»   » ಚಾಲೆಂಜಿಂಗ್ ಸ್ಟಾರ್ ಚಿಂಗಾರಿಯ ಬುಲ್ ಬುಲ್ ಯಾರು?

ಚಾಲೆಂಜಿಂಗ್ ಸ್ಟಾರ್ ಚಿಂಗಾರಿಯ ಬುಲ್ ಬುಲ್ ಯಾರು?

Posted By:
Subscribe to Filmibeat Kannada

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 'ಗಜ' ಚಿತ್ರದ ಹಾಡು ನೆನಪಿರಬೇಕಲ್ಲ. "ಬಂಗಾರಿ ಯಾರೆ ನೀ ಬುಲ್ ಬುಲ್...ಸಿಂಗಾರಿ ಯಾಕೇ ಓ ಬುಲ್ ಬುಲ್"' ಎಂಬ ಹಾಡಿನ ಒಂದು ಪದ 'ಚಿಂಗಾರಿ' ಚಿತ್ರದ ಶೀರ್ಷಿಕೆಯಾಗಿದೆ. ಚಿತ್ರದ ನಾಯಕ ನಟ ಸಹ ದರ್ಶನ್. ಕನ್ನಡ ಚಿತ್ರರಂಗದ ಜನಪ್ರಿಯ ನೃತ್ಯ ನಿರ್ದೇಶಕ ಹರ್ಷ ಅವರ ನಿರ್ದೇಶನದಲ್ಲಿ 'ಚಿಂಗಾರಿ' ಚಿತ್ರ ಮೂಡಿಬರಲಿದೆ.

'ಗೆಳೆಯ' ಹಾಗೂ 'ಬಿರುಗಾಳಿ' ಚಿತ್ರಗಳ ಬಳಿಕ ಹರ್ಷ ನಿರ್ದೇಶಿಸುತ್ತಿರುವ ಮೂರನೇ ಚಿತ್ರ 'ಚಿಂಗಾರಿ'. ಆಷಾಢ ಮಾಸ ಪ್ರಾರಂಭವಾಗುವುದಕ್ಕೂ ಮುನ್ನ ಚಿಂಗಾರಿ ಚಿತ್ರ ಸೆಟ್ಟೇರಲಿದೆ. ಚಿಂಗಾರಿಯ ಬಹುತೇಕ ಚಿತ್ರೀಕರಣ ವಿದೇಶದಲ್ಲಿ ನಡೆಯಲಿದೆ ಎನ್ನುತ್ತಾರೆ ಚಿತ್ರದ ನಿರ್ದೇಶಕ ಹರ್ಷ.

'ಶಿಶಿರ' ಚಿತ್ರದ ನಿರ್ಮಾಪಕ ಡಿ ಮಹದೇವ್ ಅವರು ನಿರ್ಮಿಸುತ್ತಿರುವ ಈ ಚಿತ್ರಕ್ಕೆ ಹರಿಕೃಷ್ಣ ಅವರ ಸಂಗೀತ ನಿರ್ದೇಶನವಿದೆ. ಚಿಂಗಾರಿ ಚಿತ್ರದ ಬುಲ್ ಬುಲ್ ಯಾರು ಎಂಬುದು ಸದ್ಯಕ್ಕೆ ಸಸ್ಪೆನ್ಸಾಗಿದೆ. ಚಿತ್ರದ ಉಳಿದ ತಾರಾಗಣ ಆಯ್ಕೆ ಪ್ರಕ್ರಿಯೆ ಪ್ರಗತಿಯಲ್ಲಿದೆ. ದರ್ಶನ್ ಅವರ ಕಾಲ್ ಶೀಟ್ ಸಿಕ್ಕಿರುವುದಕ್ಕೆ ನಿರ್ದೇಶಕ ಹರ್ಷ ಸಂತಸ ವ್ಯಕ್ತಪಡಿಸಿದ್ದಾರೆ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada