»   » ಬಿಪಶಾ ಬಸು ಜೀವ ಉಳಿಸಿದ ಗಾಯತ್ರಿ ಮಂತ್ರ

ಬಿಪಶಾ ಬಸು ಜೀವ ಉಳಿಸಿದ ಗಾಯತ್ರಿ ಮಂತ್ರ

Posted By:
Subscribe to Filmibeat Kannada

ಬಾಲಿವುಡ್ ನ ಬಟ್ಟಲುಗಣ್ಣಿನ ಬೆಡಗಿ ಬಿಪಶಾ ಬಸು ಜೀವವನ್ನು ಗಾಯತ್ರಿ ಮಂತ್ರ ಉಳಿಸಿದೆ! ಆಕೆ ಭಯಬೀತರಾದಾಗ ಏನು ಮಾಡುತ್ತಾರೆ ಗೊತ್ತೆ? ಅದರಲ್ಲೂ ಮುಖ್ಯವಾಗಿ ವಿಮಾನ ಪ್ರಯಾಣ ಅಂದ್ರೆ ಆಕೆಗೆ ಹೃದಯ ಢವ ಢವ ಎನ್ನುತ್ತಂತೆ. ಅಂತಹ ಸಂದರ್ಭದಲ್ಲಿ ಆಕೆ ಗಾಯತ್ರಿ ಮಂತ್ರವನ್ನು ಪಠಿಸಿ ಭಯದಿಂದ ಮುಕ್ತನಾಗಲು ಪ್ರಯತ್ನಿಸುತ್ತೇನೆ ಎಂದು ತಿಳಿಸಿದ್ದಾರೆ.

ಬುಧವಾರ ಆಕೆ ಡಿಯುನಿಂದ ಮುಂಬೈಗೆ ಸಣ್ಣ ವಿಮಾನದಲ್ಲಿ ಪ್ರಯಾಣ ಬೆಳೆಸುವ ಸಂದರ್ಭ ಒದಗಿಬಂತು. ಆಕೆಗೆ ಕೈಕಾಲು ಆಡದ ಪರಿಸ್ಥಿತಿ ಉಂಟಾಯಿತಂತೆ. ಅಜಯ್ ದೇವಗನ್ ಕಂಪನಿ ಕೊಡುವುದಾಗಿ ಹೇಳಿ ವಿಮಾನ ಹತ್ತಿದರಂತೆ. ಆಗಲೂ ಆಕೆಯ ಭಯದಿಂದ ವಿಮುಕ್ತರಾಗಲಿಲ್ಲವಂತೆ. ಕಡೆಗೆ ಆಕೆ ಗಾಯತ್ರಿ ಮಂತ್ರಕ್ಕೆ ಶರಣಾಗಿದ್ದಾರೆ.

ಕಳೆದ ಒಂಭತ್ತು ವರ್ಷಗಳಿಂದ ಈ ರೀತಿಯ ಸಣ್ಣ ವಿಮಾನಗಳಲ್ಲಿ ಪ್ರಯಾಣಿಸುವುದನ್ನು ನಾನು ಬಿಟ್ಟಿದ್ದೇನೆ. ಕಾರಣ ಜೀವ ಭಯ. ಕೇವಲ ಆರು ಆಸನಗಳುಳ್ಳ ಆ ವಿಮಾನವನ್ನು ಹತ್ತಿ ಕುಳಿತ ಬಳಿಕ ನನಗೆ ತಕ್ಷಣಕ್ಕೆ ಗಾಯತ್ರಿ ಮಂತ್ರ ಜ್ಞಾಪಕಕ್ಕೆ ಬಂತು. ವಿಮಾನ ಲ್ಯಾಂಡ್ ಆಗುವವರೆಗೂ ಗಾಯತ್ರಿ ಮಂತ್ರ ಪಠಿಸುತ್ತಲೇ ಇದ್ದೆ. ಒಟ್ಟು 3,000 ಬಾರಿ ಗಾಯತ್ರಿ ಮಂತ್ರ ಪಠಣೆ ಮಾಡಿದ್ದಾಗಿ ಆಕೆ ತಿಳಿಸಿದ್ದಾರೆ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada