For Quick Alerts
  ALLOW NOTIFICATIONS  
  For Daily Alerts

  ಅಕ್ಟೋಬರ್ 14ಕ್ಕೆ ಪುನೀತ್ ರಾಜ್ ಕುಮಾರ್ ಜಾಕಿ

  By Rajendra
  |

  ಪುನೀತ್ ರಾಜ್ ಕುಮಾರ್ ಅಭಿನಯದ ಬಹುನಿರೀಕ್ಷಿತ 'ಜಾಕಿ' ಚಿತ್ರ ಅಕ್ಟೋಬರ್ 15ಕ್ಕೆ ಬದಲಾಗಿ ಅಕ್ಟೋಬರ್ 14(ಗುರುವಾರ)ರಂದೇ ತೆರೆಕಾಣುತ್ತಿದೆ. ಡಾ.ರಾಜ್ ಕುಟುಂಬದ ಪೂರ್ಣಿಮಾ ಎಂಟರ್‌ಪ್ರೈಸಸ್ ನಿರ್ಮಾಣದ 78ನೇ ಚಿತ್ರ ಇದಾಗಿದೆ.

  ಈ ಚಿತ್ರದ ಬಗ್ಗೆ ಈಗಾಗಲೆ ಸಾಕಷ್ಟು ಕುತೂಹಲ ಮನೆಮಾಡಿದೆ. ಚಿತ್ರದ ಹಾಡುಗಳು ಜನಪ್ರಿಯವಾಗಿದ್ದು ಪುನೀತ್ ಅಭಿಮಾನಿಗಳು ಕಾತುರದಿಂದ'ಜಾಕಿ'ಗಾಗಿ ಎದುರು ನೋಡುವಂತಾಗಿದೆ. ಪ್ರಾದೇಶಿಕ ಸೆನ್ಸಾರ್ ಮಂಡಳಿಯು ಯಾವುದೆ ಕತ್ತರಿ ಪ್ರಯೋಗ ಮಾಡದೆ ಚಿತ್ರಕ್ಕೆ U/A ಪ್ರಮಾಣ ಪತ್ರ ನೀಡಿದೆ.

  ವರನಟ ಡಾ.ರಾಜ್ ಕುಮಾರ್ ಅವರ ಬಹುತೇಕ ಚಿತ್ರಗಳು ತೆರೆಕಂಡಿದ್ದು ಗುರುವಾರ. ನಾಡಹಬ್ಬ ದಸರಾ ಸಡಗರ, ಸಂಭ್ರಮ ರಾಜ್ಯದೆಲ್ಲೆಡೆ ಮನೆಮಾಡಿದೆ. ಈ ಸಂದರ್ಭದಲ್ಲಿ 'ಜಾಕಿ' ತೆರೆಗೆ ಅಪ್ಪಳಿಸಿ ಪ್ರೇಕ್ಷಕರನ್ನು ಸಂಭ್ರಮವನ್ನು ಇಮ್ಮಡಿಸಲಿದೆ. ದುನಿಯಾ ಸೂರಿ ನಿರ್ದೇಶನದ ಈ ಚಿತ್ರ ಅವರ ವೃತ್ತಿ ಜೀವನದಲ್ಲಿ ಮಹತ್ವಾಕಾಂಕ್ಷಿ ಚಿತ್ರ ಎನ್ನಿಸಿದೆ.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X