For Quick Alerts
  ALLOW NOTIFICATIONS  
  For Daily Alerts

  ತವರು ಮನೆಗೆ ಆಗಮಿಸಿದ ಸ್ಪೈಸಿ ತಾರೆ ಡೈಸಿ ಬೋಪಣ್ಣ

  By Rajendra
  |

  ಸ್ಪೈಸಿ ನಟಿ ಡೈಸಿ ಬೋಪಣ್ಣ ಸುದೀರ್ಘ ಸಮಯದ ಬಳಿಕ ತವರು ಮನೆಗೆ ಆಗಮಿಸಿದ್ದಾರೆ. ಬೆನ್ನುಮೂಳೆ ಚಿಕಿತ್ಸೆಗೆ ಒಳಗಾಗಿದ್ದ ಅವರು ಸುದೀರ್ಘ ಒಂದು ವರ್ಷದ ಬಳಿಕ ಮತ್ತೆ ಕನ್ನಡ ಚಿತ್ರರಂಗಕ್ಕೆ ಅಡಿಯಿಟ್ಟಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ಎರಡನೆ ಇನ್ನಿಂಗ್ಸ್ ಆರಂಭಿಸಲು ಡೈಸಿ ಬೋಪಣ್ಣ ಸಿದ್ಧರಾಗಿದ್ದಾರೆ.

  ಡೈಸಿ ಬೋಪಣ್ಣ ಬಾಲಿವುಡ್, ಟಾಲಿವುಡ್, ಕೋಲಿವುಡ್ ಮಿಂಚಿದ್ದರು. ಒಲವೇ ಜೀವನ ಲೆಕ್ಕಾಚಾರ, ಸತ್ಯವಾನ್ ಸಾವಿತ್ರಿ, ಗಾಳಿಪಟ, ತವರಿನ ಸಿರಿ, ಬಿಂಬ, ಭಗವಾನ್ ಸೇರಿದಂತೆ ಮುಂತಾದಚಿತ್ರಗಳಲ್ಲಿ ಡೈಸಿ ಗಮನಾರ್ಹ ಅಭಿನಯ ನೀಡಿದ್ದರು. ಈಗ ಮತ್ತೊಂದು ಕನ್ನಡ ಚಿತ್ರದಲ್ಲಿ ನಟಿಸುವ ಅವಕಾಶ ಡೈಸಿ ಅವರನ್ನು ಹುಡುಕಿಕೊಂಡು ಬಂದಿದೆ.

  ಈ ಬಾರಿ ಅವರು ರಮೇಶ್ ಅರವಿಂದ್ ಜೊತೆ 'ಮಾಯಾ' ಚಿತ್ರದಲ್ಲಿ ಪ್ರೇಕ್ಷಕರನ್ನು ಕಾಡಲಿದ್ದಾರೆ. ಈ ಚಿತ್ರ ಬುಧವಾರ ಕಂಠೀರವ ಸ್ಟುಡಿಯೋದಲ್ಲಿ ಸೆಟ್ಟೇರಿತು. ಎಂಟು ಕೆ ಜಿ ತೂಕ ಇಳಿಸಿಕೊಂಡಿರುವ ಡೈಸಿ ಅವರು ಈಗ ಮತ್ತಷ್ಟು ಸ್ಪೈಸಿಯಾಗಿ ಬದಲಾಗಿದ್ದಾರೆ. ಆದರೆ ಸ್ಪೈಸಿ ಅನ್ನಿಸಿಕೊಳ್ಳಲು ಡೈಸಿಗೆ ಇಷ್ಟವಿಲ್ಲವಂತೆ.

  ಚಿತ್ರದಲ್ಲಿ ರಮೇಶ್ ಅರವಿಂದ್ ಅವರದು ನಿರ್ದೇಶನಕ ಪಾತ್ರ. ಅವರಿಗೆ ಸಹಾಯಕ ನಿರ್ದೇಶಕಿಯಾಗಿ ಡೈಸಿ ಕಾಣಿಸಲಿದ್ದಾರೆ. ಕಾಮಿಡಿ ಮತ್ತು ಆಕ್ಷನ್ ಪ್ರಧಾನ ಚಿತ್ರವಿದು. ಈ ರೀತಿಯ ಕಥಾವಸ್ತುವನ್ನು ತೆರೆಗೆ ತರಲು ಇದುವರೆಗೂ ಯಾರೂ ಪ್ರಯತ್ನಿಸಿಲ್ಲ ಎನ್ನುತ್ತಾರೆ ಡೈಸಿ.

  English summary
  The charming actress Daisy Bopanna back to action. She is acting in Kannada film opposite Ramesh Aravind in "Maaya". The movie went on the floors on Wednesday at Kanteeravs studios.
  Thursday, December 9, 2010, 11:48
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X