ಹುಡುಗಿಯರ ನಡುವೆ ತೀವ್ರ ಸ್ಪರ್ಧೆ ಏರ್ಪಟ್ಟಿತ್ತು. ಹರ್ ಪ್ರೀತ್ ಛಾಬ್ರ, ಡಿಂಪಿ ಗಂಗೂಲಿ ಮತ್ತು ನಿಕುಂಜ್ ಮಲಿಕ್ ನಡುವಿನ ಹಣಾಹಣಿಯಲ್ಲಿ ಕೊನೆಗೆ ರಾಹುಲ್ ಹೃದಯವನ್ನು ಡಿಂಪಿ ಗಂಗೂಲಿ ಗೆದ್ದಿದ್ದಾರೆ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada