For Quick Alerts
  ALLOW NOTIFICATIONS  
  For Daily Alerts

  ಖಾಕಿ ಖದರ್‌ನಲ್ಲಿ ಹೊನ್ನಾಳಿ ಶಾಸಕ ರೇಣುಕಾಚಾರ್ಯ

  By Rajendra
  |

  ಕರ್ನಾಟಕದ ವರ್ಣರಂಜಿತ ರಾಜಕಾರಣಿ, ಹೊನ್ನಾಳಿ ಶಾಸಕ ರೇಣುಕಾಚಾರ್ಯ ಕಲರ್ ಫುಲ್ ಇನ್ನಿಂಗ್ಸ್ ಇಂದು ಗುರುವಾರ(ಸೆ.8) ಆರಂಭವಾಯಿತು. ಖಾಕಿ ಖದರ್‌ನಲ್ಲಿ ಅವರು ಇಂದು ಮೈಸೂರು ರಸ್ತೆಗಿಳಿದಿದ್ದರು. ಇದೇನಿದು ಅಬಕಾರಿ ಸಚಿವರ ಹೊಸ ವೇಷ ಎಂದು ನೋಡುತ್ತಿದ್ದವರು ಕೊಂಚ ಗಲಿಬಿಲಿಗೊಂಡರು.

  ಆದರೆ ಅವರ ಗಲಿಬಿಲಿ, ಗೊಂದಲ ಕೊಂಚ ಸಮಯದಲ್ಲೇ ನಿವಾರಣೆಯಾಯಿತು. ಮಾಸ್ ನಿರ್ದೇಶಕ ಓಂ ಪ್ರಕಾಶ್ ರಾವ್ ಆಕ್ಷನ್ ಕಟ್ ಹೇಳುತ್ತಿರುವ 'ಭೀಮಾ ತೀರದಲ್ಲಿ' ಶೂಟಿಂಗ್ ಇದು ಎಂದು ಗೊತ್ತಾಗಲು ಜಾಸ್ತಿ ಸಮಯ ಹಿಡಿಸಲಿಲ್ಲ.

  ಚಿತ್ರದಲ್ಲಿ ಅವರು ಪೊಲೀಸ್ ಡಿಜಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಒಂದು ದಿನದ ಚಿತ್ರೀಕರಣಕ್ಕಾಗಿ ಅವರು ಇಂದು ಬಣ್ಣ ಹಚ್ಚಿಕೊಂಡಿದ್ದರು. ಈ ಸಂದರ್ಭದಲ್ಲಿ ಅವರು ಮಾತನಾಡುತ್ತಾ, ಪ್ರೈಮರಿ ಸ್ಕೂಲ್‌ನಿಂದಲೂ ನಾನು ನಾಟಕಗಳನ್ನು ಆಡುತ್ತಿದೆ. ಬಣ್ಣದ ಜಗತ್ತಿನ ನಂಟು ತಮ್ಮನ್ನು ಇಲ್ಲಿಯವರೆಗೂ ಕರೆತಂದಿದೆ ಎಂದರು.

  ಅಣಜಿ ನಾಗರಾಜ್ ನಿರ್ಮಿಸುತ್ತಿರುವ ಈ ಚಿತ್ರದಲ್ಲಿ ದುನಿಯಾ ವಿಜಯ್ ನಾಯಕ ನಟನಾಗಿ ಅಭಿನಯಿಸಿದ್ದಾರೆ. ಭೀಮಾ ತೀರದಲ್ಲಿ ರಕ್ತದ ಹೊಳೆಯನ್ನೇ ಹರಿಸಿದ ಚಂದಪ್ಪ ಹರಿಜನ ಜೀವನ ಕಥೆಯನ್ನಾಧರಿಸಿದ ಚಿತ್ರವಿದು. ಪ್ರಣೀತಾ ಹಾಗೂ ಪ್ರಜ್ವಲ್ ಪೂವಯ್ಯ ಚಿತ್ರದ ಇಬ್ಬರು ನಾಯಕಿಯರು. (ದಟ್ಸ್‌ಕನ್ನಡ ಸಿನಿವಾರ್ತೆ)

  English summary
  Karnataka excise minister Renukacharya starts colourful innings on Thursday. He entered Kannada films through the movie Bheema Theeradalli, which is being directed by Om Prakash Rao. He is appeared in the role of police DG.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X