»   » 'ಯಕ್ಷ' ಚಿತ್ರದಲ್ಲಿ ಕೋಮಲ್

'ಯಕ್ಷ' ಚಿತ್ರದಲ್ಲಿ ಕೋಮಲ್

Posted By:
Subscribe to Filmibeat Kannada

ತಮ್ಮ ಮನೋಜ್ಞ ಅಭಿನಯದಿಂದ ಅಭಿಮಾನಿಗಳ ಮನ ಗೆದ್ದಿರುವ ನಟ ಕೋಮಲ್. ಇವರಿದ್ದೆಡೆ ಹಾಸ್ಯದ ಹೊಳೆ. ಕನ್ನಡ ಚಿತ್ರರಂಗದ ಬೇಡಿಕೆ ನಟರಲ್ಲೊಬ್ಬರಾಗಿರುವ ಕೋಮಲ್ 'ಯಕ್ಷ' ಚಿತ್ರದಲ್ಲಿ ಅಭಿನಯಿಸಿದ್ದಾರೆ. ಇವರ ಅಭಿನಯದಲ್ಲಿ ಮೂಡಿ ಬಂದ ಹಾಸ್ಯ ಸನ್ನಿವೇಶಗಳನ್ನು ನಿರ್ದೇಶಕ ರಮೇಶ್‌ಭಾಗವತ್ ಬೆಂಗಳೂರಿನಲ್ಲಿ ಚಿತ್ರೀಕರಿಸಿಕೊಂಡಿದ್ದಾರೆ.

ಮೇಲಿನ ದೃಶ್ಯವನ್ನು ಚಿತ್ರೀಕರಿಸಿಕೊಳ್ಳುವುದರೊಂದಿಗೆ ನಿರ್ದೇಶಕರು ಮಾತಿನ ಭಾಗದ ಚಿತ್ರೀಕರಣವನ್ನು ಪೂರ್ಣಗೊಳ್ಳಿಸಿದ್ದಾರೆ. ಚಿತ್ರಕ್ಕೆ ಎರಡು ಹಾಡು ಹಾಗೂ ಎರಡು ಸಾಹಸ ಸನ್ನಿವೇಶಗಳ ಚಿತ್ರೀಕರಣ ಬಾಕಿಯಿದ್ದು, ಹಾಡಿನ ಚಿತ್ರೀಕರಣಕ್ಕಾಗಿ ಚಿತ್ರತಂಡ ಮುಂದಿನವಾರ ಕೇರಳಕ್ಕೆ ಪ್ರಯಾಣ ಬೆಳಸಲಿದೆ ಎಂದು ರಮೇಶ್‌ಭಾಗವತ್ ತಿಳಿಸಿದ್ದಾರೆ.ಯೋಗೀಶ್ ನಾಯಕನಾಗಿ ನಟಿಸುತ್ತಿರುವ ಈ ಚಿತ್ರವನ್ನು ಶ್ಯಾಮಿ ಅಸೋಸೆಟ್ಸ್ ಲಾಂಛನದಲ್ಲಿ ಟಿ.ಪಿ.ಸಿದ್ದರಾಜು ನಿರ್ಮಿಸುತ್ತಿದ್ದಾರೆ. ಚಿತ್ರಕ್ಕೆ ನಿರ್ದೇಶಕರೇ ಕಥೆ, ಚಿತ್ರಕಥೆ ಬರೆದಿದ್ದಾರೆ.

ಅನುಪ್‌ಸೀಳಿನ್ ಸಂಗೀತ, ಚಂದ್ರಶೇಖರ್ ಛಾಯಾಗ್ರಹಣ, ದೀಪು ಎಸ್ ಕುಮಾರ್ ಸಂಕಲನ, ಕಲೈ, ಇಮ್ರಾನ್, ಹರ್ಷ ನೃತ್ಯ, ರವಿವರ್ಮ, ಮಾಸ್‌ಮಾದ ಸಾಹಸ, ಮಂಜುಮಾಂಡವ್ಯ ಸಂಭಾಷಣೆ ಮತ್ತು ಮಧುಗಿರಿಪ್ರಕಾಶ್ ಅವರ ನಿರ್ಮಾಣನಿರ್ವಹಣೆಯಿರುವ ಚಿತ್ರದ ತಾರಾಬಳಗದಲ್ಲಿ ಯೋಗೀಶ್, ರೂಬಿ, ನಾನಾಪಾಟೇಕರ್, ಅತುಲ್‌ಕುಲಕರ್ಣಿ, ಕೋಮಲ್, ಮಾಸ್ಟರ್ ಹಿರಣ್ಣಯ್ಯ, ಮಹೇಶ್, ಗಿರೀಶ್‌ಮಟ್ಟಣನವರ್, ಶರಣ್, ಅಂಬುಜಾಕ್ಷಿ ಮುಂತಾದವರಿದ್ದಾರೆ.

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada