»   » ಸಪ್ತಪದಿ ತುಳಿದ ನಿರ್ಮಾಪಕ ಎಸ್ ವಿ ಬಾಬು ಪುತ್ರ

ಸಪ್ತಪದಿ ತುಳಿದ ನಿರ್ಮಾಪಕ ಎಸ್ ವಿ ಬಾಬು ಪುತ್ರ

Posted By:
Subscribe to Filmibeat Kannada

ಕನ್ನಡ ಚಿತ್ರ ನಿರ್ಮಾಪಕ ಎಸ್ ವಿ ಬಾಬು ಅವರ ಮಗ ಎಸ್ ವಿನಯ್ ಬಾಬು ಅವರ ಮದುವೆ ವಿಜೃಂಭಣೆಯಿಂದ ನೆರವೇರಿದೆ. ಬೆಂಗಳೂರು ರಾಜಾಜಿನಗರದ ರಾಜರಾಜೇಶ್ವರಿ ಕಲ್ಯಾಣ ಮಂಟಪದಲ್ಲಿ ಸೋಮವಾರ ವಿ ಲಿಖಿತಾ ಅವರನ್ನು ವಿನಯ್ ಬಾಬು ವೇದ ಮಂತ್ರಗಳ ಸಾಕ್ಷಿಯಾಗಿ ಮದುವೆಯಾದರು.

ಹೊಸಬರ ತಂಡವನ್ನು ಕಟ್ಟಿಕೊಂಡು 'ಜೋಶ್' ನಂತಹ ಯಶಸ್ವಿ ಚಿತ್ರವನ್ನು ನಿರ್ಮಿಸಿದ ಖ್ಯಾತಿ ಎಸ್ ವಿ ಬಾಬು ಅವರದು. ಬಿ ಇ ಕಂಪ್ಯೂಟರ್ ಸೈನ್ಸ್ ಪದವಿಧರ. ವಧು ವಿ ಲಿಖಿತಾ ಸಹ ಎಂಜಿನಿಯರಿಂಗ ಪದವೀಧರೆ. ಇವರಿಬ್ಬರ ಮದುವೆ ಗುರುಹಿರಿಯರ ಸನ್ನಿಧಿಯಲ್ಲಿ ಸೋಮವಾರ ನೆರವೇರಿತು.

ಭಾನುವಾರ(ಜೂ.6) ಸಂಜೆ ನಡೆದ ಆರತಕ್ಷತೆ ಕಾರ್ಯಕ್ರಮಕ್ಕೆ ಕನ್ನಡ ಚಿತ್ರರಂಗದ ಬಹುತೇಕರು ಆಗಮಿಸಿದ್ದರು. ಡಾ.ಜಯಮಾಲಾ, ಗೋಲ್ಡನ್ ಸ್ಟಾರ್ ಗಣೇಶ್, ಎಸ್ ವಿ ರಾಜೇಂದ್ರ ಸಿಂಗ್ ಬಾಬು, ಪ್ರೇಮ್ ಕುಮಾರ್, ಶರಣ್, ಕವಿರಾಜ್, ರಾಂ ನಾರಾಯಣ್, ಆರ್ ಪಿ ಪಟ್ನಾಯಕ್ ಮುಂತಾದವರು ಆಗಮಿಸಿದ್ದರು.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada